ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY)ಗೆ ಯಾರೆಲ್ಲಾ ಅರ್ಜಿ ಸಲ್ಲಿಸಬಹುದು ?

Pradhan Mantri Awas Yojana – PMAY: ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ದೇಶದ ಎಲ್ಲ ಅರ್ಹ ಕುಟುಂಬಗಳಿಗೆ, ವಿಶೇಷವಾಗಿ ಆರ್ಥಿಕವಾಗಿ ದುರ್ಬಲ ವರ್ಗದವರಿಗೆ, ಕೈಗೆಟುಕುವ ಬೆಲೆಯಲ್ಲಿ ವಸತಿ ಸೌಲಭ್ಯವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಪ್ರಧಾನಿ ನರೇಂದ್ರ ಅವರ ನೇತೃತ್ವದಲ್ಲಿ 2015 ರಲ್ಲಿ ಪ್ರತೀ ಭಾರತೀಯರಿಗೂ ವಸತಿ ಒದಗಿಸುವ ಉದ್ದೇಶದಿಂದ ಪ್ರಾರಂಭಿಸಲಾಯಿತು.

PMAY – ನಗರ (PMAY-U): ಇದು ನಗರ ಪ್ರದೇಶಗಳಲ್ಲಿನ ವಸತಿ ಕೊರತೆಯನ್ನು ನಿಭಾಯಿಸುವತ್ತ ಗಮನಹರಿಸುತ್ತದೆ, ವಿಶೇಷವಾಗಿ ಕೊಳೆಗೇರಿ ನಿವಾಸಿಗಳು ಮತ್ತು ಆರ್ಥಿಕವಾಗಿ ದುರ್ಬಲ ವರ್ಗದ (EWS), ಕಡಿಮೆ ಆದಾಯದ ಗುಂಪು (LIG) ಮತ್ತು ಮಧ್ಯಮ ಆದಾಯದ ಗುಂಪು (MIG) ಗಳ ಜನರಿಗೆ ವಸತಿ ಒದಗಿಸುವುದನ್ನು ಇದು ಒಳಗೊಂಡಿದೆ.

PMAY – ಗ್ರಾಮೀಣ (PMAY-G): ಇದು ಗ್ರಾಮೀಣ ಪ್ರದೇಶಗಳಲ್ಲಿ ವಸತಿ ಕೊರತೆಯನ್ನು ನಿಭಾಯಿಸುವತ್ತ ಗಮನಹರಿಸುತ್ತದೆ. ಕಚ್ಚಾ ಮನೆಗಳಲ್ಲಿ ವಾಸಿಸುವ ಅಥವಾ ಯಾವುದೇ ಮನೆ ಇಲ್ಲದ ಗ್ರಾಮೀಣ ಬಡವರಿಗೆ ಇದು ಆರ್ಥಿಕ ನೆರವು ನೀಡುತ್ತದೆ.

Pradhan Mantri Awas Yojana PMAY ಆರ್ಥಿಕ ನೆರವು ಪಡೆಯುವುದು ಹೇಗೆ ?

PMAY- ದೇಶದ ಗ್ರಾಮೀಣ ನಿವಾಸಿಗಳಿಗೆ ಅವರ ಆರ್ಥಿಕ ಸ್ಥಿತಿಗತಿ , ಪ್ರದೇಶದ ಆಧಾರದ ಮೇಲೆ 1.3 ಲಕ್ಷ ರೂಪಾಯಿಯವರೆಗೆ ಆರ್ಥಿಕ ನೆರವು ಸಿಗಲಿದೆ. ಅಷ್ಟೇ ಅಲ್ಲದೇ ಸ್ವಚ್ಛ ಭಾರತ ಮಿಷನ್‌ ಯೋಜನೆಯ ಅಡಿಯಲ್ಲಿ ಶೌಚಾಲಯದ ನಿರ್ಮಾಣಕ್ಕಾಗಿ ₹12,000 ಸಹಾಯವನ್ನೂ ಪಡೆಯಬಹುದಾಗಿದೆ.

PMAY-ನಗರ: ನಗರ ಪ್ರದೇಶದಲ್ಲಿರು ಜನರಿಗೆ ಅದ್ರಲ್ಲೂ ಆರ್ಥಿಕವಾಗಿ ಹಿಂದುಳಿದ ವರ್ಗದ ನಿವಾಸಿಗಳು ಈ ಯೋಜನೆಯ ಮೂಲಕ ಆರ್ಥಿಕ ನೆರವು ಪಡೆಯಬಹುದಾಗಿದೆ. ಈ ಯೋಜನೆಯ ಮೂಲಕ ಮನೆ ನಿರ್ಮಾಣಕ್ಕಾಗಿ ಕೇಂದ್ರ ಸರಕಾರದ ವತಿಯಿಂದ ₹1.5 ಲಕ್ಷ ನೆರವು ಪಡೆಯಬಹುದಾಗಿದೆ.

ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (CLSS): ಈ ಯೋಜನೆಯು ಮನೆ ಖರೀದಿಸಲು ಅಥವಾ ನಿರ್ಮಿಸಲು ಸಾಲ ಪಡೆಯುವವರಿಗೆ ಬಡ್ಡಿ ಸಬ್ಸಿಡಿ ನೀಡುತ್ತದೆ. ಇದು ಆರ್ಥಿಕವಾಗಿ ದುರ್ಬಲ ವರ್ಗ, ಕಡಿಮೆ ಆದಾಯದ ಗುಂಪು ಮತ್ತು ಮಧ್ಯಮ ಆದಾಯದ ಗುಂಪುಗಳಿಗೆ ಅನ್ವಯಿಸುತ್ತದೆ.

ಕೊಳೆಗೇರಿ ಪುನರಾಭಿವೃದ್ಧಿ: ನಗರ ಪ್ರದೇಶಗಳಲ್ಲಿ ಕೊಳೆಗೇರಿಗಳನ್ನು ಸುಧಾರಿಸಿ, ಅಲ್ಲಿನ ನಿವಾಸಿಗಳಿಗೆ ಉತ್ತಮ ವಸತಿ ಸೌಲಭ್ಯಗಳನ್ನು ಒದಗಿಸುತ್ತದೆ.

Pradhan Mantri Awas Yojana – PMAY ಯೋಜನೆಗೆ ಯಾರೆಲ್ಲಾ ಅರ್ಹರು ?

ಪ್ರಧಾನ ಮಂತ್ರಿ ಆವಾಸ್‌ ಯೋಜನೆಗೆ ಅರ್ಜಿ ಸಲ್ಲಿಸಲು, ಕೆಲವು ಪ್ರಮುಖ ಅರ್ಹತಾ ಮಾನದಂಡಗಳಿವೆ. ಅವುಗಳು ಯಾವುದು ಎಂದು ನೋಡೋದಾದ್ರೆ,

ಸ್ವಂತ ಮನೆ ಇರಬಾರು ಅರ್ಜಿದಾರರು ಅಥವಾ ಅವರ ಕುಟುಂಬ ಸದಸ್ಯರು (ಪತಿ, ಪತ್ನಿ ಮತ್ತು ಅವಿವಾಹಿತ ಮಕ್ಕಳು) ಭಾರತದಲ್ಲಿ ಯಾವುದೇ ಭಾಗದಲ್ಲಿ ಸ್ವಂತ ಪಕ್ಕಾ ಮನೆಯನ್ನು ಹೊಂದಿರಬಾರದು.

ಆದಾಯದ ಮಾನದಂಡ:
EWS (ಆರ್ಥಿಕವಾಗಿ ದುರ್ಬಲ ವರ್ಗ): ಮೊದಲನೆಯದಾಗಿ ವಾರ್ಷಿಕ ಆದಾಯ 3 ಲಕ್ಷದವರೆಗೆ
LIG (ಕಡಿಮೆ ಆದಾಯದ ಗುಂಪು): ವಾರ್ಷಿಕ ಆದಾಯ ₹3 ಲಕ್ಷದಿಂದ ₹6 ಲಕ್ಷದ ನಡುವೆ.
MIG-I (ಮಧ್ಯಮ ಆದಾಯದ ಗುಂಪು-I): ವಾರ್ಷಿಕ ಆದಾಯ ₹6 ಲಕ್ಷದಿಂದ ₹12 ಲಕ್ಷದ ನಡುವೆ.
MIG-II (ಮಧ್ಯಮ ಆದಾಯದ ಗುಂಪು-II): ವಾರ್ಷಿಕ ಆದಾಯ ₹12 ಲಕ್ಷದಿಂದ ₹18 ಲಕ್ಷದ ನಡುವೆ.

PMAY ಯೋಜನೆಗೆ ಅರ್ಜಿ ಸಲ್ಲಿಸುವುದು ಹೇಗೆ ?

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?

ಇದನ್ನೂ ಓದಿ : ಗೃಹಲಕ್ಷ್ಮೀ ಯಜಮಾನಿಯರಿಗೆ ಭರ್ಜರಿ ಗುಡ್‌ ನ್ಯೂಸ್‌

ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸುವುದು ಹೇಗೆ ?

ಇದನ್ನೂ ಓದಿ : ಪ್ರಧಾನ ಮಂತ್ರಿ ಕಿಸಾನ್ ಯೋಜನೆ : PM Kissan 20ನೇ ಕಂತಿನ ಹಣ ಪಡೆಯಲು ಈ ಕೆಲಸ ಕಡ್ಡಾಯ

ಅರ್ಜಿ ಸಲ್ಲಿಸಲು ಬೇಕಾದ ಅಗತ್ಯ ದಾಖಲೆಗಳು

ಪ್ರಧಾನ ಮಂತ್ರಿ ಆವಾಸ್ ಯೋಜನೆಯು ಲಕ್ಷಾಂತರ ಭಾರತೀಯರಿಗೆ ತಮ್ಮದೇ ಆದ ಮನೆಯ ಕನಸನ್ನು ನನಸಾಗಿಸಲು ಸಹಾಯ ಮಾಡುತ್ತಿದೆ. ನೀವು ಈ ಯೋಜನೆಗೆ ಅರ್ಹರಾಗಿದ್ದರೆ, ಅರ್ಜಿ ಸಲ್ಲಿಸಲು ಹಿಂಜರಿಯಬೇಡಿ.

Who can apply for Pradhan Mantri Awas Yojana (PMAY) in Kannada News

Exit mobile version