Rohit Sharma Retirement: ರೋಹಿತ್‌ ಶರ್ಮಾ ಕ್ರಿಕೆಟ್‌ ಯುಗಾಂತ್ಯ ? ಲಾರ್ಡ್ಸ್‌ ಅಂಗಳದಲ್ಲೇ ಏಕದಿನ ಕ್ರಿಕೆಟ್‌ಗೆ ವಿದಾಯ

39 ವರ್ಷದ ರೋಹಿತ್‌ ಶರ್ಮಾ ಸದ್ಯ ಟೀಂ ಇಂಡಿಯಾದ ಹಿರಿಯ ಆಟಗಾರ. 287 ಏಕದಿನ ಪಂದ್ಯಗಳನ್ನು ಆಡಿರುವ ಹಿಟ್‌ಮ್ಯಾನ್‌ 33 ಶತಕ ಹಾಗೂ 62 ಅರ್ಧ ಶತಕದ ನೆರವಿನಿಂದ ಬರೋಬ್ಬರಿ 11,757ರನ್‌ ಬಾರಿಸಿದ್ದಾರೆ.

ಮುಂಬೈ : ಟೆಸ್ಟ್‌, ಟಿ20 ಕ್ರಿಕೆಟ್‌ಗೆ ವಿದಾಯ ಹೇಳಿರುವ ಹಿಟ್‌ಮ್ಯಾನ್‌ ರೋಹಿತ್‌ ಶರ್ಮಾ (Rohit Sharma) ಇದೀಗ ಏಕದಿನ ಕ್ರಿಕೆಟ್‌ಗೂ ಗುಡ್‌ಬೈ ಹೇಳಲಿದ್ದಾರೆ. ಇಂಗ್ಲೆಂಡ್‌ ಪ್ರವಾಸದಲ್ಲಿರುವ ರೋಹಿತ್‌ ಶರ್ಮಾ ಜುಲೈ 19ರಂದು ಲಾರ್ಡ್ಸ್‌ ಅಂಗಳದಲ್ಲಿ ನಡೆಯಲಿರುವ ಕೊನೆಯ ಪಂದ್ಯದ ವೇಳೆ ಅವರು ಏಕದಿನ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಲಿದ್ದಾರೆ ಎನ್ನಲಾಗುತ್ತಿದೆ.

2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಹಾಗೂ ವಿರಾಟ್‌ ಕೊಹ್ಲಿ ಆಡ್ತಾರೆ ಅಂತಾ ಹೇಳಲಾಗಿತ್ತು. ಆದರೆ ರೋಹಿತ್‌ ಶರ್ಮಾ ಅವರ ಕ್ರಿಕೆಟ್‌ ಬದುಕು ಇದೀಗ ಇಂಗ್ಲೆಂಡ್‌ ಸರಣಿಗೆ ಕೊನೆ ಆಗ್ತಿದೆ. ಹೀಗಾಗಿ ಮುಂಬರುವ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಆಡುವುದು ಅನುಮಾನ.

ಬಿಸಿಸಿಐ ಆಯ್ಕೆ ಸಮಿತಿ ಮುಂಬರುವ ವಿಶ್ವಕಪ್‌ನಲ್ಲಿ ರೋಹಿತ್‌ ಶರ್ಮಾ ಅವರ ಬದಲು ಯಶಸ್ವಿ ಜೈಸ್ವಾಲ್‌ ಅವರನ್ನು ಆಡಿಸಲು ಯೋಜಿಸಿದೆ. ಇಂಗ್ಲೆಂಡ್‌ ವಿರುದ್ದದ ಏಕದಿನ ಸರಣಿಗೆ ಆಯ್ಕೆಯಾಗಿದ್ದ ರೋಹಿತ್‌ ಶರ್ಮಾ ಮೊದಲ ಪಂದ್ಯದಲ್ಲಿ 11 ರನ್‌ ಬಾರಿಸಿದ್ರೆ, ಎರಡನೇ ಏಕದಿನ ಪಂದ್ಯದಲ್ಲಿ 26ರನ್‌ ಬಾರಿಸುವ ಮೂಲಕ ನಿರಾಸೆ ಮೂಡಿಸಿದ್ದರು. ಫಾರ್ಮ್‌ ಕೊರತೆ ಎದುರಿಸುತ್ತಿರುವ ರೋಹಿತ್‌ ಶರ್ಮಾ ಅವರನ್ನು ಬಿಸಿಸಿಐ ಮುಂಬರುವ ಏಕದಿನ ಸರಣಿಗೆ ಆಯ್ಕೆ ಮಾಡುವುದು ಅನುಮಾನ ಎನ್ನಲಾಗುತ್ತಿದೆ.

39 ವರ್ಷದ ರೋಹಿತ್‌ ಶರ್ಮಾ ಸದ್ಯ ಟೀಂ ಇಂಡಿಯಾದ ಹಿರಿಯ ಆಟಗಾರ. 287 ಏಕದಿನ ಪಂದ್ಯಗಳನ್ನು ಆಡಿರುವ ಹಿಟ್‌ಮ್ಯಾನ್‌ 33 ಶತಕ ಹಾಗೂ 62 ಅರ್ಧ ಶತಕದ ನೆರವಿನಿಂದ ಬರೋಬ್ಬರಿ 11,757ರನ್‌ ಬಾರಿಸಿದ್ದಾರೆ. ವಯಸ್ಸಿನ ಕಾರಣದಿಂದಲೇ ರೋಹಿತ್‌ ಶರ್ಮಾ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇನ್ನೂ ಒಂದು ವರ್ಷ ಮುಂದುವರಿಯುವುದು ಅನುಮಾನ.

ರೋಹಿತ್‌ ಶರ್ಮ ಅವರ ಜಾಗದಲ್ಲಿ ಸ್ಥಾನ ಗಿಟ್ಟಿಸಲಿರುವ ಯಶಸ್ವಿ ಜೈಸ್ವಾಲ್‌ ಕಳೆದ ಮೂರು ಇನ್ನಿಂಗ್ಸ್‌ಗಳಲ್ಲಿ ಬರೋಬ್ಬರಿ 2 ಶತಕ ಸಿಡಿಸಿದ್ದಾರೆ. ಧೀರ್ಘಾವಧಿಯ ಕ್ರಿಕೆಟ್‌ನಲ್ಲಿ ಜೈಸ್ವಾಲ್‌ಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ರೋಹಿತ್‌ ಶರ್ಮಾ ಅವರಿಗೆ ಬಿಸಿಸಿಐ ಆಯ್ಕೆ ಸಮಿತಿ ನಿವೃತ್ತಿಗೆ ಸೂಚಿಸಿದೆ ಎನ್ನಲಾಗುತ್ತಿದೆ. ಬಿಸಿಸಿಐ ರೋಟೆಷನ್‌ ಪದ್ದತಿಯನ್ನು ಅಳವಡಿಸಿಕೊಳ್ಳಲು ಮುಂದಾಗಿರುವುದು ರೋಹಿತ್‌ ಶರ್ಮಾ ನಿವೃತ್ತಿಗೆ ಕಾರಣವೆನ್ನಲಾಗುತ್ತಿದೆ. ಆದರೆ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ.

Rohit Sharma odi retirement lords

Exit mobile version