ಮುಂಬೈ : ಜ್ಞಾನೇಶ್ ಕುಮಾರ್ ಅವರನ್ನು ಪದಚ್ಯುತಿಗೊಳಿಸುವಂತೆ ಆಗ್ರಹಿಸಿ ಮುಂಬೈನಲ್ಲಿ ಸಿಜೆಪಿ ನಡೆಸಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಬಾಲಿವುಡ್ ನಟ ಇಮ್ರಾನ್ ಖಾನ್ ಅಕ್ಟೋಬರ್ 28ರ ಒಳಗಾಗಿ ಭಾರತ ತೊರೆಯುವಂತೆ ಮುಂಬೈ ಪೊಲೀಸರು ನೋಟೀಸ್ ಜಾರಿ ಮಾಡಿದ್ದಾರೆ.
ಅಕ್ಟೋಬರ್ 10ರಂದು ಮುಂಬೈನ ಅಗಸ್ಟ್ ಕ್ರಾಂತಿ ಮೈದಾನದಲ್ಲಿ ಜಿರಳೆ ಜನತಾ ಪಕ್ಷ ಪ್ರತಿಭಟನೆಯನ್ನು ನಡೆಸಿತ್ತು. ಈ ಪ್ರತಿಭಟನೆಯಲ್ಲಿ ಬಾಲಿವುಡ್ ನಟ ಅಮೀರ್ ಖಾನ್ ಸಹೋದರ, ನಟ ಇಮ್ರಾನ್ ಖಾನ್ ಕೂಡ ಪಾಲ್ಗೊಂಡಿದ್ದರು. ಇಮ್ರಾನ್ ಖಾನ್, ಅವರ ಸಂಗಾತಿ ಲೇಖಾ ವಾಷಿಂಗ್ಟನ್ ಹಾಗೂ ಸಂಬಂಧಿ ಜೈನ್ ಮೇರಿ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದರು.
ಪೊಲೀಸ್ ವಾಹನದಲ್ಲಿ ತೆರಳುತ್ತಿದ್ದ ವೇಳೆಯಲ್ಲಿ, ಪೊಲೀಸರು ನಡೆಸಿದ್ದಾರೆ ಎನ್ನಲಾದ ವಿಡಿಯೋವನ್ನು ಇಮ್ರಾನ್ ಖಾನ್ ಪೋಸ್ಟ್ ಮಾಡಿದ್ದರು. ಅಮೇರಿಕಾದ ಪ್ರಜೆ ಆಗಿರುವ ಇಮ್ರಾನ್ ಖಾನ್ ಅವರು ಇದೇ ತಿಂಗಳ 28ರ ಒಳಗಾಗಿ ಭಾರತವನ್ನು ತೊರೆಯಲು ಮುಂಬೈ ಪೊಲೀಸರು ನೋಟೀಸ್ ನೀಡಿದ್ದಾರೆ.
ನಟ ಇಮ್ರಾನ್ ಖಾನ್ 1983ರಲ್ಲಿ ಅಮೇರಿಕಾದಲ್ಲಿ ಜನಿಸಿದ್ದ ಇಮ್ರಾನ್ ಖಾನ್ ಮುಂಬೈ ಹಾಗೂ ಅಮೇರಿಕಾದ ಮ್ಯಾಡಿಸನ್ ನಗರದಲ್ಲಿ ವಾಸವಾಗಿದ್ದರು. ಅಮಿರ್ ಖಾನ್ ನಟನೆಯ ಖಯಾಮತ್ ಸೇ ಖಯಾಮತ್ ತಕ್ ಸಿನಿಮಾದ ಮೂಲಕ ಬಾಲ ನಟನಾಗಿ ಇಮ್ರಾನ್ ಖಾನ್ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದರು. ಜೋ ಜೀತಾ ವೋಹಿ ಸಿಕಂದರ್, ಮಾತೃ ಕೀ ಬಿಜ್ಲಿ ಕಾ ಮಂಡೋಲಾ ಸೇರಿ ಸಾಕಷ್ಟು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ವಿದೇಶಿ ಪ್ರಜೆ ಆಗಿರುವ ಇಮ್ರಾನ್ ಖಾನ್ಗೆ ಭಾರತದಲ್ಲಿ ಪ್ರತಿಭಟನೆ ನಡೆಸುವ ಮತ್ತು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವ ಅವಕಾಶವಿಲ್ಲ. ಇದೀಗ ಇಮ್ರಾನ್ ಖಾನ್ ವಲಸೆ ಕಾಯ್ದೆಯನ್ನು ಉಲ್ಲಂಘನೆ ಮಾಡಿದ್ದು, ಈ ಕಾಯ್ದೆಯ ವಿರುದ್ದವಾಗಿ ನಡೆದುಕೊಂಡ ಕಾರಣಕ್ಕೆ ಅವರನ್ನು ಗಡಿಪಾರು ಶಿಕ್ಷೆಗೆ ಗುರಿಪಡಿಸಲು ಅವಕಾಶವಿದೆ. ಅಷ್ಟೇ ಅಲ್ಲದೇ ಕೆಲವು ರಾಷ್ಟ್ರೀಯ ಮಾಧ್ಯಮಗಳು ಅಮೇರಿಕಾ ಪ್ರಜೆ ಆಗಿರುವ ಇಮ್ರಾನ್ ಖಾನ್ ಅವರಿಗೆ ಒಸಿಐ ಕಾರ್ಡ್ ಮಾತ್ರವೇ ಇದೆ ಎಂದು ವರದಿ ಮಾಡಿವೆ.