ನಾಸಾದಲ್ಲಿ ಕೆಲಸ ಮಾಡುವ ಆಸೆಯೇ? ಕಾಲೇಜು ವಿದ್ಯಾರ್ಥಿಗಳಿಗೆ ಸುವರ್ಣಾವಕಾಶ!

NASA Summer Internships 2026: ಬಾಹ್ಯಾಕಾಶ ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ಆಸಕ್ತಿ ಹೊಂದಿರುವ ಕಾಲೇಜು ವಿದ್ಯಾರ್ಥಿಗಳಿಗೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ (NASA) ಈ ಬಾರಿ ಸುವರ್ಣಾವಕಾಶವನ್ನು ನೀಡಿದೆ. 2026ರ ಬೇಸಿಗೆಯ ಇಂಟರ್ನ್‌ಶಿಪ್‌ಗಾಗಿ (Summer Internships) ಅರ್ಜಿಗಳನ್ನು ಆಹ್ವಾನಿಸಲಾಗಿದ್ದು, ಫೆಬ್ರವರಿ 27, 2026ರೊಳಗೆ ಅರ್ಜಿ ಸಲ್ಲಿಸಲು ಗಡುವು ನೀಡಲಾಗಿದೆ.

ಏನಿದು ಅವಕಾಶ?
ನಾಸಾದ ಓಸ್ಟೆಮ್ (OSTEM) ವಿಭಾಗವು ಈ ಇಂಟರ್ನ್‌ಶಿಪ್ ಆಯೋಜಿಸಿದ್ದು, ಇದು ಸಂಪೂರ್ಣವಾಗಿ ವೇತನ ಸಹಿತ (Paid Internship) ಕೆಲಸವಾಗಿದೆ. ಇಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳು ನಾಸಾದ ವಿಜ್ಞಾನಿಗಳು ಮತ್ತು ಎಂಜಿನಿಯರ್‌ಗಳ ಮಾರ್ಗದರ್ಶನದಲ್ಲಿ ನೈಜ ಪ್ರಾಜೆಕ್ಟ್‌ಗಳ ಮೇಲೆ ಕೆಲಸ ಮಾಡುವ ಅವಕಾಶ ಪಡೆಯಲಿದ್ದಾರೆ. ಪೂರ್ಣ ಸಮಯ ಅಥವಾ ಅರೆಕಾಲಿಕವಾಗಿ ಕೆಲಸ ಮಾಡಲು ಇಲ್ಲಿ ಅವಕಾಶವಿದೆ.

ಅರ್ಜಿ ಸಲ್ಲಿಸಲು ಪ್ರಮುಖ ಸಲಹೆಗಳು: ಅರ್ಜಿದಾರರ ಸ್ಪರ್ಧೆ ಹೆಚ್ಚಿರುವುದರಿಂದ, ಅಭ್ಯರ್ಥಿಗಳು ತಮ್ಮ ಅಪ್ಲಿಕೇಶನ್‌ನಲ್ಲಿ ಈ ಕೆಳಗಿನ ಅಂಶಗಳಿಗೆ ಒತ್ತು ನೀಡಬೇಕು:

ಬಾಹ್ಯಾಕಾಶ ಮತ್ತು ನಾವೀನ್ಯತೆಯ ಬಗ್ಗೆ ಕನಸು ಕಾಣುವ ವಿದ್ಯಾರ್ಥಿಗಳಿಗೆ ಇದು ವೃತ್ತಿಜೀವನದ ಮೊದಲ ಮೆಟ್ಟಿಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ವಿದ್ಯಾರ್ಥಿಗಳು ನಾಸಾದ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

Exit mobile version