ಚಾತುರ್ಮಾಸ 2026: ಜುಲೈ 25 ರಿಂದ ಯೋಗನಿದ್ರೆಗೆ ಶ್ರೀಹರಿ : ದೀಪಾವಳಿವರೆಗೆ ಈ 5 ರಾಶಿಯವರ ಸಕಲ ಇಷ್ಟಾರ್ಥ ಸಿದ್ಧಿ
ಈ ವರ್ಷ ಜುಲೈ 25 ರಿಂದ ಪ್ರಾರಂಭವಾಗುವ ಚಾತುರ್ಮಾಸವು ನವೆಂಬರ್ 20 ರವರೆಗೆ ಇರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ತಿಂಗಳುಗಳ ಸಮಯವು ಕೆಲವು ರಾಶಿಯವರಿಗೆ ಅತ್ಯಂತ ಶುಭವನ್ನು ತರಲಿದೆ.

ಹಿಂದೂ ಮಾಸಗಳಲ್ಲಿ ಆಷಾಢ ಮಾಸಕ್ಕೆ ಬಹಳ ಮಹತ್ವವಿದೆ. ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯಿಂದ ಚಾತುರ್ಮಾಸವು ಪ್ರಾರಂಭವಾಗುತ್ತದೆ. ಅಂದರೆ ಆಷಾಢದ ಈ ಏಕಾದಶಿ ದಿನದಿಂದ ಮಹಾವಿಷ್ಣು ನಾಲ್ಕು ತಿಂಗಳ ಕಾಲ ಯೋಗ ನಿದ್ರೆಗೆ ಹೋಗುತ್ತಾನೆ. ಶ್ರೀಹರಿಯ ಈ ಯೋಗನಿದ್ರೆಯ ಕಾಲವನ್ನೇ ಚಾತುರ್ಮಾಸ ಎನ್ನುತ್ತಾರೆ. ಈ ಸಮಯದಲ್ಲಿ ಮದುವೆ, ಉಪನಯನದಂತಹ ಯಾವುದೇ ಶುಭ ಕಾರ್ಯಗಳನ್ನು ನಡೆಸಲಾಗುವುದಿಲ್ಲ. ಆಷಾಢದ ಶುಕ್ಲ ಏಕಾದಶಿಯನ್ನು ದೇವಶಯನಿ ಏಕಾದಶಿ ಎಂದೂ ಆಚರಿಸುತ್ತಾರೆ. ಅದೇ ರೀತಿ ಮಹಾವಿಷ್ಣು ಯೋಗನಿದ್ರೆಯನ್ನು ಮುಗಿಸುವ ದಿನವನ್ನು ಉತ್ಥಾನ ಏಕಾದಶಿ ಎಂದು ಕರೆಯುತ್ತಾರೆ. ಈ ವರ್ಷ ಜುಲೈ 25 ರಿಂದ ಪ್ರಾರಂಭವಾಗುವ ಚಾತುರ್ಮಾಸವು ನವೆಂಬರ್ 20 ರವರೆಗೆ ಇರಲಿದೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ನಾಲ್ಕು ತಿಂಗಳುಗಳ ಸಮಯವು ಕೆಲವು ರಾಶಿಯವರಿಗೆ ಅತ್ಯಂತ ಶುಭವನ್ನು ತರುತ್ತದೆ ಎನ್ನಲಾಗಿದೆ. ಈ ವರ್ಷದ ಚಾತುರ್ಮಾಸವು ಐದು ರಾಶಿಯವರ ಜೀವನದಲ್ಲಿ ಶುಭ ಸುದ್ಧಿಯನ್ನು ತರುತ್ತದೆ. ಜೀವನದಲ್ಲಿ ಹೊಸ ತಿರುವುಗಳು, ಸಂತೋಷ ತರುತ್ತದೆ. ಆ ಐದು ರಾಶಿಗಳು ಯಾವುದು? ಇಲ್ಲಿದೆ ಓದಿ.
ವೃಷಭ ರಾಶಿ
ಚಾತುರ್ಮಾಸದ ಅವಧಿಯು ನಿಮಗೆ ಆರ್ಥಿಕ ಬಲವನ್ನು ಒದಗಿಸುತ್ತದೆ. ಅಪೂರ್ಣವಾಗಿದ್ದ ಕೆಲಸಗಳು ಪುನಃ ಪ್ರಾರಂಭವಾಗುತ್ತದೆ. ಉದ್ಯೋಗಿಗಳು ಹೆಚ್ಚಿನ ಜವಾಬ್ದಾರಿಗಳನ್ನು ಪಡೆಯುವುದರ ಜೊತೆಗೆ ಅವರ ಖ್ಯಾತಿಯೂ ಹೆಚ್ಚಾಗುತ್ತದೆ. ಕುಟುಂಬದ ಬೆಂಬಲ ನಿಮಗಿರುತ್ತದೆ. ಈ ಸಮಯವು ಸಂಪತ್ತನ್ನು ಹೆಚ್ಚಿಸಿಕೊಳ್ಳಲು ಅನುಕೂಲಕರವಾಗಿರುತ್ತದೆ.
ಕಟಕ ರಾಶಿ
ಮುಂದಿನ ನಾಲ್ಕು ತಿಂಗಳುಗಳಲ್ಲಿ, ಕಟಕ ರಾಶಿಯವರು ಕೆಲಸದಲ್ಲಿ ಹೊಸ ಜವಾಬ್ದಾರಿಗಳನ್ನು ನಿರ್ವಹಿಸಬೇಕಾಗುತ್ತದೆ. ಹೊಸ ಸಂಪರ್ಕಗಳಿಂದ ನಿಮ್ಮ ವ್ಯವಹಾರಕ್ಕೆ ಪ್ರಯೋಜನವಾಗಲಿದೆ. ಈ ಸಮಯವು ವಿದ್ಯಾರ್ಥಿಗಳಿಗೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವವರಿಗೆ ಉತ್ತಮವಾಗಿದೆ. ನಿಮ್ಮ ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಬಾಕಿ ಇರುವ ಕೆಲಸಗಳು ಪೂರ್ಣಗೊಳ್ಳಲು ಪ್ರಾರಂಭವಾಗುತ್ತದೆ.
ತುಲಾ ರಾಶಿ
ಚಾತುರ್ಮಾಸದ ಸಮಯವು ತುಲಾ ರಾಶಿಯವರಿಗೆ ಸಂಬಂಧಗಳು ಮತ್ತು ವೃತ್ತಿಜೀವನ ಎರಡಕ್ಕೂ ಸಕಾರಾತ್ಮಕ ಫಲಿತಾಂಶವನ್ನು ನೀಡಲಿದೆ. ಆರ್ಥಿಕ ಸುಧಾರಣೆಗೆ ಹೊಸ ಮಾರ್ಗಗಳು ತೆರೆದುಕೊಳ್ಳಬಹುದು. ಈ ಸಮಯದಲ್ಲಿ ಪಾಲುದಾರಿಕೆಯಲ್ಲಿ ಕೆಲಸ ಮಾಡುವವರು ಸಕಾರಾತ್ಮಕ ಫಲಿತಾಂಶಗಳನ್ನು ಕಾಣಬಹುದು. ಸಮಜಾದಲ್ಲಿ ನಿಮ್ಮ ಸ್ಥಾನಮಾನ ಹೆಚ್ಚಾಗುತ್ತದೆ.
ಧನು ರಾಶಿ
ಈ ಅವಧಿಯಲ್ಲಿ ಅದೃಷ್ಟವು ನಿಮ್ಮ ಪರವಾಗಿ ಕೆಲಸಮಾಡುತ್ತದೆ. ವೃತ್ತಿ ಪ್ರಗತಿಗೆ ಅವಕಾಶಗಳು ಸಿಗುತ್ತವೆ. ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಟುವಟಿಕೆಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಹೊಸ ಯೋಜನೆಗಳನ್ನು ಪ್ರಾರಂಭಿಸಲು ಈ ಸಮಯ ಅನುಕೂಲಕರವಾಗಿದೆ. ವಿದೇಶ ವ್ಯವಹಾರಗಳಿಗೆ ಸಂಬಂಧಿಸಿದ ಕೆಲಸಗಳು ಸಹ ಸಕಾರಾತ್ಮಕ ಫಲಿತಾಂಶಗಳನ್ನು ನೀಡುವ ಎಲ್ಲ ಸಾಧ್ಯತೆಯಿದೆ.
ಮೀನ ರಾಶಿ
ಕುಟುಂಬದಲ್ಲಿ ಸಂತೋಷದ ವಾತಾವರಣ ನೆಲೆಸುತ್ತದೆ. ಹೊಸ ವೃತ್ತಿ ಅವಕಾಶಗಳು ನಿಮ್ಮನ್ನು ಹುಡುಕಿ ಬರುತ್ತವೆ. ಸೃಜನಶೀಲ ಪ್ರಯತ್ನಗಳಲ್ಲಿ ಯಶಸ್ಸು ಸಾಧ್ಯ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಿಸುತ್ತದೆ ಮತ್ತು ಭವಿಷ್ಯದ ಯೋಜನೆಗಳಲ್ಲಿ ನೀವು ಆತ್ಮವಿಶ್ವಾಸದಿಂದ ಕೆಲಸ ಮಾಡಲು ಸಾಧ್ಯವಾಗುತ್ತದೆ. ವ್ಯವಹಾರದಲ್ಲಿ ಲಾಭ ಹೆಚ್ಚಾಗುವುದರ ಮೂಲಕ ವ್ಯವಹಾರವು ವಿಸ್ತಾರಗೊಳ್ಳುತ್ತದೆ.

