ಜ್ಯೋತಿಷ್ಯ ಶಾಸ್ತ್ರದಲ್ಲಿ ಮಂಗಳನನ್ನು ಗ್ರಹಗಳ ಸೇನಾಧಿಪತಿ ಎಂದು ಕರೆಯಲಾಗುತ್ತದೆ. ಮಂಗಳನು ಮೇಷ ಮತ್ತು ವೃಶ್ಚಿಕ ರಾಶಿಯನ್ನು ಆಳುತ್ತಾನೆ. ಶಕ್ತಿ, ಪರಾಕ್ರಮ ಮತ್ತು ನಾಯಕತ್ವ ಗುಣಗಳನ್ನು ಮಂಗಳನು ಪ್ರತಿನಿಧಿಸತ್ತಾನೆ. ಜಾತಕದಲ್ಲಿ ಮಂಗಳ ಗ್ರಹ ಬಲಿಷ್ಠವಾಗಿದ್ದರೆ ಅವರಿಗೆ ಯಾವುದೇ ರೀತಿಯ ತೊಂದರೆಗಳು ಅಷ್ಟಾಗಿ ಬಾಧಿಸುವುದಿಲ್ಲ ಎನ್ನಲಾಗಿದೆ. ಮಂಗಳನು ಒಂದು ರಾಶಿಯಲ್ಲಿ ಸುಮಾರು ಒಂದೂವರೆ ತಿಂಗಳು ನೆಲೆಸಿರುತ್ತಾನೆ. ಸದ್ಯ ಮಂಗಳ ಗ್ರಹವು ವೃಷಭರಾಶಿಯಲ್ಲಿ ತನ್ನ ಸಂಚಾರ ನಡೆಸುತ್ತಿದೆ. ಆಗಸ್ಟ್ 2 ರಂದು ಮಂಗಳನು ಬುಧ ಅಧಿಪತಿಯಾದ ಮಿಥುನ ರಾಶಿಗೆ ಪ್ರವೇಶಿಸಲಿದ್ದಾನೆ. ಜ್ಯೋತಿಷ್ಯ ಲೆಕ್ಕಾಚಾರದ ಪ್ರಕಾರ ಬುಧ ಮತ್ತು ಮಂಗಳನ ನಡುವೆ ದ್ವೇಷದ ಭಾವನೆ ಇದೆ. ಹಾಗಾಗಿ ಮಿಥುನ ರಾಶಿಯನ್ನು ಮಂಗಳನ ಶತ್ರು ಎಂದು ಪರಿಗಣಿಸಲಾಗಿದೆ. ಈಗ ಶತ್ರು ರಾಶಿಗೆ ಮಂಗಳನು ಪ್ರವೇಶಿಸುವುದರಿಂದ ಕೆಲವು ರಾಶಿಗಳಿಗೆ ಅಶುಭ ಫಲ ನೀಡುವ ಸಾಧ್ಯತೆಯಿದೆ. ಮಿಥುನ ರಾಶಿಯಲ್ಲಿ ಮಂಗಳ ಸಂಚಾರವು ಸೆಪ್ಟೆಂಬರ್ 18ರವರೆಗೆ ಇರುವುದರಿಂದ ಈ ಸಮಯವು ಅತ್ಯಂತ ಸೂಕ್ಷ್ಮ ಸಮಯವಾಗಲಿದೆ. ಮಂಗಳ ಈ ಸಂಚಾರದಿಂದ ಕೆಲವು ರಾಶಿಯವರಿಗೆ ಸಕಾರಾತ್ಮಕ ಫಲಿತಾಂಶ ದೊರಕಿದರೆ, ಇನ್ನು ಕೆಲವರು ನಕಾರಾತ್ಮಕ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ಹಾಗಾದರೆ ಆ ರಾಶಿಗಳು ಯಾವುವು? ಎಂದು ನೋಡೋಣ.
ಮಿಥುನ ರಾಶಿ
ಮಂಗಳನು ನಿಮ್ಮ ರಾಶಿಯಲ್ಲಿಯೇ ಸಾಗುವುದರಿಂದ ಹೆಚ್ಚಿನ ಪರಿಣಾಮ ನಿಮ್ಮ ಮೇಲೆಯೇ ಬೀಳಲಿದೆ. ಈ ಸಮಯದಲ್ಲಿ ನಿಮ್ಮ ಧೈರ್ಯ ಮತ್ತು ಆತ್ಮವಿಶ್ವಾಸ ಕಡಿಮೆಯಾಗುತ್ತದೆ. ಇದು ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯದ ಮೇಲೆ ಪರಿಣಾಮ ಬೀರಬಹುದು ಮತ್ತು ನಿರ್ಧಾರ ತೆಗೆದುಕೊಳ್ಳುವಲ್ಲಿ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಕೋಪ ಹೆಚ್ಚಾಗಬಹುದು. ನಿಮ್ಮ ಮಾತು ಹೆಚ್ಚಾಗಬಹುದು. ಅದು ಕುಟುಂಬ ಮತ್ತು ಸ್ನೇಹಿತರೊಂದಿಗೆ ವಿವಾದಕ್ಕೆ ಕಾರಣವಾಗುತ್ತದೆ. ಈ ಸಮಯದಲ್ಲಿ ರಕ್ತದೊತ್ತಡ ನಿಮ್ಮನ್ನು ಕಾಡಬಹುದು. ಹಾಗಾಗಿ ಈ ಒಂದೂವರೆ ತಿಂಗಳು ಬಹಳ ವಿವೇಚನೆಯಿಂದ ವರ್ತಿಸಿ.
ಕಟಕ ರಾಶಿ
ಕಟಕ ರಾಶಿಯವರಿಗೆ ಮಂಗಳ ಗ್ರಹದ ಸಂಚಾರದಿಂದಾಗಿ ದೈಹಿಕ ತೊಂದರೆ ಉಂಟಾಗಬಹುದು. ಈ ಸಮಯದಲ್ಲಿ ತಲೆನೋವು, ಅಪರಿಚಿತ ವ್ಯಕ್ತಿಗಳ ಭಯ, ಆತಂಕ ಉಂಟಾಗಬಹುದು. ನಕಾರಾತ್ಮಕ ಆಲೋಚನೆಗಳು ಉದ್ಭವಿಸಬಹುದು. ಅತಿಯಾದ ಖರ್ಚನಿಂದ ಆರ್ಥಿಕ ತೊಂದರೆಯಾಗಬಹುದು. ಆದ್ದರಿಂದ, ಹಣವನ್ನು ಎಚ್ಚರಿಕೆಯಿಂದ ಖರ್ಚು ಮಾಡಿ. ಕಚೇರಿಯಲ್ಲಿ ಕೆಲಸದ ವಿಷಯವಾಗಿ ಅತಿ ಚರ್ಚೆ ಮಾಡಬೇಡಿ.
ಇದನ್ನೂ ಓದಿ: ಬುಧ ಹಿಮ್ಮುಖ ಚಲನೆ : ಈ ಐದು ರಾಶಿಯವರಿಗೆ ಸುಖ, ಸಂಪತ್ತು ಸೇರಿ ಎಲ್ಲದರಲ್ಲೂ ಉನ್ನತಿ..!
ವೃಶ್ಚಿಕ ರಾಶಿ
ವೃಶ್ಚಿಕ ರಾಶಿಯವರಿಗೆ ಈ ಅವಧಿಯು ಕಷ್ಟಕರವಾಗಲಿದೆ. ನಿಮಗೆ ಶತ್ರುಗಳು ತೊಂದರೆ ಕೊಡಬಹುದು. ಹಣಕಾಸಿನ ತೊಂದರೆಗಳು ನಿಮ್ಮನ್ನು ಸುತ್ತುವರಿಯಬಹುದು. ಅನಗತ್ಯ ಖರ್ಚು ನಿಮ್ಮ ಬಜೆಟ್‌ಗೆ ಅಡ್ಡಿಪಡಿಸಬಹುದು. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯವಲ್ಲ, ಆದ್ದರಿಂದ ಯಾವುದೇ ಮಹತ್ವದ ಆರ್ಥಿಕ ನಿರ್ಧಾರಗಳನ್ನು ತೆಗೆದುಕೊಳ್ಳಬೇಡಿ. ನೀವು ಹೊಸ ಉದ್ಯಮವನ್ನು ಪ್ರಾರಂಭಿಸುವ ಬಗ್ಗೆ ಯೋಚಿಸುತ್ತಿದ್ದರೆ, ಅದನ್ನು ಸದ್ಯಕ್ಕೆ ಮುಂದೂಡಿ. ಕುಟುಂಬ ಸಮಸ್ಯೆಗಳು ಉದ್ಭವಿಸಬಹುದು.
ಮೀನ ರಾಶಿ
ಮೀನ ರಾಶಿಯವರಿಗೆ ಇದು ಒಳ್ಳೆಯ ಸಮಯವಲ್ಲ. ನೀವು ಸಂಬಂಧಗಳ ಸುಳಿಯಲ್ಲಿ ಸಿಲುಕಿಕೊಳ್ಳಬಹುದು. ಬಹಳ ಎಚ್ಚರದಿಂದ ಮಾತನಾಡಿ ಏಕೆಂದರೆ ನಿಮ್ಮ ಅತಿ ಹತ್ತಿರದವರಿಗೆ ನಿಮ್ಮ ಮಾತಿಂದ ನೋವಾಗಬಹುದು. ಅನಗತ್ಯ ಹಣ ಖರ್ಚಾಗಬಹುದು. ಕೆಚೇರಿಯಲ್ಲಿ ಮೇಲಧಿಕಾರಿಗೊಳೊಂದಿಗೆ ವಾದ ಮಾಡಬೇಡಿ. ಅನಗತ್ಯ ವಿಷಯಗಳಿಗೆ ಹೆಚ್ಚು ಹಣ ಖರ್ಚಾಗಬಹುದು. ಕುಟುಂಬ ಜವಾಬ್ದಾರಿ ಪೂರೈಸುವಾಗ ತೊಂದರೆಗಳು ಎದುರಾಗಬಹುದು. ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರವಾಗಿರಿ. ಏಕೆಂದರೆ ಆರ್ಥಿಕ ನಷ್ಟದಲ್ಲಿ ಸಿಲುಕುವ ಸಾಧ್ಯತೆಯಿದೆ.
