ನವದೆಹಲಿ: ಮುಂಬರುವ 2027ರ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡದ ಮಾಜಿ ಆರಂಭಿಕ ಆಟಗಾರ ಅಭಿನವ್ ಮುಕುಂದ್ 15 ಸದಸ್ಯರ ಸಂಭಾವ್ಯ ತಂಡವನ್ನು ಪ್ರಕಟಿಸಿದ್ದಾರೆ. ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದು, ಸಂಜು ಸ್ಯಾಮ್ಸನ್ ಔಟ್ ಆಗಿದ್ದಾರೆ.
ಇಎಸ್‌ಪಿಎನ್ ಕ್ರಿಕ್‌ಇನ್ಫೋ (ESPNcricinfo) ಯೂಟ್ಯೂಬ್ ಚಾನೆಲ್‌ನಲ್ಲಿ ಅಭಿನವ್ ಮುಕುಂದ್ ಅವರು ತಮ್ಮ ತಂಡವನ್ನು ಪ್ರಕಟಿಸಿದ್ದಾರೆ. ಅನುಭವಿ ಆಟಗಾರರ ಜೊತೆಗೆ ಯುವ ಆಟಗಾರರ ಸಮತೋಲಿತ ತಂಡವನ್ನು ಪ್ರಕಟಿಸಿದ್ದಾರೆ.
ರೋಹಿತ್ ಶರ್ಮಾ ಇನ್, ಸ್ಯಾಮ್ಸನ್-ತಿಲಕ್ ಔಟ್!
ರೋಹಿತ್ ಶರ್ಮಾ ನಿವೃತ್ತಿಯ ಕುರಿತು ಚರ್ಚೆ ನಡೆದಿತ್ತು. ಆದರೆ ಇಂಗ್ಲೆಂಡ್ ವಿರುದ್ದದ ಕೊನೆಯ ಪಂದ್ಯದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ರೋಹಿತ್ ಶರ್ಮಾ ಆರ್ಭಟಿಸಿದ್ದರು. ಇದೇ ಕಾರಣದಿಂದಲೇ ಅಭಿನವ್ ಮುಕುಂದ್ ಪ್ರಕಟಿಸಿದ ತಂಡದಲ್ಲಿ ರೋಹಿತ್ ಶರ್ಮಾ ಸ್ಥಾನ ಪಡೆದಿದ್ದಾರೆ. ಆದರೆ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್ ಮತ್ತು ತಿಲಕ್ ವರ್ಮಾ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ.
ಗಿಲ್ ನಾಯಕ, ವಿರಾಟ್-ಸಿರಾಜ್‌ಗೂ ಸ್ಥಾನ
ಇಂಡಿಯಲ್ ಪ್ರೀಮಿಯರ್ ಲೀಗ್ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಪ್ರಮುಖ ಆಟಗಾರ ವಿರಾಟ್ ಕೊಹ್ಲಿ ಹಾಗೂ ವೇಗಿ ಮೊಹಮ್ಮದ್ ಸಿರಾಜ್ ಕೂಡ ಸ್ಥಾನ ಪಡೆದಿದ್ದಾರೆ. ಮಾತ್ರವಲ್ಲೇ ಸಿರಾಜ್ ವೇಗದ ಬೌಲರ್ ವಿಭಾಗದಲ್ಲಿ ಲೀಡ್ ಬೌಲರ್ ಆಗಿಯೂ ಕಾಣಿಸಿಕೊಂಡಿದ್ದಾರೆ. ಹೊಸ ಮುಖಗಳಾದ ಹರ್ಷಿತ್ ರಾಣಾ, ಗರ್ನೂರ್ ಬ್ರಾರ್ ಅವರನ್ನು ವೇಗದ ಬೌಲಿಂಗ್ ವಿಭಾಗಕ್ಕೆ ಹೆಸರಿಸಲಾಗಿದೆ. ಇನ್ನು ಭಾರತ ತಂಡದ ನಾಯಕ ಶುಭಮನ್ ಗಿಲ್ ಅವರಿಗೆ ನಾಯಕತ್ವದ ಹೊಣೆಯನ್ನು ನೀಡಲಾಗಿದೆ.
ಅಭಿನವ್ ಮುಕುಂದ್ ಆಯ್ಕೆಯ 2027ರ ವಿಶ್ವಕಪ್ ತಂಡ ಹೀಗಿದೆ:
- ಬ್ಯಾಟ್ಸ್‌ಮನ್ : ಶುಭ್ಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್.
- ವಿಕೆಟ್ ಕೀಪರ್ಗಳು: ಕೆಎಲ್ ರಾಹುಲ್, ಇಶಾನ್ ಕಿಶನ್.
- ಆಲ್ರೌಂಡರ್ಗಳು: ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್.
- ಸ್ಪಿನ್ನರ್: ಕುಲದೀಪ್ ಯಾದವ್.
- ವೇಗಿಗಳು: ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಪ್ರಸಿದ್ಧ್ ಕೃಷ್ಣ, ಹರ್ಷಿತ್ ರಾಣಾ ಮತ್ತು ಗುರ್ನೂರ್ ಬ್ರಾರ್.
ಏಕದಿನ ರಾಂಕಿಂಗ್‌ನಲ್ಲಿ ನಂ.1 ಪಟ್ಟದ ಸನಿಹದಲ್ಲಿ ಶುಭ್ಮನ್ ಗಿಲ್
ಐಸಿಸಿ ಇತ್ತೀಚಿಗೆ ಏಕದಿನ ಬ್ಯಾಟಿಂಗ್ ಶ್ರೇಯಾಂಕವನ್ನು ಪ್ರಕಟಿಸಿದೆ. ಈ ಪೈಕಿ ಭಾರತ ಕ್ರಿಕೆಟ್ ತಂಡದ ನಾಯಕ ಶುಭಮನ್ ಗಿಲ್ ಅಗ್ರಸ್ಥಾನದ ಸನಿಹದಲ್ಲಿದ್ದಾರೆ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲಿ 188 ರನ್ ಗಳಿಸಿದ ಗಿಲ್ ಅಗ್ರಸ್ಥಾನದಲ್ಲಿ ಇರುವ ನ್ಯೂಜಿಲೆಂಡ್‌ನ ಡ್ಯಾರಿಲ್ ಮಿಚೆಲ್ ಅವರಿಗಿಂತ ಒಂದು ಅಂಕ ಕಡಿಮೆ ಹೊಂದಿದ್ದಾರೆ.
ಡ್ಯಾರಿಲ್ ಮಿಚೆಲ್ (802 ಪಾಯಿಂಟ್ಸ್) ಹೊಂದಿದ್ರೆ, ಶುಭಮನ್ ಗಿಲ್ ( 801), ವಿರಾಟ್ ಕೊಹ್ಲಿ (767) ಮತ್ತು ರೋಹಿತ್ ಶರ್ಮಾ (758) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಟಾಪ್ 5ರಲ್ಲಿ ಮೂವರು ಭಾರತೀಯರು ಸ್ಥಾನ ಪಡೆದಿರುವುದು ವಿಶೇಷ.
2027 ODI World Cup Ex- india Cricket picks India Squad Rohit Sharma in, Sanju samson and Tilak Varma Out
