ಪೋಷಕರೇ ಗಮನಿಸಿ : ಇನ್ಮುಂದೆ ಮಕ್ಕಳ ಅಂಕಪಟ್ಟಿ ಮೊಬೈಲ್‌ನಲ್ಲೇ ಇರಬೇಕು, ಏನಿದು ಹೊಸ ರೂಲ್ಸ್‌ ?

digilocker new rules : ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈಗಾಗಲೇ 2026ರ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ ಫಲಿತಾಂಶಗಳನ್ನು ಡಿಜಿ ಲಾಕರ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಈ ರೂಲ್ಸ್‌ ಜಾರಿಗೆ ಬರಲಿದೆ.

digilocker new rules : ಬೆಂಗಳೂರು: ಕರ್ನಾಟಕದ ಶಿಕ್ಷಣ ಕ್ಷೇತ್ರ ಬದಲಾವಣೆಯನ್ನು ಕಾಣುತ್ತಿದೆ. ಶಾಲೆ ಮುಗಿದ ನಂತರ ಅಂಕಪಟ್ಟಿ (Marks Card) ಅಥವಾ ವರ್ಗಾವಣೆ ಪತ್ರ (TC) ಪಡೆಯಲು ಇನ್ನು ಮುಂದೆ ಶಾಲೆಯ ಕಚೇರಿ ಮುಂದೆ ಗಂಟೆಗಟ್ಟಲೆ ಕಾಯುವ ಅಗತ್ಯ ಇರೋದಿಲ್ಲ. ಜೊತೆಗೆ ಆ ದಾಖಲೆಗಳನ್ನು ಜೋಪಾನವಾಗಿ ಫೈಲ್‌ಗಳಲ್ಲಿ ಇಟ್ಟುಕೊಳ್ಳುವ ಆತಂಕವೂ ಇಲ್ಲ. ಯಾಕೆಂದರೆ, ಕರ್ನಾಟಕ ಸರ್ಕಾರವು ವಿದ್ಯಾರ್ಥಿಗಳ ಎಲ್ಲಾ ಶೈಕ್ಷಣಿಕ ದಾಖಲೆಗಳನ್ನು ‘ಡಿಜಿ ಲಾಕರ್’ (DigiLocker) ಮೂಲಕವೇ ವಿತರಿಸಲು ಕಡ್ಡಾಯಗೊಳಿಸಿದೆ.

ಡಿಜಿ ಲಾಕರ್ ಕಡ್ಡಾಯ : ಏನಿದು ಹೊಸ ರೂಲ್ಸ್‌ ?

ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಈಗಾಗಲೇ 2026ರ ಸಾಲಿನ ಎಸ್‌ಎಸ್‌ಎಲ್‌ಸಿ (SSLC) ಮತ್ತು ಪಿಯುಸಿ ಫಲಿತಾಂಶಗಳನ್ನು ಡಿಜಿ ಲಾಕರ್‌ನಲ್ಲಿ ಲಭ್ಯವಾಗುವಂತೆ ಮಾಡಿದೆ. ಆದರೆ ಮುಂದಿನ ಶೈಕ್ಷಣಿಕ ವರ್ಷದಿಂದ ಕಡ್ಡಾಯವಾಗಿ ಈ ರೂಲ್ಸ್‌ ಜಾರಿಗೆ ಬರಲಿದೆ. 2026-27ನೇ ಸಾಲಿನಿಂದ ರಾಜ್ಯದ ಎಲ್ಲಾ ವಿದ್ಯಾರ್ಥಿಗಳಿಗೆ ಭೌತಿಕ (Physical) ಅಂಕಪಟ್ಟಿಗಳ ವಿತರಣೆಯನ್ನು ಹಂತ ಹಂತವಾಗಿ ನಿಲ್ಲಿಸಿ, ಕೇವಲ ಡಿಜಿಟಲ್ ರೂಪದಲ್ಲಿ ಮಾತ್ರ ನೀಡಲು ಸರ್ಕಾರ ಸಜ್ಜಾಗಿದೆ.

ಪೋಷಕರಿಗೆ ಯಾಕೆ ಇದು ಅತಿ ಮುಖ್ಯ?

ಮುಂದಿನ ವರ್ಷಗಳಲ್ಲಿ ಕಾಲೇಜು ಅಡ್ಮಿಷನ್ ಅಥವಾ ಉನ್ನತ ವ್ಯಾಸಂಗಕ್ಕೆ ದಾಖಲಾತಿ ಪಡೆಯುವಾಗ, ಡಿಜಿ ಲಾಕರ್‌ನಲ್ಲಿರುವ ದಾಖಲೆಗಳನ್ನೇ ತೋರಿಸುವುದು ಕಡ್ಡಾಯವಾಗಲಿದೆ. ಪೋಷಕರು ತಮ್ಮ ಮಕ್ಕಳ ಆಧಾರ್ ಕಾರ್ಡ್‌ಗೆ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಯನ್ನು ಸರಿಯಾಗಿ ಇಟ್ಟುಕೊಳ್ಳುವುದು ಈಗ ಅನಿವಾರ್ಯ.

Also Read : 10 ಸಾವಿರ ರೂಪಾಯಿ ಒಳಗೆ ಖರೀದಿಗೆ ಯಾವ ಸ್ಮಾರ್ಟ್‌ಪೋನ್‌ ಬೆಸ್ಟ್‌ : Poco, Samsung, Moto ಬಿಗ್‌ ಫೈಟ್‌

ಡಿಜಿಟಲ್ ಲಾಕರ್‌ನ ಪ್ರಯೋಜನಗಳೇನು?

ಡಿಜಿ ಲಾಕರ್ ನಿಂದ ಅಂಕಪಟ್ಟಿ ಡೌನ್‌ಲೋಡ್ ಮಾಡುವುದು ಹೇಗೆ ?

ಖಾಸಗಿ ಶಾಲೆಗಳಿಗೂ ಡಿಜಿ ಲಾಕರ್ ಅನ್ವಯ

ಡಿಜಿ ಲಾಕರ್‌ ಕಡ್ಡಾಯಗೊಳಿಸಿರುವುದು ಕೇವಲ ಸರಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಮಾತ್ರವಲ್ಲ. ಕರ್ನಾಟಕದಲ್ಲಿ ರಾಜ್ಯ ಪಠ್ಯಕ್ರಮ ಅನುಸರಿಸುವ ಎಲ್ಲಾ ಅನುದಾನಿತ ಮತ್ತು ಅನುದಾನರಹಿತ ಖಾಸಗಿ ಶಾಲೆಗಳಿಗೂ ಅನ್ವಯವಾಗಲಿದೆ. ವರ್ಗಾವಣೆ ಪತ್ರ (TC) ಕೂಡ ಇನ್ಮುಂದೆ ಡಿಜಿಟಲ್ ರೂಪದಲ್ಲೇ ಲಭ್ಯವಾಗುವಂತೆ ಸಾಫ್ಟ್‌ವೇರ್ ಅಪ್‌ಡೇಟ್ ಮಾಡಲಾಗುತ್ತಿದೆ.

Also Read : Mobile screen replacement : ನಿಮ್ಮ ಫೋನ್‌ನಲ್ಲಿ ಹಸಿರು ಗೆರೆ ಇದೆಯೇ? ಫ್ರೀಯಾಗಿ ಬದಲಾಯಿಸಲು ಬಂದಿದೆ ಹೊಸ ರೂಲ್ಸ್

ತಂತ್ರಜ್ಞಾನದ ಈ ಬದಲಾವಣೆಗೆ ಪೋಷಕರು ಇಂದೇ ಸಜ್ಜಾಗಬೇಕಿದೆ. ನಿಮ್ಮ ಮಗುವಿನ ಆಧಾರ್ ಕಾರ್ಡ್ ಅಪ್‌ಡೇಟ್ ಆಗಿದೆಯೇ ಮತ್ತು ಅದಕ್ಕೆ ಸರಿಯಾದ ಮೊಬೈಲ್ ಸಂಖ್ಯೆ ಲಿಂಕ್ ಆಗಿದೆಯೇ ಎಂಬುದನ್ನು ಇಂದೇ ಖಚಿತಪಡಿಸಿಕೊಳ್ಳುವುದು ಉತ್ತಮ.

Karnataka students marks card mobile digilocker new rules

Exit mobile version