ಸಿಬಿಎಸ್ಇಯಲ್ಲಿ ತ್ರಿಭಾಷಾ ಸೂತ್ರ ಜಾರಿ: 9-10ನೇ ತರಗತಿಗೆ 3 ಭಾಷೆ ಕಡ್ಡಾಯ – ಜುಲೈ 1ರಿಂದ ಹೊಸ ನಿಯಮ!
2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಜಾರಿಗೊಳಿಸಿದೆ.
2026-27ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅನುಗುಣವಾಗುವಂತೆ ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿಯು 9 ಹಾಗೂ 10ನೇ ತರಗತಿ ವಿದ್ಯಾರ್ಥಿಗಳಿಗೆ ತ್ರಿಭಾಷಾ ಸೂತ್ರ ಜಾರಿಗೊಳಿಸಿದೆ. ಈ ನಿಯಮದ ಪ್ರಕಾರ ಜುಲೈ 1 ರಿಂದ ಅನ್ವಯವಾಗುವಂತೆ ಸಿಬಿಎಸ್ಇ ವಿದ್ಯಾರ್ಥಿಗಳು 9 ಹಾಗೂ 10ನೇ ತರಗತಿಯಲ್ಲಿ ಮೂರು ಭಾಷೆಗಳನ್ನು ಅಧ್ಯಯನ ಮಾಡಬೇಕಿದೆ.
ಆದರೆ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಮೇಲೆ ಹೆಚ್ಚಿನ ಒತ್ತಡ ಆಗದಂತೆ ತಡೆಯುವ ಉದ್ದೇಶದಿಂದ ಮೂರನೇ ಭಾಷೆಗೆ ಯಾವುದೇ ಬೋರ್ಡ್ ಪರೀಕ್ಷೆ ಇರುವುದಿಲ್ಲ ಎಂದು ಮಂಡಳಿ ತಿಳಿಸಿದೆ. ಇದರ ಮೌಲ್ಯಮಾಪನವು ಸಂಪೂರ್ಣವಾಗಿ ಶಾಲಾ ಮಟ್ಟದಲ್ಲೇ ನಡೆಯುತ್ತದೆ. ಆದರೆ ಇದರ ಅಂಕಗಳನ್ನು CBSE ಅಂತಿಮ ಪ್ರಮಾಣಪತ್ರದಲ್ಲಿ ದಾಖಲಿಸಲಾಗುತ್ತದೆ.
ಇನ್ನು 2026-27ರ ಶೈಕ್ಷಣಿಕ ಸಾಲಿಗೆ ಹೊಸ ಪಠ್ಯಪುಸ್ತಕಗಳು ಬರುವವರೆಗೆ, ತಾತ್ಕಾಲಿಕವಾಗಿ 6ನೇ ತರಗತಿಯ R3 ಪಠ್ಯಪುಸ್ತಕಗಳನ್ನೇ ಬಳಸಲು ಸೂಚಿಸಲಾಗಿದೆ.ಸ್ಥಳೀಯ ಭಾಷಾ ಶಿಕ್ಷಕರ ಕೊರತೆ ಇದ್ದರೆ, ನಿವೃತ್ತ ಶಿಕ್ಷಕರು ಅಥವಾ ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲು ಶಾಲೆಗಳಿಗೆ ಸಿಬಿಎಸ್‌ಇ ವಿನಾಯಿತಿ ನೀಡಿದೆ.
Also Read: ಸರ್ಕಾರಿ ಶಾಲೆಗಳಿಗೆ ‘ಪಿಎಂಶ್ರೀ’ ಸ್ಪರ್ಶ: 317 ಶಾಲೆಗಳ ಹೈಟೆಕ್ ರೂಪಾಂತರ!
ವಿದ್ಯಾರ್ಥಿಗಳು ವಿದೇಶಿ ಭಾಷೆಯನ್ನು ಆಯ್ಕೆ ಮಾಡಬಹುದು, ಆದರೆ ಇತರ ಎರಡು ಆಯ್ಕೆಗಳು ಭಾರತೀಯ ಭಾಷೆಗಳಾಗಿದ್ದರೆ ಮಾತ್ರ ವಿದೇಶಿ ಭಾಷೆಯ ಆಯ್ಕೆಗೆ ಅವಕಾಶ ಇರಲಿದೆ.. ವಿದೇಶಿ ಭಾಷೆಗಳನ್ನು ನಾಲ್ಕನೇ ಹೆಚ್ಚುವರಿ ವಿಷಯವಾಗಿ ತೆಗೆದುಕೊಳ್ಳಬಹುದು ಎಂದು ಬೋರ್ಡ್ ತಿಳಿಸಿದೆ.
Trilingual formula implemented in CBSE 3 languages compulsory for class 9th -10th New rule from July 1



