ವಾಸ್ತು ಶಾಸ್ತ್ರದ ಎಚ್ಚರಿಕೆ: ಸಂಜೆ 6ರ ನಂತರ ಈ ವಸ್ತುಗಳನ್ನು ಮನೆಗೆ ತಂದರೆ ದಾರಿದ್ರ್ಯ ಗ್ಯಾರಂಟಿ!

ವಾಸ್ತು ಶಾಸ್ತ್ರ ಮತ್ತು ಸನಾತನ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಕೆಲವು ನಿರ್ದಿಷ್ಟ ವಸ್ತುಗಳನ್ನು ಖರೀದಿಸುವುದು ತೀರಾ ಅಶುಭ ಎಂದು ಹೇಳಲಾಗುತ್ತದೆ

ಇಂದಿನ ಬ್ಯುಸಿ ಲೈಫ್‌ನಲ್ಲಿ ಅನೇಕರು ಆಫೀಸ್ ಮುಗಿಸಿ ಮನೆಗೆ ಬರುವಾಗ ಅಥವಾ ಸಂಜೆಯ ಫ್ರೀ ಟೈಮ್‌ನಲ್ಲಿ ದಿನಸಿ ಸಾಮಗ್ರಿಗಳನ್ನು ಖರೀದಿಸುತ್ತಾರೆ. ಆದರೆ, ವಾಸ್ತು ಶಾಸ್ತ್ರ ಮತ್ತು ಸನಾತನ ನಂಬಿಕೆಗಳ ಪ್ರಕಾರ, ಸೂರ್ಯಾಸ್ತದ ನಂತರ ಕೆಲವು ನಿರ್ದಿಷ್ಟ ವಸ್ತುಗಳನ್ನು ಖರೀದಿಸುವುದು ತೀರಾ ಅಶುಭ ಎಂದು ಹೇಳಲಾಗುತ್ತದೆ.

ಸಂಜೆಯ ಸಮಯವನ್ನು ಸಾಕ್ಷಾತ್ ಲಕ್ಷ್ಮಿ ದೇವಿಯು ಮನೆಗೆ ಭೇಟಿ ನೀಡುವ ಪವಿತ್ರ ಕಾಲ ಎನ್ನಲಾಗುತ್ತದೆ. ಈ ವೇಳೆ ಕೆಲವು ವಸ್ತುಗಳನ್ನು ಮನೆಗೆ ತರುವುದರಿಂದ ನಕಾರಾತ್ಮಕ ಶಕ್ತಿ (Negative Energy) ಹೆಚ್ಚಾಗಿ, ಆರ್ಥಿಕ ತೊಂದರೆ ಹಾಗೂ ಮನೆಯಲ್ಲಿ ಅಶಾಂತಿ ತಲೆದೂರುತ್ತದೆ ಎಂಬ ನಂಬಿಕೆಯಿದೆ. ಹಾಗಾದರೆ ಸಂಜೆ 6 ಗಂಟೆಯ ನಂತರ ಅಪ್ಪಿತಪ್ಪಿಯೂ ಖರೀದಿಸಬಾರದ ಆ 4 ವಸ್ತುಗಳು ಯಾವುವು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

1. ಉಪ್ಪು (Salt)

ವಾಸ್ತು ಶಾಸ್ತ್ರದಲ್ಲಿ ಉಪ್ಪನ್ನು ಸಕಾರಾತ್ಮಕ ಶಕ್ತಿ ಮತ್ತು ಸಂಪತ್ತಿನ ಸಂಕೇತವೆಂದು ಪರಿಗಣಿಸಲಾಗುತ್ತದೆ. ಸೂರ್ಯಾಸ್ತದ ನಂತರ ಉಪ್ಪನ್ನು ಖರೀದಿಸಿ ಮನೆಗೆ ತರುವುದರಿಂದ ಹಣದ ನಷ್ಟ ಉಂಟಾಗುತ್ತದೆ. ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಕಾಸು ನಿಲ್ಲುವುದಿಲ್ಲ ಮತ್ತು ಅನಗತ್ಯ ಖರ್ಚುಗಳು ಹೆಚ್ಚಾಗುತ್ತವೆ. ಆದ್ದರಿಂದ ಉಪ್ಪನ್ನು ಯಾವಾಗಲೂ ಹಗಲಿನ ವೇಳೆಯಲ್ಲೇ ಖರೀದಿಸಬೇಕು.

2. ಸಾಸಿವೆ ಎಣ್ಣೆ (Mustard Oil)

ಧಾರ್ಮಿಕ ನಂಬಿಕೆಗಳ ಪ್ರಕಾರ, ಸಾಸಿವೆ ಎಣ್ಣೆಗೆ ಶನಿ ದೇವರೊಂದಿಗೆ ನೇರ ಸಂಬಂಧವಿದೆ. ಸಂಜೆಯ ನಂತರ ಸಾಸಿವೆ ಎಣ್ಣೆಯನ್ನು ಖರೀದಿಸುವುದರಿಂದ ಶನಿದೋಷ ಆವರಿಸಿ, ಮನೆಯಲ್ಲಿ ಆರ್ಥಿಕ ಅಸಮತೋಲನ ಸೃಷ್ಟಿಯಾಗುತ್ತದೆ ಎಂದು ನಂಬಲಾಗಿದೆ. ಜ್ಯೋತಿಷ್ಯದ ಪ್ರಕಾರ ಬೆಳಿಗ್ಗೆ ಅಥವಾ ಮಧ್ಯಾಹ್ನದ ವೇಳೆ ಇದನ್ನು ಖರೀದಿಸುವುದು ಅತ್ಯಂತ ಶುಭ.

3. ಪೊರಕೆ (Broom)

ಭಾರತೀಯ ಸಂಪ್ರದಾಯದಲ್ಲಿ ಪೊರಕೆಯನ್ನು ಸಾಕ್ಷಾತ್ ಲಕ್ಷ್ಮಿ ದೇವಿಯ ಸ್ವರೂಪ ಎಂದು ಪೂಜಿಸಲಾಗುತ್ತದೆ. ಹೀಗಾಗಿ, ಸೂರ್ಯಾಸ್ತದ ನಂತರ ಹೊಸ ಪೊರಕೆಯನ್ನು ಖರೀದಿಸುವುದು ಅಥವಾ ಮನೆಗೆ ತರುವುದು ಮನೆಗೆ ದಾರಿದ್ರ್ಯವನ್ನು ಆಹ್ವಾನಿಸಿದಂತೆ ಎಂದು ವಾಸ್ತು ತಜ್ಞರು ಎಚ್ಚರಿಸುತ್ತಾರೆ. ಪೊರಕೆ ಖರೀದಿಸಬೇಕಿದ್ದರೆ ಹಗಲಿನ ಸಮಯವನ್ನೇ ಆರಿಸಿಕೊಳ್ಳಿ.

4. ಕಪ್ಪು ಎಳ್ಳು (Black Sesame)

ಕಪ್ಪು ಎಳ್ಳನ್ನು ಸಾಮಾನ್ಯವಾಗಿ ಪಿತೃ ಕಾರ್ಯಗಳು (ಪೂರ್ವಜರ ಆಚರಣೆ), ಶನಿ ಪೂಜೆ ಹಾಗೂ ತಾಂತ್ರಿಕ ಆಚರಣೆಗಳಲ್ಲಿ ಹೆಚ್ಚಾಗಿ ಬಳಸಲಾಗುತ್ತದೆ. ಸಾಂಪ್ರದಾಯಿಕ ನಂಬಿಕೆಗಳ ಪ್ರಕಾರ, ಸಂಜೆಯ ನಂತರ ಕಪ್ಪು ಎಳ್ಳನ್ನು ಮನೆಗೆ ತರುವುದರಿಂದ ಮನೆಯಲ್ಲಿ ನಡೆಯಬೇಕಾದ ಶುಭ ಕಾರ್ಯಗಳಿಗೆ ವಿಘ್ನ ಎದುರಾಗುತ್ತದೆ.

Exit mobile version