Kundapura Rachita Hatwar: ಬಿಸಿಸಿಐ ವನಿತೆಯರ ಅಂಡರ್-19 ದೇಶಿ ಏಕದಿನ ಕ್ರಿಕೆಟ್ ಟೂರ್ನಿಗೆ ಕುಂದಾಪುರದ ರಚಿತಾ ಹತ್ವಾರ್ ಕರ್ನಾಟಕ ತಂಡದ ನಾಯಕಿ

ಉಡುಪಿ : Kundapura Rachita Hatwar: ಬಿಸಿಸಿಐ(BCCI) ವತಿಯಿಂದ ಡಿಸೆಂಬರ್‌ 13ರಿಂದ 21ರ ವರೆಗೆ ಹೈದರಾಬಾದ್‌ನಲ್ಲಿ ನಡೆಯಲಿರುವ ವನಿತೆಯರ ಅಂಡರ್‌-19 ದೇಶಿ ಏಕದಿನ ಕ್ರಿಕೆಟ್‌ ಟೂರ್ನಿಗೆ ಕುಂದಾಪುರದ ರಚಿತಾ ಹತ್ವಾರ್ ಕರ್ನಾಟಕ ತಂಡದ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಇದೇ ಮೊದಲ ಬಾರಿ ರಾಜ್ಯ ತಂಡವನ್ನು ರಚಿತಾ ಹತ್ವಾರ್ ಮುನ್ನಡೆಸಲಿದ್ದಾರೆ.

16 ವರ್ಷದ ರಚಿತಾ ವಿಕೆಟ್‌ ಕೀಪಿಂಗ್ ಜವಾಬ್ದಾರಿಯನ್ನೂ ನಿರ್ವಹಿಸಲಿದ್ದಾರೆ. ಕಶ್ವಿ ಕಂಡಿಕುಪ್ಪ ಉಪ ನಾಯಕಿ, ಶ್ರೇಯಾ ಸಿ. ಎರಡನೇ ವಿಕೆಟ್ ಕೀಪರ್ ಆಗಿದ್ದಾರೆ. ಪ್ರಸ್ತುತ ಸಾಗುತ್ತಿರುವ ಅಂಡರ್-23 ದೇಶಿ ಟಿ20 ಟೂರ್ನಿಯಲ್ಲಿ ರಚಿತಾ ಆರಂಭಿಕ ಆಟಗಾರ್ತಿಯಾಗಿ ಉತ್ತಮ ಪ್ರದರ್ಶನ ನೀಡುತ್ತಿದ್ದು, ಹಿರಿಯರ ರಾಜ್ಯ ತಂಡದ ಸಂಭಾವ್ಯ ಆಟಗಾರ್ತಿಯರ ಪಟ್ಟಿಯಲ್ಲೂ ಸ್ಥಾನ ಪಡೆದಿದ್ದಾರೆ. ಮುಖ್ಯ ತಂಡಕ್ಕೂ ಆಯ್ಕೆಯಾಗುವ ನಿರೀಕ್ಷೆ ವ್ಯಕ್ತವಾಗಿದೆ. ರಚಿತಾಗೆ ಕರ್ನಾಟಕ ಇನ್‌ಸ್ಟಿಟ್ಯೂಟ್ ಆಫ್ ಕ್ರಿಕೆಟ್‌ನ ಮುಖ್ಯ ಕೋಚ್ ಇರ್ಫಾನ್ ಸೇಟ್ ತರಬೇತಿ ನೀಡುತ್ತಿದ್ದಾರೆ.

Also Read: Distinguished Young Researcher: ಕೀರ್ತಿ ತಂದ ಯುವ ಸಂಶೋಧಕ: ಉಡುಪಿ ಯುವಕನಿಗೆ ಇಂಗ್ಲೆಂಡ್‌ನ ಬಾತ್ ವಿಶ್ವವಿದ್ಯಾಲಯದಿಂದ ಪಿ.ಹೆಚ್.ಡಿ

ಕರ್ನಾಟಕ ಅಂಡರ್-19 ಮಹಿಳಾ ಕ್ರಿಕೆಟ್ ತಂಡ

ರಚಿತಾ ಹತ್ವಾರ್ (ನಾಯಕಿ, ವಿಕೆಟ್ ಕೀಪರ್), ಕಶ್ವಿ ಕಂಡಿಕುಪ್ಪ (ಉಪ ನಾಯಕಿ), ಲಿಯಾಂಕಾ ಶೆಟ್ಟಿ, ಶ್ರೇಯಾ ಸಿ. (ವಿ.ಕೀ.), ಕರ್ಣಿಕಾ ಕಾರ್ತಿಕ್, ದೀಕ್ಷಾ ಜೆ., ಹೊನ್ನುಶ್ರೀ, ಶ್ರೀನಿತಿ ಪಿ. ರೈ, ದೀಕ್ಷಾ ಸಿ.ಡಿ., ವಂದಿತಾ ಕೆ. ರಾವ್, ನಂದಿನಿ ಚೌಹಾಣ್, ವೇದವರ್ಷಿಣಿ, ಹರಿಣಿ ಎನ್., ರಿಮ್ಜಿಂ ಶುಕ್ಲಾ, ಅಫಿನ್ ರುಹಿ ಕೆ. ದೊಡ್ಡಮನಿ, ಜೋಯಾ ಇಮ್ತಿಯಾಜ್ ಖಾಜಿ, ಲಾವಣ್ಯ ಚಲನ್. ಕೋಚ್‌ಗಳಾಗಿ ರಾಖೀ ಗಂಗಲ್, ರೂಪಾ ಬಿ.ಎನ್. ತಂಡವನ್ನು ಮುನ್ನಡೆಸಲಿದ್ದಾರೆ.

Exit mobile version