Pavithra Gowda : ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪವಿತ್ರಾ ಗೌಡ : ದೋಷಾರೋಪ ಕೇಳುತ್ತಿದ್ದಂತೆಯೇ ಹೊಸ ನಡೆ

ರೇಣುಕಾಸ್ವಾಮಿ ಕೊಲೆ ಕೇಸ್​ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾಗೌಡ (Pavithra Gowda) ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಪ್ರಕರಣ ಎ 1 ಆರೋಪಿ ಎನಿಸಿರುವ ಪವಿತ್ರಾ ಗೌಡ ಸೆಷನ್ಸ್​ಕೋರ್ಟ್​ನಲ್ಲಿ ತಮ್ಮ ವಿರುದ್ಧದ ದೋಷಾರೋಪ ಪಟ್ಟಿಯನ್ನು ಆಲಿಸಿದ ಬಳಿಕ ಸುಪ್ರೀಂ ಕೋರ್ಟ್‌ನಲ್ಲಿ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ.

ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಿದ ಸುಪ್ರೀಂ ಕೋರ್ಟ್‌ನ ಆದೇಶವನ್ನು ಮತ್ತೊಮ್ಮೆ ಪರಿಶೀಲಿಸುವಂತೆ ಮನವಿ ಸಲ್ಲಿಸಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪವಿತ್ರಾ ಗೌಡ ಎ1 ಆರೋಪಿಯಾಗಿದ್ದಾರೆ.

ನಟ ದರ್ಶನ್​ ಎ 2 ಆರೋಪಿ. ಇನ್ನುಳಿದಂತೆ ಮಿಕ್ಕೆಲ್ಲ ಆರೋಪಿಗಳು ಇಂದಿಗೂ ಜೈಲೂಟ ತಿನ್ನುತ್ತಿದ್ದಾರೆ. ಸೆಷನ್ಸ್​ ಕೋರ್ಟ್ನಲ್ಲಿ ಈ ಎಲ್ಲಾ ಆರೋಪಿಗಳ ವಿರುದ್ಧ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಕೆಯಾಗಿದೆ.

ದೋಷಾರೋಪ ಪಟ್ಟಿಯಲ್ಲಿ ತಮ್ಮ ಮೇಲೆ ಬಂದಿರುವ ಎಲ್ಲಾ ಆರೋಪಿಗಳನ್ನು ದರ್ಶನ್​, ಪವಿತ್ರಾ ಗೌಡ ಸೇರಿದಂತೆ ಎಲ್ಲಾ ಆರೋಪಿಗಳು ನಿರಾಕರಿಸಿದ್ದಾರೆ. ಈ ಬೆನ್ನಲ್ಲೇ ಪವಿತ್ರಾಗೌಡ ಹೈಕೋರ್ಟ್ ನೀಡಿದ್ದ ಜಾಮೀನನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಪುನರ್​ ಪರಿಶೀಲಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿ : ಮಲ್ಲಮ್ಮರನ್ನು ಹೊರಹಾಕಿ ಬಿಗ್‌ಬಾಸ್‌ ತಪ್ಪು ಮಾಡ್ತಾ ?

ಈ ಸಂಬಂಧ ಸುಪ್ರೀಂ ಕೋರ್ಟ್ ನಾಳೆ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದ್ದು ಮತ್ತೊಮ್ಮೆ ಪವಿತ್ರಾ ಗೌಡ ಭವಿಷ್ಯ ನಿರ್ಣಯವಾಗಲಿದೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕಳೆದ ವರ್ಷ ಅಕ್ಟೋಬರ್​​ನಲ್ಲಿ ದರ್ಶನ್​ ಹಾಗೂ ಪವಿತ್ರಾ ಸೇರಿದಂತೆ ಕೊಲೆ ಆರೋಪಿಗಳ ಗ್ಯಾಂಗ್​ಗೆ ಇಂಟರಿಮ್​ ಬೇಲ್​ ನೀಡಲಾಗಿತ್ತು.

ಇದಾದ ಬಳಿಕ ಡಿಸೆಂಬರ್​ನಲ್ಲಿ ರೆಗ್ಯೂಲರ್​ ಬೇಲ್​ ದೊರಕಿತ್ತು. ಆದರೆ ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಿತ್ತು. ಸುಪ್ರೀಂ ಕೋರ್ಟ್ ಎಲ್ಲಾ ಕೊಲೆ ಆರೋಪಿಗಳ ಜಾಮೀನು ರದ್ದು ಮಾಡಿತ್ತು.

ಇದನ್ನೂ ಓದಿ : ಆಟೋ ಚಾಲಕರಿಗೆ ರಚಿತಾ ರಾಮ್‌ ಬ್ರ್ಯಾಂಡ್‌ ಅಂಬಾಸಿಡರ್‌

ಇದಾದ ಬಳಿಕ ಎಲ್ಲಾ ಕೊಲೆ ಆರೋಪಿಗಳು ಇಂದಿನವರೆಗೂ ಜೈಲಿನಲ್ಲಿಯೇ ಇದ್ದಾರೆ. ಕೆಲ ದಿನಗಳ ಹಿಂದೆಯಷ್ಟೇ ಆರೋಪಿಗಳ ವಿರುದ್ಧ ದೋಷಾರೋಪ ಪಟ್ಟಿಯನ್ನೂ ಸಲ್ಲಿಸಲಾಗಿದೆ.

Pavithra Gowda files bail application in Supreme Court

Exit mobile version