ವೈದ್ಯ, ವಕೀಲರಂತೆಯೇ ಇನ್ಮುಂದೆ ಇಂಜಿನಿಯರ್ಸ್​ಗೂ ಪರವಾನಿಗೆ ಕಡ್ಡಾಯ ? ಶೀಘ್ರದಲ್ಲೇ ಬರಲಿದೆ ಹೊಸ ಕಾನೂನು

Professional Engineers Bill: ದೇಶದಲ್ಲಿ ಸುಧಾರಿತ ಮಾನದಂಗಳು ಹಾಗೂ ವೃತ್ತಿಪರ ಪಾರದರ್ಶಕತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಹೊಸ ಕಾನೂನನ್ನು ಪರಿಚಯಿಸಲು ಮುಂದಾಗಿದೆ. ದೇಶದಲ್ಲಿ ಇಂಜಿನಿಯರಿಂಗ್​ ವೃತ್ತಿ ವ್ಯವಸ್ಥೆಯನ್ನು ಮತ್ತಷ್ಟು ಸುಧಾರಿಸುವ ನಿಟ್ಟಿನಲ್ಲಿ ಇಂಜಿನಿಯರ್​​ಗಳಿಗೆ ಪರವಾನಿಗೆ ಪಡೆಯುವುದನ್ನು ಕಡ್ಡಾಯಗೊಳಿಸಾಗಿದೆ.

ವೃತ್ತಿಪರ ಇಂಜಿನಿಯರ್​ಗಳ ಮಸೂದೆ 2025ರ ಕರಡು ಬಹುತೇಕ ಸಿದ್ಧಗೊಂಡಿದ್ದು ಮುಂಬರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಇದನ್ನು ಮಂಡಿಸುವ ನಿರೀಕ್ಷೆಯಿದೆ. ಈ ಕಾನೂನಿಂದಾಗಿ ಇಂಜಿನಿಯರ್​ಗಳಿಗೆ ರಾಷ್ಟ್ರೀಯ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ.
ಐಐಟಿ ಮದ್ರಾಸ್‌ನ ಮಾಜಿ ನಿರ್ದೇಶಕ ಎಂ.ಎಸ್. ಅನಂತ್ ನೇತೃತ್ವದ ತಜ್ಞರ ಸಮಿತಿಯು ಈ ಕರಡನ್ನು ಸಿದ್ಧಪಡಿಸಿದೆ. ಶೀಘ್ರದಲ್ಲೇ ಎಐಸಿಟಿಇ ಈ ಮಸೂದೆಯನ್ನು ಅಂತಿಮಗೊಳಿಸಲಿದೆ. ಅಲ್ಲದೇ ಸಲಹೆಗಳನ್ನು ಚರ್ಚಿಸುವ ನಿಟ್ಟಿನಲ್ಲಿ ಮುಂದಿನ ವಾರ ಸಭೆ ಕೂಡ ಕರೆಯಲಾಗಿದೆ. ಕರಡು ಸಂಪೂರ್ಣ ಸಿದ್ಧವಾದ ಬಳಿಕ ಶಿಕ್ಷಣ ಸಚಿವಾಲಯವು ಸಂಸತ್ತಿನ ಮುಂದೆ ಇಡಲಿದೆ. ಡಿಸೆಂಬರ್​ 1ರಿಂದ 19ನೇ ತಾರೀಖಿನವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನದಲ್ಲಿ ಈ ಮಸೂದೆ ಮಂಡನೆಯಾಗುವ ನಿರೀಕ್ಷೆಯಿದೆ.

ಇದನ್ನೂ ಓದಿ: Kisan credit card scheme 2025: ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿ, ₹5 ಲಕ್ಷದವರೆಗೆ ಸಾಲ ಪಡೆಯಿರಿ!

ಈ ಮಸೂದೆ ದೇಶದಲ್ಲಿ ಜಾರಿಗೆ ಬಂದರೆ ವೈದ್ಯರು,ವಕೀಲರಂತೆಯೇ ಇಂಜಿನಿಯರ್​ಗಳಿಗೂ ಭಾರತೀಯ ವೃತ್ತಿಪರ ಇಂಜಿನಿಯರ್​ಗಳ ಮಂಡಳಿ ಆರಂಭಗೊಳ್ಳುತ್ತದೆ. ಈ ಮಂಡಳಿಯಲ್ಲಿ 27 ಸದಸ್ಯರು ಇರಲಿದ್ದಾರೆ. ಇದಾದ ಬಳಿಕ ಇಂಜಿನಿಯರ್​ಗಳು ಕೆಲಸ ಮಾಡಲು ಪರವಾನಿಗೆ ಪಡೆಯುವುದು ಕಡ್ಡಾಯವಾಗಲಿದೆ. ಶಿಕ್ಷಕ ವೃತ್ತಿಯಲ್ಲಿ ಮುಂದುವರಿಯಲು ಇಚ್ಛಿಸುವ ಇಂಜಿನಿಯರ್​ಗಳಿಗೆ ಈ ಪರವಾನಿಗೆ ಅವಶ್ಯಕತೆ ಇರುವುದಿಲ್ಲ.

Exit mobile version