ವಿದ್ಯುತ್ ಬಿಲ್ ಉಳಿಸಿ, ಸರ್ಕಾರದ ಸಬ್ಸಿಡಿಯೂ ಪಡೆಯಿರಿ.. ಈ ರೀತಿ ಅರ್ಜಿ ಹಾಕಿ

PM ಸೂರ್ಯ ಘರ್ ಯೋಜನೆಯಡಿ ಮನೆ ಮೇಲ್ಛಾವಣಿಯಲ್ಲಿ ಸೋಲಾರ್ ಅಳವಡಿಸಿದರೆ ₹78,000ವರೆಗೆ ಸಬ್ಸಿಡಿ ಲಭ್ಯ. ತಿಂಗಳಿಗೆ 300 ಯೂನಿಟ್ ಉಚಿತ ವಿದ್ಯುತ್ ಹಾಗೂ ವಿದ್ಯುತ್ ಬಿಲ್ ಉಳಿತಾಯದ ಅವಕಾಶವೂ ಸಿಗಲಿದೆ.

ವಿದ್ಯುತ್ ಬಿಲ್‌ ಕಡಿಮೆ ಮಾಡಬೇಕು ಮತ್ತು ಪರಿಸರ ಸ್ನೇಹಿ ವಿದ್ಯುತ್ ಬಳಸಬೇಕು ಎನ್ನುವವರಿಗೆ ಕೇಂದ್ರ ಸರ್ಕಾರದ PM ಸೂರ್ಯ ಘರ್: ಮುಫ್ತ್ ಬಿಜ್ಲಿ ಯೋಜನೆ (PM Surya Ghar: Muft Bijli Yojana) ಉತ್ತಮ ಅವಕಾಶವಾಗಿದೆ. ಈ ಯೋಜನೆಯಡಿ ಮನೆ ಮೇಲ್ಛಾವಣಿಯಲ್ಲಿ ಸೋಲಾರ್ ಪ್ಯಾನಲ್ (Solar Panel) ಅಳವಡಿಸಿದರೆ ಸರ್ಕಾರದಿಂದ ಸಬ್ಸಿಡಿ ಸಿಗುವುದರ ಜೊತೆಗೆ ತಿಂಗಳಿಗೆ 300 ಯೂನಿಟ್‌ವರೆಗೆ ಉಚಿತ ವಿದ್ಯುತ್ ಪಡೆಯುವ ಅವಕಾಶವೂ ಇದೆ.

ಈ ಯೋಜನೆಯ ಪ್ರಮುಖ ಉದ್ದೇಶ ದೇಶದ ಒಂದು ಕೋಟಿ ಮನೆಗಳಲ್ಲಿ ರೂಫ್‌ಟಾಪ್ ಸೋಲಾರ್ ಅಳವಡಿಕೆಯನ್ನು ಉತ್ತೇಜಿಸುವುದು. ಇದರಿಂದ ಕುಟುಂಬಗಳ ವಿದ್ಯುತ್ ವೆಚ್ಚ ಕಡಿಮೆಯಾಗುವುದರ ಜೊತೆಗೆ ನವೀಕರಿಸಬಹುದಾದ ಇಂಧನ ಬಳಕೆಯೂ ಹೆಚ್ಚಾಗಲಿದೆ.

ಎಷ್ಟು ಸಬ್ಸಿಡಿ ಸಿಗಲಿದೆ?

ಸೋಲಾರ್ ವ್ಯವಸ್ಥೆಯ ಸಾಮರ್ಥ್ಯಕ್ಕೆ ಅನುಗುಣವಾಗಿ ಕೇಂದ್ರ ಸರ್ಕಾರ ನೇರವಾಗಿ ಫಲಾನುಭವಿಗಳ ಬ್ಯಾಂಕ್ ಖಾತೆಗೆ ಸಬ್ಸಿಡಿ ಜಮಾ ಮಾಡುತ್ತದೆ.

ಸಾಮಾನ್ಯ ಕುಟುಂಬಗಳಿಗೆ 2 ಅಥವಾ 3 ಕಿಲೋವ್ಯಾಟ್ ಸಾಮರ್ಥ್ಯದ ಸೋಲಾರ್ ವ್ಯವಸ್ಥೆ ಸಾಕಾಗುತ್ತದೆ.

ಯೋಜನೆಯ ಲಾಭಗಳೇನು?

ಸೋಲಾರ್ ಅಳವಡಿಸಿದ ಬಳಿಕ ವಿದ್ಯುತ್ ಉತ್ಪಾದನೆಯಿಂದ ಮಾಸಿಕ ಬಿಲ್‌ನಲ್ಲಿ ಗಮನಾರ್ಹ ಉಳಿತಾಯವಾಗುತ್ತದೆ. ಬಳಕೆಯ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್ ಅನ್ನು BESCOM, MESCOM, HESCOM ಸೇರಿದಂತೆ ಸ್ಥಳೀಯ ವಿದ್ಯುತ್ ವಿತರಣಾ ಸಂಸ್ಥೆಗಳ ಗ್ರಿಡ್‌ಗೆ ಮಾರಾಟ ಮಾಡಿ ಹೆಚ್ಚುವರಿ ಆದಾಯ ಗಳಿಸಬಹುದಾಗಿದೆ.

ಇದಲ್ಲದೆ, ಸೋಲಾರ್ ವ್ಯವಸ್ಥೆ ಅಳವಡಿಸಲು ಬ್ಯಾಂಕ್‌ಗಳ ಮೂಲಕ ಕಡಿಮೆ ಬಡ್ಡಿದರದಲ್ಲಿ ಅಡಮಾನ ರಹಿತ ಸಾಲ ಸೌಲಭ್ಯವೂ ಲಭ್ಯವಿದೆ.

ಯಾರು ಅರ್ಜಿ ಸಲ್ಲಿಸಬಹುದು?

ಈ ಯೋಜನೆಯ ಲಾಭ ಪಡೆಯಲು ಅರ್ಜಿದಾರರು ಭಾರತದ ನಾಗರಿಕರಾಗಿರಬೇಕು. ಸ್ವಂತ ಮನೆ ಹಾಗೂ ಸೋಲಾರ್ ಅಳವಡಿಸಲು ಸೂಕ್ತವಾದ ಮೇಲ್ಛಾವಣಿ ಇರಬೇಕು. ಮನೆಗೆ ವಿದ್ಯುತ್ ಸಂಪರ್ಕ ಇರಬೇಕಿದ್ದು, ಈ ಹಿಂದೆ ಇದೇ ಉದ್ದೇಶಕ್ಕೆ ಸರ್ಕಾರದ ಸಬ್ಸಿಡಿ ಪಡೆದಿರಬಾರದು.

ಅರ್ಜಿ ಸಲ್ಲಿಸುವ ವಿಧಾನ

ಈ ಯೋಜನೆಗೆ ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

Exit mobile version