ಬುಧ ಹಿಮ್ಮುಖ ಚಲನೆ : ಈ ಐದು ರಾಶಿಯವರಿಗೆ ಸುಖ, ಸಂಪತ್ತು ಸೇರಿ ಎಲ್ಲದರಲ್ಲೂ ಉನ್ನತಿ..!

ಗ್ರಹಗಳ ಅಧಿಪತಿ ಬುಧನು ಮಿಥುನ ರಾಶಿಯಲ್ಲಿ ಹಿಮ್ಮುಖವಾಗಿ ಚಲಿಸಲಿದ್ದಾನೆ. ಇದರಿಂದ ಐದು ರಾಶಿಯವರಿಗೆ ಸಿಕ್ಕಾಪಟ್ಟೆ ಪ್ರಯೋಜನವಾಗಲಿದೆ. ಸುಖ ಸಂಪತ್ತಿನ ಹೊಳೆ ಹರಿಯಲಿದೆ.

ಜ್ಯೋತಿಷ್ಯ ಶಾಸ್ತ್ರದಲ್ಲಿ ಬುಧ ಗ್ರಹವನ್ನು ಬುದ್ಧಿ ಶಕ್ತಿ, ಉತ್ತಮ ವಾಗ್ಮಿ ಮತ್ತು ವ್ಯವಹಾರದ ಗ್ರಹವೆಂದು ಪರಿಗಣಿಸಲಾಗಿದೆ. ಗ್ರಹಗಳ ಅಧಿಪತಿಯಾದ ಬುಧನು ಸದ್ಯ ಮಿಥುನ ರಾಶಿಯಲ್ಲಿ ಹಿಮ್ಮುಖವಾಗಿ ಸಾಗುತ್ತಿದ್ದನು. ಸುಮಾರು 25 ದಿನಗಳ ನಂತರ ಈಗ ಹಿಂದಿರುಗಿ ಮೊದಲಿನಂತೆಯೇ ನೇರ ಚಲನೆ ಮಾಡಲಿದ್ದಾನೆ. ಬುಧ ಗ್ರಹವು ಜುಲೈ 24,2026 ರಂದು ಮಿಥುನ ರಾಶಿಯಲ್ಲಿ ನೇರ ಚಲನೆ ಮಾಡಲಿದ್ದಾನೆ. ಇದನ್ನೇ ಬುಧ ಹಿಮ್ಮುಖ ಚಲನೆ ಅಥವಾ ಬುಧ ಮಾರ್ಗಿ ಎಂದು ಕರೆಯುತ್ತದೆ. ಬುಧನ ಈ ನೇರ ಚಲನೆಯಿಂದಾಗಿ ರಾಶಿ ಚಕ್ರದ ಎಲ್ಲ ರಾಶಿಗಳ ಮೇಲೆ ಶುಭ ಫಲ ನೀಡಲಿದ್ದಾನೆ. ಆದರೆ ಅವುಗಳಲ್ಲಿ ಐದು ರಾಶಿಯವರ ಮೇಲೆ ಬುಧನು ಸಂಪತ್ತಿನ ಹೊಳೆ ಹರಿಸಲಿದ್ದಾನೆ. ಆ ರಾಶಿಗಳು ಯಾವುವು ಎಂದು ನೋಡೋಣ.

ಸಿಂಹ ರಾಶಿ

ಬುಧನ ನೇರ ಸಂಚಾರವು ಸಿಂಹ ರಾಶಿಯವರಿಗೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೀವು ಕೆಲಸದ ನಿಮಿತ್ತ ದೂರ ಪ್ರಯಾಣ ಹೋಗುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳು ತಮ್ಮ ಅಧ್ಯಯನದ ಮೇಲೆ ಹೆಚ್ಚು ಗಮನಹರಿಸುತ್ತಾರೆ.

ತುಲಾ ರಾಶಿ

ತುಲಾ ರಾಶಿಯವರಿಗೆ ಬುಧನ ನೇರ ಸಂಚಾರವು ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ವ್ಯವಹಾರದಲ್ಲಿ ಸಿಲುಕಿಕೊಂಡಿರುವ ಹಣವನ್ನು ಮರಳಿ ಪಡೆಯಬಹುದು. ಉತ್ತಮ ಯೋಜನೆ ರೂಪಿಸುವುದ ಮೂಲಕ ವ್ಯವಹಾರದಲ್ಲಿ ಲಾಭ ಗಳಿಸಬಹುದು.

ಮೇಷ ರಾಶಿ

ಮೇಷ ರಾಶಿಯವರಿಗೆ ಬುಧನ ನೇರ ಸಂಚಾರ ಶುಭವೆಂದು ಪರಿಗಣಿಸಲಾಗಿದೆ. ನೀವು ರೂಪಿಸುವ ಪ್ರತಿಯೊಂದು ತಂತ್ರವೂ ಯಶಸ್ವಿಯಾಗುತ್ತದೆ. ನಿಮಗೆ ಆರ್ಥಿಕ ಲಾಭದ ಸಾಧ್ಯತೆಯಿದೆ.

ಕನ್ಯಾ ರಾಶಿ

ಬುಧನ ನೇರ ಚಲನೆಯು ಕನ್ಯಾ ರಾಶಿಯವರಿಗೆ ಸಕಾರಾತ್ಮಕವೆಂದು ಪರಿಗಣಿಸಲಾಗಿದೆ. ಆರ್ಥಿಕ ಸಮಸ್ಯೆಗಳಿಂದ ಪರಿಹಾರ ಸಿಗುವ ಸಾಧ್ಯತೆಯಿದೆ. ನಿಮ್ಮ ವಿವೇಕದಿಂದ ಕೆಲಸಗಳು ಸುಲಭವಾಗಲಿದೆ.

ಕುಂಭ ರಾಶಿ

ಕುಂಭ ರಾಶಿಯವರಿಗೆ ಬುಧನ ನೇರ ಸಂಚಾರವು ಉತ್ತಮವಾಗಿರುತ್ತದೆ. ವ್ಯವಹಾರದಲ್ಲಿನ ಆರ್ಥಿಕ ಒತ್ತಡವು ಕೊನೆಗೊಳ್ಳುತ್ತದೆ. ನಿಮ್ಮ ಸಂಗಾತಿಗೆ ಸಮಯ ನೀಡಿ ಮತ್ತು ನಿಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ.

Archana V. Bhat |ಅರ್ಚನಾ ವಿ. ಭಟ್

ಅರ್ಚನಾ ವಿ. ಭಟ್‌ ಮೂಲತಃ ಉತ್ತರ ಕನ್ನಡ ಜಿಲ್ಲೆಯ ಕುಮಟಾ ಮೂಲದವರು. ಕಳೆದ ಹಲವು ವರ್ಷಗಳಿಂದಲೂ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ನ್ಯೂಸ್‌ನೆಕ್ಸ್ಟ್‌ ಕನ್ನಡ ಸುದ್ದಿ ಸಂಸ್ಥೆಯಲ್ಲಿ ನಾಲ್ಕು ವರ್ಷಗಳಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ವ್ಯವಹಾರ, ಆಟೋಮೊಬೈಲ್‌, ಟೆಕ್ನಾಲಜಿ, ಕ್ರೀಡೆ ಸುದ್ದಿ ವಿಭಾಗದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿದ್ದಾರೆ.. ನೈಜ, ಸತ್ಯ ಸುದ್ದಿಯನ್ನು ಪ್ರಕಟಿಸುತ್ತಿದ್ದಾರೆ.