PM-SYM Yojana: ಈ ಯೋಜನೆಯಡಿ ಪ್ರತೀ ತಿಂಗಳು 3000 ರೂ.. : ಪುರುಷರಿಗೂ ಸಿಗುತ್ತೆ ಹಣ

PM-SYM Yojana : ಗೃಹಲಕ್ಷ್ಮೀ ಯೋಜನೆಯಡಿ ಗೃಹಿಣಿಯರ ಬ್ಯಾಂಕ್‌ ಖಾತೆಗೆ ಪ್ರತೀ ತಿಂಗಳು 2000 ರೂಪಾಯಿ ಜಮೆ ಮಾಡುತ್ತಿದೆ. ಆದರೆ ಗೃಹಲಕ್ಷ್ಮೀ ಯೋಜನೆಯನ್ನೇ ಮೀರಿಸುವ ಯೋಜನೆಯೊಂದನ್ನು ಕೇಂದ್ರ ಸರಕಾರ ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತೀ ತಿಂಗಳು 3000 ರೂಪಾಯಿ ದೊರೆಯಲಿದೆ. ಮಹಿಳೆಯರಿಗಷ್ಟೇ ಅಲ್ಲಾ ಪುರಷರಿಗೂ ಹಣ ಸಿಗೋದು ಪಕ್ಕಾ.

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರಕಾರ ‘ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆ (Pradhan Mantri Shram Yogi Maandhan Yojana)’ಯನ್ನು ಜಾರಿಗೆ ತಂದಿದೆ. ಈ ಯೋಜನೆಯ ಮೂಲಕ ಪ್ರತಿಯೊಬ್ಬರೂ ಕೂಡ ಪ್ರತೀ ತಿಂಗಳು 3000 ರೂಪಾಯಿ ಪಡೆಯಬಹುದಾಗಿದೆ. ಪುರುಷರೂ ಕೂಡ ಈ ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.

ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರು, ವ್ಯಾಪಾರಿಗಳು, ವಾಹನಗಳ ಚಾಲಕರು, ರಿಕ್ಷಾ ಚಾಲಕರು, ಬೀಡಿ ಕಾರ್ಮಿಕರು, ಕೃಷಿ ಕಾರ್ಮಿಕರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಈ ಯೋಜನೆಯನ್ನು ಜಾರಿಗೆ ತಂದಿದೆ. 60 ವರ್ಷದ ಕಳೆದ ನಂತರ ವೃದ್ದಾಪ್ಯದಲ್ಲಿ ಯಾರೂ ಇತರರಿಗೆ ಆಶ್ರಯಿಸುವ ಅಗತ್ಯ ಇನ್ಮುಂದೆ ಇರೋದಿಲ್ಲ.

ಕೇಂದ್ರ ಸರಕಾರ ಈ ಯೋಜನೆಯನ್ನು ಈಗಾಗಲೇ ಜಾರಿಗೆ ತಂದಿದ್ದು, ಲಕ್ಷಾಂತರ ಮಂದಿ ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್ ಧನ್ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ಕೇಂದ್ರ ಸರಕಾರ ಫೆಬ್ರವರಿ 2019 ರಲ್ಲಿ ಈ ಯೋಜನೆಯನ್ನು ಜಾರಿಗೆ ತಂದಿದೆ.

ಇದೊಂದು ಪಿಂಚಣಿ ಯೋಜನೆಯಾಗಿದ್ದು, ಈ ಯೋಜನೆಯ ಪ್ರಯೋಜನ ಪಡೆಯಲು 60 ವರ್ಷ ವಯಸ್ಸಾಗಿರಬೇಕು. 60 ವರ್ಷ ಕಳೆದ ನಂತರದಲ್ಲಿ ಪ್ರತೀ ತಿಂಗಳು 3000 ರೂಪಾಯಿ ನಿಮ್ಮ ಬ್ಯಾಂಕ್‌ ಖಾತೆಗೆ ಜಮೆ ಆಗಲಿದೆ. ಕಾರ್ಮಿಕರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವುದು ಈ ಯೋಜನೆಯ ಉದ್ದೇಶವಾಗಿದೆ. ದೇಶಾದ್ಯಂತ 46,29,664ಕ್ಕೂ ಅಧಿಕ ಮಂದಿ ಈ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ.

Also Read : Ration Card ekyc : ಜೂನ್‌ 30 ಕೊನೆಯ ದಿನ : ಈ ಕೆಲಸ ಮಾಡದಿದ್ರೆ ರದ್ದಾಗುತ್ತೆ ನಿಮ್ಮ ರೇಷನ್‌ ಕಾರ್ಡ್‌

PM-SYMಗೆ ಅರ್ಜಿ ಸಲ್ಲಿಸುವುದು ಹೇಗೆ ? ಯಾರು ಯೋಜನೆಗೆ ಅರ್ಹರು ?

Also Read : Lakhpati Didi Yojana : ಬಡ್ಡಿಯಿಲ್ಲದೇ ಮಹಿಳೆಯರಿಗೆ 5 ಲಕ್ಷ ರೂ ಸಾಲ : ಕೇಂದ್ರ ಸರಕಾರದ ಹೊಸ ಯೋಜನೆ ಜಾರಿ

ಯೋಜನೆ ಸೇರ್ಪಡೆಗೆ ಅಗತ್ಯ ದಾಖಲೆಗಳು:

ಯೋಜನೆಯ ಅಧಿಕೃತ ವೆಬ್‌ಸೈಟ್ https://maandhan.in/ ಗೆ ಭೇಟಿ ನೀಡಿ.

PM-SYM Yojana- Pradhan Mantri Shram Yogi Maandhan Yojana Under this scheme Rs 3000 will be given every month Men will get money in Kannada News

Exit mobile version