entertainmentಪ್ರಮುಖ ಸುದ್ದಿಗಳು

ರೇಣುಕಾಸ್ವಾಮಿ ಕೊಲೆ ಪ್ರಕರಣ: ಗಾಬರಿಯಾಗಿ ಸಾಕ್ಷಿ ಹೇಳದ ಚಿಕ್ಕಣ್ಣ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಇಂದು ಚಿಕ್ಕಣ್ಣ ಹಾಜರಾಗಿದ್ದರು.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
renukaswamy case actor chikkanna fear testimony court
renukaswamy case actor chikkanna fear testimony court

ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ನಡೆಸುತ್ತಿರುವ ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಇಂದು ಚಿಕ್ಕಣ್ಣ ಹಾಜರಾಗಿದ್ದರು. ಆದರೆ ಸಾಕ್ಷಿ ಹೇಳುವ ವೇಳೆಯಲ್ಲಿ ಚಿಕ್ಕಣ್ಣ ಗಾಬರಿಯಾದ್ರು, ನ್ಯಾಯಾಧೀಶರು ಒಂದು ದಿನ ಕಾಲಾವಕಾಶವನ್ನು ನೀಡಿದ್ದಾರೆ. ಮತ್ತೊಂದಡೆಯಲ್ಲಿ ನಟ ಯಶಸ್‌ ಸೂರ್ಯ ತಮ್ಮ ಹೇಳಿಕೆಯನ್ನು ದಾಖಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಪ್ರಕರಣ ಆರೋಪ ಎದುರಿಸುತ್ತಿರುವ ನಟ ದರ್ಶನ್‌ ತೂಗುದೀಪ ಅವರ ಆಪ್ತರಾದ ನಟ ಚಿಕ್ಕಣ್ಣ ಹಾಗೂ ಯಶಸ್‌ ಸೂರ್ಯ ಇಂದು ಬೆಂಗಳೂರಿನ ಸೆಷನ್ಸ್‌ ಕೋರ್ಟ್‌ಗೆ ಖುದ್ದು ಹಾಜರಾಗಿದ್ದಾರೆ. ನಟ ಚಿಕ್ಕಣ್ಣ ಅವರನ್ನು ನ್ಯಾಯಾಧೀಶರು ವಿಚಾರಣೆ ನಡೆಸಲು ಮುಂದಾದ ವೇಳೆ, ಚಿಕ್ಕಣ್ಣ ತಡವರಿಸಿದ್ದಾರೆ.

ನ್ಯಾಯಾಧೀಶರು ಕೂಡಲೇ ಏನಾಯ್ತು ಎಂದು ಅವರನ್ನು ಪ್ರಶ್ನಿಸಿದಾಗ ಗಾಬರಿ ಆದ್ರು. ಇದೇ ಮೊದಲ ಬಾರಿಗೆ ನಾನು ನ್ಯಾಯಾಲಯಕ್ಕೆ ಹಾಜರಾಗಿದ್ದೇನೆ, ಇದರಿಂದಾಗಿ ನನಗೆ ಟೆನ್ಶನ್‌ ಆಗ್ತಾ ಇದೆ ಎಂಬ ಹೇಳಿಕೆ ನೀಡಿದ್ದಾರೆ. ನ್ಯಾಯಾಧೀಶರು ಚಿಕ್ಕಣ್ಣ ಅವರಿಗೆ ವಿಶ್ರಾಂತಿ ಪಡೆಯುವಂತೆ ಸೂಚಿಸಿದ್ದಾರೆ.

ಇನ್ನು ನಟ ಯಶಸ್‌ ಸೂರ್ಯ ಅವರ ಹೇಳಿಕೆಯನ್ನು ನ್ಯಾಯಾಧೀಶರು ದಾಖಲಿಸಿದ್ದಾರೆ. ಯಶಸ್‌ ಸೂರ್ಯ ಅವರಿಗೆ ಸರಕಾರಿ ಅಭಿಯೋಜಕರು ಕ್ರಾಸ್‌ ಎಕ್ಸಾಮಿನೇಷನ್ ಗೆ ಅವಕಾಶ ಕೇಳಿದ್ದಾರೆ. ಚಿಕ್ಕಣ್ಣ ಎರಡನೇ ಬಾರಿಯೂ ಒತ್ತಡಕ್ಕೆ ಒಳಗಾದ ಕಾರಣದಿಂದಾಗಿ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಬುಧವಾರಕ್ಕೆ ಮುಂದೂಡಿಕೆ ಮಾಡಿದೆ.

ನಟ ದರ್ಶನ್‌ ತೂಗುದೀಪ್‌ ಅವರ ಆಪ್ತನಾಗಿದ್ದ ಪ್ರದೂಷ್‌ ಮಾಫಿ ಸಾಕ್ಷಿಯಾಗಿ ತನ್ನ ಹೇಳಿಕೆ ದಾಖಲಿಸಿದ್ದ. ನಟ ದರ್ಶನ್‌, ಪವಿತ್ರಾ ಗೌಡ ಸೇರಿದಂತೆ ಪ್ರಮುಖ ಆರೋಪಿಗಳ ಸಮ್ಮುಖದಲ್ಲಿಯೇ ನ್ಯಾಯಾಧೀಶರು ಪ್ರದೂಷ್‌ನ ಹೇಳಿಕೆಯನ್ನು ಪಡೆದಿದ್ದಾರೆ.

ಆರೋಪಿ ಪ್ರದೂಷ್‌ ರೇಣುಕಾಸ್ವಾಮಿ ಕೊಲೆ ನಡೆದ ಪಟ್ಟಣಗೆರೆಯ ಶೆಡ್‌ ನಲ್ಲಿ ನಡೆದಿರುವ ಘಟನೆ, ಆ ನಂತರದಲ್ಲಿ ನಡೆದಿರುವ ಘಟನೆಯ ಕುರಿತು ಸಂಪೂರ್ಣ ಮಾಹಿತಿಯನ್ನೂ ಕೂಡ ನ್ಯಾಯಾಧೀಶರ ಮುಂದೆ ವಿವರಿಸಿದ್ದಾರೆ.

Topics

ಸಂಬಂಧಿತ ಸುದ್ದಿಗಳು