Kannada News Next

entertainment

ಬಿಗ್‌ಬಾಸ್ ಕನ್ನಡ ಸೀಸನ್ 13 ಗ್ರಾಂಡ್ ಓಪನಿಂಗ್: ದೊಡ್ಮನೆಗೆ ಎಂಟ್ರಿ ಕೊಟ್ಟ 16 ಸ್ಪರ್ಧಿಗಳ ಕಂಪ್ಲೀಟ್ ಲಿಸ್ಟ್!

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13 ಅತ್ಯಂತ ಅದ್ದೂರಿಯಾಗಿ ಆರಂಭಗೊಂಡಿದೆ.

By Meghana Pranuth | ಮೇಘನಾ ಪ್ರಣೂತ್‌
BiggKannada13

ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 13 ಅತ್ಯಂತ ಅದ್ದೂರಿಯಾಗಿ ಆರಂಭಗೊಂಡಿದೆ. ಕಿಚ್ ಸುದೀಪ್ ಅವರ ಸಾರಥ್ಯದಲ್ಲಿ ಆರಂಭವಾಗಿರುವ ಈ ಬಾರಿಯ ಆವೃತ್ತಿಯಲ್ಲಿ ವಿವಿಧ ಕ್ಷೇತ್ರಗಳ 16 ಸ್ಪರ್ಧಿಗಳು 'ದೊಡ್ಮನೆ'ಯನ್ನು ಪ್ರವೇಶಿಸಿದ್ದಾರೆ. ಸೆಲೆಬ್ರಿಟಿಗಳು ಹಾಗೂ ವಿಭಿನ್ನ ಹಿನ್ನೆಲೆಯಿಂದ ಬಂದ ಸ್ಪರ್ಧಿಗಳ ಸಂಪೂರ್ಣ ವಿವರ ಇಲ್ಲಿದೆ:

ಜಗ ಮಮ್ಮಿ / ಜಗದೀಶ್:

ಜಗ ಮಮ್ಮಿ / ಜಗದೀಶ್

'ಲವ್ ಮಾಕ್ಟೇಲ್-3' ಚಿತ್ರದ ಜಗ್ಗು ಮಮ್ಮಿ ಪಾತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿರುವ ಇವರು ಮಂಡ್ಯದ ಮಹದೇವಪುರ ನಿವಾಸಿ. ಹಿಂದೆ ಮನೆಗಳಲ್ಲಿ ಅಡುಗೆ ಕೆಲಸ ಮಾಡಿಕೊಂಡಿದ್ದ ಜಗದೀಶ್, ಆಸ್ಕರ್ ಹಾಗೂ ನ್ಯಾಷನಲ್ ಅವಾರ್ಡ್ ಪಡೆದು ಹಾಲಿವುಡ್‌ಗೆ ಹೋಗುವ ದೊಡ್ಡ ಕನಸಿನೊಂದಿಗೆ ಬಿಗ್‌ಬಾಸ್ ಮನೆಗೆ ಪ್ರಥಮ ಸ್ಪರ್ಧಿಯಾಗಿ ಆಗಮಿಸಿದ್ದಾರೆ.

ಸೌಂದರ್ಯ ಶೆಟ್ಟಿ:

ಸೌಂದರ್ಯ ಶೆಟ್ಟಿ

ಮಸ್ಕತ್‌ನಲ್ಲಿ ಹುಟ್ಟಿ ಮಂಗಳೂರಿನಲ್ಲಿ ಬೆಳೆದು ಸದ್ಯ ಮುಂಬೈನಲ್ಲಿ ವಾಸವಿರುವ ಸ್ಟೈಲಿಶ್ ಮತ್ತು ಕಾನ್ಫಿಡೆಂಟ್ ಮಾಡೆಲ್ ಕ್ಯುಟ್ ನಟಿ. ಹಿಂದಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿರುವ ಇವರು, ಕನ್ನಡವನ್ನು ಸ್ವಲ್ಪ ಅಸ್ಪಷ್ಟವಾಗಿ ಮಾತನಾಡುತ್ತಾರೆ. ತವರೂರಿನಲ್ಲಿರಬೇಕು ಎಂಬ ಬಯಕೆಯಿಂದ ದೊಡ್ಮನೆಗೆ ಬಂದಿದ್ದಾರೆ.

ಅವಿನಾಶ್ ಶತಮರ್ಷನ:

ಅವಿನಾಶ್ ಶತಮರ್ಷನ

ಭೂತಕಾಲ ಹಾಗೂ ಭವಿಷ್ಯದ ಬಗ್ಗೆ ತಲೆಕೆಡಿಸಿಕೊಳ್ಳದೆ, ಪ್ರತಿಯೊಂದು ಕ್ಷಣವನ್ನು ವರ್ತಮಾನದಲ್ಲಿ ಆನಂದಿಸುವ ವಿಭಿನ್ನ ವ್ಯಕ್ತಿತ್ವದ ಸ್ಪರ್ಧಿ. ಜೀವನದಲ್ಲಿ ದೊಡ್ಡ ಗೆಲುವು ಸಾಧಿಸುವ ಹಠದೊಂದಿಗೆ ಸ್ಪರ್ಧೆಗೆ ಇಳಿದಿದ್ದಾರೆ.

ಪ್ರಥಮಾ ಪ್ರಸಾದ್:

ಪ್ರಥಮಾ ಪ್ರಸಾದ್

ಹಿರಿಯ ನಟಿ ವಿನಯಾ ಪ್ರಸಾದ್ ಅವರ ಪುತ್ರಿ, ಕಿರುತೆರೆ ನಟಿ ಹಾಗೂ ಪ್ರತಿಭಾವಂತ ಡ್ಯಾನ್ಸರ್. ಒಂದು ವರ್ಷದಲ್ಲಿ ಬರೋಬ್ಬರಿ 50ಕ್ಕೂ ಹೆಚ್ಚು ಆಡಿಷನ್‌ಗಳಲ್ಲಿ ತಿರಸ್ಕೃತಗೊಂಡು, ಬಳಿಕ ಕಠಿಣ ಪರಿಶ್ರಮದಿಂದ ಬಿಗ್‌ಬಾಸ್ ಅವಕಾಶ ಪಡೆದಿದ್ದು, ತಾಯಿಯೇ ತನ್ನ ದೊಡ್ಡ ಶಕ್ತಿ ಎಂದು ಹೇಳಿಕೊಂಡಿದ್ದಾರೆ

ಗಗನ್ ಚಿನ್ನಪ್ಪ:

ಗಗನ್ ಚಿನ್ನಪ್ಪ

'ಮಂಗಳಗೌರಿ ಮದುವೆ' ಮತ್ತು 'ಸೀತಾರಾಮಾ' ಖ್ಯಾತಿಯ ಜನಪ್ರಿಯ ನಟ. ಕೊಡಗು ಮೂಲದ ಇವರು ಆಟೋಮೊಬೈಲ್ ಕ್ಷೇತ್ರದಲ್ಲಿಯೂ ಕೆಲಸ ಮಾಡಿದ್ದು, 'ಅಲೆಗ್ಸಾಂಡರ್' ಸಿನಿಮಾದಲ್ಲಿ ನಾಯಕನಾಗಿಯೂ ನಟಿಸಿದ್ದಾರೆ.

ಸಂಗೀತಾ ಭಟ್:

ಸಂಗೀತಾ ಭಟ್

'ಪ್ರೀತಿ ಗೀತಿ ಇತ್ಯಾದಿ', 'ದಿನಕರ್‌', 'ಕಿಸ್ಮತ್' ಸೇರಿದಂತೆ ಕನ್ನಡ, ತಮಿಳು ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿರುವ ಪ್ರಮುಖ ನಟಿ. ಇವರ ಪತಿ ಸುದರ್ಶನ್ ಕೂಡ ಕಿರುತೆರೆಯಲ್ಲಿ ಖ್ಯಾತ ನಟರಾಗಿದ್ದಾರೆ.

ಕಾವ್ಯಾ ಗೌಡ:

ಕಾವ್ಯಾ ಗೌಡ:

'ಭಾಗ್ಯಲಕ್ಷ್ಮೀ' ಧಾರಾವಾಹಿಯ 'ಶ್ರೇಷ್ಠಾ' ಖಳನಾಯಕಿ ಪಾತ್ರದ ಮೂಲಕ ಮನೆಮಾತಾಗಿರುವವರು. ತೆರೆಯ ಮೇಲಿನಂತೆ ಅಲ್ಲದೆ ನಿಜ ಜೀವನದಲ್ಲಿ ತಾನು ತುಂಬಾ ಭಿನ್ನ ಹಾಗೂ ಸ್ವಾಭಿಮಾನಿ ಎಂದು ಸ್ಪಷ್ಟಪಡಿಸಿದ್ದಾರೆ.

ಓಂ ಪ್ರಕಾಶ್ ರಾವ್:

Om prakash

'ಹುಚ್ಚ', 'ಕಲಾಸಿಪಾಳ್ಯ', 'ಸಾಹುಕಾರ' ಸೇರಿದಂತೆ ಸ್ಯಾಂಡಲ್‌ವುಡ್‌ಗೆ ಹಲವು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಹಿರಿಯ ನಿರ್ದೇಶಕ ಹಾಗೂ ನಟ. ಹಿರಿಯರ ಕೋಟಾದಲ್ಲಿ ಬಂದಿರುವ ಇವರ ಅನುಭವಿ ಆಟದ ಮೇಲೆ ನಿರೀಕ್ಷೆ ಹೆಚ್ಚಿದೆ.

ಕಿರಣ್ ಶಾಸ್ತ್ರಿ:

ಕಿರಣ್ ಶಾಸ್ತ್ರಿ

'ಬಿಗ್‌ಬಾಸ್ ಅಗ್ನಿಪರೀಕ್ಷೆ' ಸುತ್ತಿನ ಮೂಲಕ ಆಯ್ಕೆಯಾಗಿ ಬಂದಿರುವ ಉತ್ತರ ಕರ್ನಾಟಕದ ಪ್ರತಿಭೆ. ತಮ್ಮದೇ ವಿಶಿಷ್ಟ ಶೈಲಿಯ ಮಾತು ಹಾಗೂ ಗ್ರಾಮೀಣ ಸೊಗಡಿನ ಆಟದಿಂದ ಮೊದಲ ದಿನವೇ ಗಮನ ಸೆಳೆದಿದ್ದಾರೆ.

ಆಸಿಯಾ ಫಿರ್ದೋಸ್

ಆಸಿಯಾ ಫಿರ್ದೋಸ್

'ಶ್ರಾವಣಿ ಸುಬ್ರಹ್ಮಣ್ಯ' ಧಾರಾವಾಹಿ ಮೂಲಕ ದೊಡ್ಡ ಮಟ್ಟದ ಜನಪ್ರಿಯತೆ ಪಡೆದ ನಟಿ. ಸಾಂಪ್ರದಾಯಿಕ ಕುಟುಂಬದಿಂದ ಬಂದು ದೊಡ್ಡ ಕನಸುಗಳನ್ನು ಈಡೇರಿಸಿಕೊಳ್ಳುವ ಹಾದಿಯಲ್ಲಿ ಭಾವುಕರಾಗಿ ದೊಡ್ಮನೆ ಪ್ರವೇಶಿಸಿದ್ದಾರೆ.

ಲಿಖಿತ್ ಗೋಂದಿ:

ಲಿಖಿತ್ ಗೋಂದಿ

'ಅಗ್ನಿಪರೀಕ್ಷೆ'ಯ ಮತ್ತೊಬ್ಬ ಸ್ಪರ್ಧಿ. ತನ್ನ ತಂದೆಯೊಂದಿಗೆ ವೇದಿಕೆಗೆ ಬಂದು ಪ್ರೇಕ್ಷಕರ ಮೆಚ್ಚುಗೆ ಗಳಿಸಿದ್ದ ಇವರು ಈಗ ಮನೆಗೆ ಎಂಟ್ರಿ ಕೊಟ್ಟು ಉತ್ತಮ ಪ್ರದರ್ಶನ ನೀಡಲು ಸಿದ್ಧರಾಗಿದ್ದಾರೆ.

ತಾಂಡವ್ ರಾಮ್:

ತಾಂಡವ್ ರಾಮ್

ಹಾಸನ ಮೂಲದ ಕುಸ್ತಿಪಟು ಹಾಗೂ ಕಿರುತೆರೆ ನಟ. 'ಜೋಡಿಹಕ್ಕಿ' ಸೀರಿಯಲ್ ಮೂಲಕ ಖ್ಯಾತರಾಗಿರುವ ಇವರು, ತಮ್ಮ ಮೇಲಿನ ಹಿಂದಿನ ಕೆಲವು ವಿವಾದಗಳಿಗೆ ಬಿಗ್‌ಬಾಸ್ ವೇದಿಕೆಯಲ್ಲಿ ತೆರೆ ಎಳೆಯುವ ಭರವಸೆ ನೀಡಿದ್ದಾರೆ.

ವೈಷ್ಣವಿ ವಿ ಕೌಂಡಿನ್ಯ:

ವೈಷ್ಣವಿ ವಿ ಕೌಂಡಿನ್ಯ

'ಪ್ರೇಮಕಾವ್ಯಾ' ಧಾರಾವಾಹಿ ಖ್ಯಾತಿಯ ನಟಿ. ಹಿಂದೆ ಉಡುಪುಗಳ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ನಡೆದ ಟ್ರೋಲಿಂಗ್‌ಗಳ ವಿರುದ್ಧ ದಿಟ್ಟ ಧ್ವನಿ ಎತ್ತುವ ಮೂಲಕ ಸುದ್ದಿಯಲ್ಲಿದ್ದವರು.

ಧನುಷ್

ಧನುಷ್

'ಅಗ್ನಿಪರೀಕ್ಷೆ'ಯ ಮೂಲಕ ಆಯ್ಕೆಯಾಗಿ ಬಂದಿರುವ ಕಿಚ್ಚ ಸುದೀಪ್ ಅವರ ಕಟ್ಟಾ ಅಭಿಮಾನಿ. ಸಂಪೂರ್ಣ ಆತ್ಮವಿಶ್ವಾಸದೊಂದಿಗೆ ಗೆಲ್ಲುವ ಗುರಿಯೊಂದಿಗೆ ಬಿಗ್‌ಬಾಸ್ ಮನೆಗೆ ಬಂದಿದ್ದಾರೆ.

ಯಶಸ್ ಕೃಷ್ಣ:

ಯಶಸ್ ಕೃಷ್ಣ

'ಪವಿತ್ರ ಬಂಧನ' ಧಾರಾವಾಹಿಯಲ್ಲಿ ತಿಲಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ. ಪ್ರೇಕ್ಷಕರು ಇಷ್ಟಪಡುವವರೆಗೂ ತನ್ನ ನೈಜ ವ್ಯಕ್ತಿತ್ವದೊಂದಿಗೆ ಆಟವಾಡಲು ಬಂದಿರುವುದಾಗಿ ತಿಳಿಸಿದ್ದಾರೆ.

ಮಾಡರ್ನ್ ಮಹಾಕವಿ ಮಂಜ:

ಮಾಡರ್ನ್ ಮಹಾಕವಿ ಮಂಜ

ವಿಶೇಷ ತೀರ್ಪುಗಾರರಾದ ಶ್ರುತಿ, ವಿನಯ್ ಗೌಡ ಹಾಗೂ ಚಂದನ್ ಶೆಟ್ಟಿ ಅವರ ತೀರ್ಪಿನನ್ವಯ 16ನೇ ಸ್ಪರ್ಧಿಯಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.