LKG-UKG Admissions 2026: ಎಲ್‌ಕೆಜಿ, ಯುಕೆಜಿ ದಾಖಲಾತಿಗೆ ಹೊಸ ರೂಲ್ಸ್‌ : ಶಿಕ್ಷಣ ಇಲಾಖೆಯಿಂದ ಗೈಡ್‌ಲೈನ್ಸ್ ಬಿಡುಗಡೆ

ಸಮಗ್ರ ಶಿಕ್ಷಣ ಕರ್ನಾಟಕ (Samagra Shiksha Karnataka) ರಾಜ್ಯ ಯೋಜನಾ ನಿರ್ದೇಶಕರು ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.

LKG-UKG Admissions 2026 : ಬೆಂಗಳೂರು: ಕರ್ನಾಟಕದಲ್ಲಿ 2026-27ನೇ ಶೈಕ್ಷಣಿಕ ಸಾಲಿನ ಪೂರ್ವ ಪ್ರಾಥಮಿಕ (ECCE) ತರಗತಿಗಳ ಪ್ರವೇಶ ಪ್ರಕ್ರಿಯೆ ಈಗಾಗಲೇ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಸಮಗ್ರ ಶಿಕ್ಷಣ ಕರ್ನಾಟಕ (Samagra Shiksha Karnataka) ರಾಜ್ಯ ಯೋಜನಾ ನಿರ್ದೇಶಕರು ಎಲ್‌ಕೆಜಿ (LKG) ಮತ್ತು ಯುಕೆಜಿ (UKG) ಪ್ರವೇಶಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದಾರೆ.

ಪೂರ್ವ ಪ್ರಾಥಮಿಕ ಶಾಲೆಯ ದಾಖಲಾತಿ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅತ್ಯಂತ ಪಾರದರ್ಶಕತೆಯನ್ನು ತರುವ ಉದ್ದೇಶದಿಂದ ಪ್ರವೇಶಾತಿಗೆ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಲಾಗಿದೆ. ಪ್ರತೀ ಮಗುವಿನ ದಾಖಲಾತಿಯ ಮಾಹಿತಿಯನ್ನು ಕಡ್ಡಾಯವಾಗಿ UDISE+ ಪೋರ್ಟಲ್‌ನಲ್ಲಿ ಅಪ್ಡೇಟ್ ಮಾಡಬೇಕೆಂದು ಆದೇಶಿಸಿದೆ.

  : ಎಲ್‌ಕೆಜಿ, ಯುಕೆಜಿ ದಾಖಲಾತಿಗೆ ಮಾರ್ಗಸೂಚಿ : ಹೊಸ ನಿಯಮಗಳೇನು ?

1. ವಿದ್ಯಾರ್ಥಿಗಳ ಸಂಖ್ಯೆಗೆ ಮಿತಿ (Student Strength Limits):

Also Read : ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: 2026ನೇ ಸಾಲಿನ ಪ್ರೈಸ್ ಮನಿಗಾಗಿ ಅರ್ಜಿ ಆಹ್ವಾನ; ಈ ದಾಖಲೆಗಳಿದ್ದರೆ ತಕ್ಷಣ ಅರ್ಜಿ ಸಲ್ಲಿಸಿ

2. ದಾಖಲಾತಿ ಹೆಚ್ಚಳಕ್ಕೆ ಸ್ಪೆಷಲ್ ಡ್ರೈವ್ (Enrollment Drive):

ಈಗಾಗಲೇ ಕರ್ನಾಟಕದಲ್ಲಿ ಅನುಮೋದನೆ ಪಡೆದಿರುವ ಎಲ್ಲಾ ಪೂರ್ವ ಪ್ರಾಥಮಿಕ ತರಗತಿಗಳನ್ನು ತಕ್ಷಣದಿಂದಲೇ ಆರಂಭಿಸಬೇಕು. ಸರಕಾರಿ ಶಾಲೆಗಳಲ್ಲಿ ಮಕ್ಕಳ ದಾಖಲಾತಿಗಳನ್ನು ಹೆಚ್ಚಿಸುವ ಸಲುವಾಗಿ ವಿಶೇಷ ಅಭಿಯಾನಕೈಗೊಳ್ಳಬೇಕು. ಅಲ್ಲದೇ ವಿಶೇಷ ದಾಖಲಾತಿ ಆಂದೋಲನ ಹಮ್ಮಿಕೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.

3. ಶಿಕ್ಷಕರು, ಆಯಾಗಳ ಗೌರವಧನಕ್ಕೆ ಟ್ವಿಸ್ಟ್ (Honorarium Release Condition):

ಸರಕಾರಿ ಶಾಲೆಗಳಿಗೆ ಮಕ್ಕಳನ್ನು ಆಕರ್ಷಿಸುವ ಸಲುವಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಶಾಲೆಗೆ ದಾಖಲಾದ ಮಕ್ಕಳ ಸಂಪೂರ್ಣ ವಿವರಗಳನ್ನು UDISE+ ಪೋರ್ಟಲ್‌ನಲ್ಲಿ ನೋಂದಾಯಿಸುವುದು ಕಡ್ಡಾಯ. ಈ ಪೋರ್ಟಲ್‌ನಲ್ಲಿ ಅಪ್ಡೇಟ್ ಆಗುವ ದತ್ತಾಂಶದ (Data) ಆಧಾರದ ಮೇಲೆ ಮಾತ್ರ ಪೂರ್ವ ಪ್ರಾಥಮಿಕ ತರಗತಿಗಳ ಶಿಕ್ಷಕರು ಮತ್ತು ಆಯಾಗಳ (ಪಾಲಕರು/ಕೇರ್‌ಟೇಕರ್ಸ್) ಗೌರವಧನವನ್ನು (Honorarium) ಬಿಡುಗಡೆ ಮಾಡಲಾಗುತ್ತದೆ ಎಂದು ಸ್ಪಷ್ಟಪಡಿಸಲಾಗಿದೆ. ಡೇಟಾ ಎಂಟ್ರಿ ಮಾಡದೇ ಇದ್ರೆ ಶಿಕ್ಷಕರಿಗೆ ವೇತನ ಸಿಗುವುದು ಕಷ್ಟವಾಗಲಿದೆ.

Also Read : ಸಿಬಿಎಸ್ಇಯಲ್ಲಿ ತ್ರಿಭಾಷಾ ಸೂತ್ರ ಜಾರಿ: 9-10ನೇ ತರಗತಿಗೆ 3 ಭಾಷೆ ಕಡ್ಡಾಯ – ಜುಲೈ 1ರಿಂದ ಹೊಸ ನಿಯಮ!

LKG-UKG Admissions 2026 : ಅಧಿಕಾರಿಗಳ ಖಡಕ್‌ ಎಚ್ಚರಿಕೆಯಲ್ಲಿ ಏನಿದೆ ?

ಪೂರ್ವ ಪ್ರಾಥಮಿಕ ತರಗತಿಗಳ ದಾಖಲಾತಿಯು ನಿಗದಿಪಡಿಸಿದ ಗುರಿಯನ್ನು ತಲುಪದಿದ್ದರೆ, ಅದಕ್ಕೆ ಆಯಾ ತಾಲೂಕು ಮತ್ತು ಜಿಲ್ಲಾ ECCE ನೋಡಲ್ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು (BEO) ಮತ್ತು ಉಪನಿರ್ದೇಶಕರನ್ನು (DDPI) ನೇರ ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಸುತ್ತೋಲೆಯಲ್ಲಿ ಎಚ್ಚರಿಸಲಾಗಿದೆ.

ಈಗಾಗಲೇ ಈ ಆದೇಶದ ಪ್ರತಿಗಳನ್ನು ರಾಜ್ಯದ ಎಲ್ಲಾ ಡಿಡಿಪಿಐ (DDPI), ಬಿಇಒ (BEO)ಗಳು ಹಾಗೂ ಸರ್ಕಾರಿ ಪ್ರಾಥಮಿಕ ಶಾಲೆಗಳ ಮುಖ್ಯೋಪಾಧ್ಯಾಯರಿಗೆ (Headmasters) ತಕ್ಷಣದ ಕ್ರಮಕ್ಕಾಗಿ ರವಾನಿಸಲಾಗಿದೆ.

UDISE+ ಪೋರ್ಟಲ್‌ನಲ್ಲಿ ವಿದ್ಯಾರ್ಥಿಗಳ ಡೇಟಾ ಎಂಟ್ರಿ ಮಾಡುವ ವಿಧಾನ

ಯುಡಿಐಎಸ್ಇ+ (UDISE+) ಪೋರ್ಟಲ್‌ನಲ್ಲಿ ಎಲ್‌ಕೆಜಿ-ಯುಕೆಜಿ ವಿದ್ಯಾರ್ಥಿಗಳ ಮಾಹಿತಿಯನ್ನು ಹಂತ ಹಂತವಾಗಿ ಹೇಗೆ ಅಪ್ಡೇಟ್ ಮಾಡಬೇಕೆಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಹಂತ 1: ಲಾಗಿನ್

ಹಂತ 2: ‘Add Student’ ಆಯ್ಕೆ ಮಾಡಿ

ಹಂತ 3: ವಿದ್ಯಾರ್ಥಿಯ ವಿವರಗಳನ್ನು ನಮೂದಿಸಿ

ಹಂತ 4: ಪೋಷಕರು ಮತ್ತು ಶಾಲಾ ವಿವರಗಳನ್ನು ನೀಡಿ

ಹಂತ 5: ಉಳಿಸಿ ಮತ್ತು ಅಂತಿಮಗೊಳಿಸಿ

ಎಲ್ಲಾ ವಿವರಗಳನ್ನು ಸರಿಯಾಗಿ ತುಂಬಿದ ನಂತರ, ‘Save’ ಅಥವಾ ‘Submit’ ಬಟನ್ ಕ್ಲಿಕ್ ಮಾಡಿ. ಮಾಹಿತಿ ಉಳಿಸಿದ ನಂತರ, ‘Finalize’ ಅಥವಾ ‘Done’ ಬಟನ್ ಒತ್ತಿ, ಪ್ರಕ್ರಿಯೆಯನ್ನು ಪೂರ್ಣಗೊಳಿಸಿ.

ಈ ಹಂತಗಳನ್ನು ಅನುಸರಿಸಿ ನೀವು ಮಕ್ಕಳ ವಿವರಗಳನ್ನು ಸುಲಭವಾಗಿ ಅಪ್ಡೇಟ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ನಿಮ್ಮ ಶಾಲೆಯ ಆಡಳಿತ ಮಂಡಳಿಯನ್ನು ಸಂಪರ್ಕಿಸಿ.

Karnataka LKG-UKG Admissions 2026-27: Education Dept Releases Major Guidelines Kannada News

Exit mobile version