ಜ್ಯೋತಿಷ್ಯ ಶಾಸ್ತ್ರದಲ್ಲಿ ಹುಣ್ಣಿಮೆ ಮತ್ತು ಅಮಾವಾಸ್ಯೆಗೆ ಬಹಳ ಮಹತ್ವವಿದೆ. ಚಂದ್ರನ ಸ್ಥಾನವು ರಾಶಿಚಕ್ರದ ರಾಶಿಗಳ ಮೇಲೆ ವಿವಿಧ ಪರಿಣಾಮಗಳನ್ನು ಉಂಟು ಮಾಡುತ್ತವೆ. ಹಿಂದೂ ಕ್ಯಾಲೆಂಡರ್‌ನ ನಾಲ್ಕನೇ ತಿಂಗಳಾದ ಆಷಾಢ ಮಾಸದ ಅಮಾವಾಸ್ಯೆಯನ್ನು ಜುಲೈ 14 ರಂದು ಆಚರಿಸಲಾಗುತ್ತಿದೆ. ಈ ವರ್ಷದ ಆಷಾಢ ಅಮಾವಾಸ್ಯೆಯಂದು ಗ್ರಹಗಳ ಚಲನೆಯ ಪ್ರಭಾವದಿಂದಾಗಿ ಕೆಲವು ರಾಶಿಗೆ ಸೇರಿದ ಜನರು ಬಹಳ ಜಾಗರೂಕರಾಗಿಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಎಚ್ಚರಿಕೆಯ ಮಾತು ಹೇಳಿದೆ. ಕೆಲವು ರಾಶಿಯವರು ಹೆಚ್ಚಿನ ತೊಂದರೆ ಎದುರಿಸುವ ಸಾಧ್ಯತೆಯಿದೆ. ಇದಕ್ಕೆ ಅಮಾವಾಸ್ಯೆ ಸಮಯದಲ್ಲಿ ಗ್ರಹಗಳ ಚಲನೆ ಮತ್ತು ನಕಾರಾತ್ಮಕ ಶಕ್ತಿಯ ಪ್ರಭಾವದಿಂದಾಗಿ ಆ ರಾಶಿಯವರು ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಬೇಕಾಗಿದೆ. ಹಾಗಾದರೆ ಆ ರಾಶಿಗಳು ಯಾವುವು ಎಂದು ತಿಳಯೋಣ.
ಮಿಥುನ ರಾಶಿ
ಈ ಸಮಯದಲ್ಲಿ ಮಾನಸಿಕ ಒತ್ತಡ ಮತ್ತು ಆರೋಗ್ಯದಲ್ಲಿ ಏರುಪೇರಾಗಬಹುದು. ಗೊಂದಲ, ಭಯ ನಿಮ್ಮನ್ನು ಕಾಡಬಹುದು. ಮಾತಿನ ಮೇಲೆ ಸಂಪೂರ್ಣ ನಿಯಂತ್ರಣ ಇಟ್ಟುಕೊಳ್ಳಿ. ಇಲ್ಲದಿದ್ದರೆ ಪ್ರೀತಿಪಾತ್ರರ ಜೊತೆಗೆ ಭಿನ್ನಾಭಿಪ್ರಾಯಗಳು ಬರಬಹುದು. ವಾದಗಳಿಂದ ದೂರವಿರಿ.
ಕಟಕ ರಾಶಿ
ಭಾವನಾತ್ಮಕ ನಿರ್ಧಾರ ತೆಗೆದುಕೊಳ್ಳುವುದನ್ನು ನಿಲ್ಲಿಸಿ. ಚಂದ್ರನ ಸ್ಥಾನವು ಬದಲಾದ್ದರಿಂದ ಆರ್ಥಿಕ ನಷ್ಟವಾಗುವ ಅಪಾಯವಿದೆ. ಆದ್ದರಿಂದ ಹಣಕಾಸು ವ್ಯವಹಾರದಲ್ಲಿ ಎಚ್ಚರಿಕೆಯಿಂದಿರಿ.
ಇದನ್ನೂ ಓದಿ : ಚಾತುರ್ಮಾಸ 2026: ಜುಲೈ 25 ರಿಂದ ಯೋಗನಿದ್ರೆಗೆ ಶ್ರೀಹರಿ : ದೀಪಾವಳಿವರೆಗೆ ಈ 5 ರಾಶಿಯವರ ಸಕಲ ಇಷ್ಟಾರ್ಥ ಸಿದ್ಧಿ
ವೃಶ್ಚಿಕ ರಾಶಿ
ಕೆಲಸದಲ್ಲಿ ಒತ್ತಡ, ಅಪಘಾತವಾಗುವ ಸಾಧ್ಯತೆ ಇದೆ. ವಾಹನ ಚಲಾಯಿಸುವಾಗ ಅತ್ಯಂತ ಜಾಗರೂಕರಾಗಿರಿ. ಹಿತ ಶತ್ರುಗಳ ಬಗ್ಗೆ ಎಚ್ಚರವಹಿಸಿ. ಕೆಲಸದಲ್ಲಿ ಸಹೋದ್ಯೋಗಿಗಳೊಂದಿಗೆ ಉತ್ತಮ ಸಮನ್ವಯ ಕಾಪಾಡಿಕೊಳ್ಳಿ.
ಮೀನ ರಾಶಿ
ಕೌಟುಂಬಿಕ ಕಲಹ ಹೆಚ್ಚಾಗಬಹುದು. ಅದಕ್ಕಾಗಿ ವಿಶೇಷ ಕಾಳಜಿ ವಹಿಸಿ. ಆರೋಗ್ಯದ ಮೇಲೆ ಹೆಚ್ಚು ಗಮನ ಕೊಡಿ. ಆಹಾರ ಕ್ರಮದ ಮೇಲೆ ಇರಲಿ ಎಚ್ಚರ. ಆಹಾರದಿಂದ ಅನಾರೋಗ್ಯ ಉಂಟಾಗುವ ಸಾಧ್ಯತೆಯಿದೆ.
ಅಮಾವಾಸ್ಯೆಯ ಪರಿಣಾಮ ಕಡಿಮೆ ಮಾಡಲು ಈ ರಾಶಿಯವರು ಪಾಲಿಸಬಹುದಾದ ಸರಳ ಮಾರ್ಗಗಳು
ಅಮಾವಾಸ್ಯೆಯ ನಕಾತ್ಮಕ ಪರಿಣಾಮಗಳನ್ನು ತಗ್ಗಿಸಲು ಕೆಲವು ಸರಳ ಮಾರ್ಗಗಳನ್ನು ಪಾಲಿಸಿ. ಎಳ್ಳು, ಬಟ್ಟೆ ಅಥವಾ ಆಹಾರವನ್ನು ದಾನ ಮಾಡಿ. ಪಿತೃ ದೋಷವಿದ್ದರೆ ಪೂರ್ವಜರಿಗೆ ತರ್ಪಣ ನೀಡಿ. ಅಮಾವಾಸ್ಯೆಯ ದೋಷ ನಿವಾರಣೆಯಾಗಲು ಶಿವನ ಮಂತ್ರವಾದ ‘ಓಂ ನಮಃ ಶಿವಾಯ’ ಅಥವಾ ಮಹಾಮೃತ್ಯುಂಜಯ ಜಪ ಮಾಡಿ.
