ಇಂದು ಸಂಜೆ 7.01ಕ್ಕೆ ʼಟಾಕ್ಸಿಕ್ʼ ಟ್ರೇಲರ್ ಬೆಂಗಳೂರಿನಲ್ಲಿ ಬಿಡುಗಡೆ
ಕನ್ನಡಿಗರ ಹೆಮ್ಮೆ ಯಶ್ ನಟನೆಯ ಬಹುನಿರೀಕ್ಷಿತ 'ಟಾಕ್ಸಿಕ್' ಸಿನಿಮಾದ ಟ್ರೇಲರ್ ಇಂದು ಸಂಜೆ 7:01ಕ್ಕೆ ಬಿಡುಗಡೆಯಾಗಲಿದೆ. ಡಾ. ಶಿವರಾಜ್‌ಕುಮಾರ್ ಅತಿಥಿಯಾಗಿ ಭಾಗಿ
By Meghana Pranuth | ಮೇಘನಾ ಪ್ರಣೂತ್
1 min read
ಕರುನಾಡಿನ 'ರಾಜಾಹುಲಿ'ಯಿಂದ ಗ್ಲೋಬಲ್ ಸ್ಟಾರ್ ಆಗಿ ಬೆಳೆದು ನಿಂತಿರುವ ರಾಕಿಂಗ್ ಸ್ಟಾರ್ ಯಶ್ ಅವರ ಬಹುನಿರೀಕ್ಷಿತ 'ಟಾಕ್ಸಿಕ್' (Toxic) ಸಿನಿಮಾದ ಟ್ರೇಲರ್ ಇಂದು ಸಂಜೆ 7:01ಕ್ಕೆ ಬಿಡುಗಡೆಯಾಗಲಿದೆ . ಗೀತೂ ಮೋಹನ್ದಾಸ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಈ ಸಿನಿಮಾ, ಭಾರತೀಯ ಚಿತ್ರರಂಗದಲ್ಲಿ ಮಾತ್ರವಲ್ಲದೆ ಅಂತರರಾಷ್ಟ್ರೀಯ ಮಟ್ಟದಲ್ಲೂ ಭಾರೀ ನಿರೀಕ್ಷೆ ಹುಟ್ಟುಹಾಕಿದೆ.
ಇಡೀ ಜಗತ್ತು ಕಾತರದಿಂದ ಕಾಯುತ್ತಿರುವ ಈ ಬೃಹತ್ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯುತ್ತಿರುವುದು ಯಶ್ ಅವರ ತಾಯ್ನಾಡು, ನಮ್ಮ ಹೆಮ್ಮೆಯ ಬೆಂಗಳೂರಿನಲ್ಲಿ! ಅಂತರರಾಷ್ಟ್ರೀಯ ಮಟ್ಟದ ಸಿನಿಮಾವೊಂದರ ಟ್ರೇಲರ್ ಕರುನಾಡಿನ ನೆಲದಲ್ಲಿ ಬಿಡುಗಡೆಯಾಗುತ್ತಿರುವುದು ಕನ್ನಡಿಗರಿಗೆ ಮತ್ತಷ್ಟು ಹೆಮ್ಮೆಯ ವಿಚಾರವಾಗಿದೆ.
ಈ ಭವ್ಯ ಕಾರ್ಯಕ್ರಮಕ್ಕೆ ಕರುನಾಡ ಚಕ್ರವರ್ತಿ, ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ಕುಮಾರ್ ಅವರು ಮುಖ್ಯ ಅತಿಥಿಯಾಗಿ ಆಗಮಿಸುತ್ತಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ.
ಯಶ್ ತಮ್ಮ ಅದ್ಭುತ ಪ್ರತಿಭೆ ಹಾಗೂ ಪಕ್ಕಾ ಪ್ಲಾನಿಂಗ್ ಮೂಲಕ ತಮ್ಮ ದೊಡ್ಡ ಕನಸುಗಳನ್ನು ನನಸು ಮಾಡುತ್ತಿದ್ದಾರೆ. ಇಂದು ಸಂಜೆ 7:01ಕ್ಕೆ ಬಿಡುಗಡೆಯಾಗಲಿರುವ ಟ್ರೇಲರ್, ಯುಟ್ಯೂಬ್ ಸೇರಿದಂತೆ ಎಲ್ಲಾ ಡಿಜಿಟಲ್ ಪ್ಲಾಟ್ಫಾರ್ಮ್ಗಳಲ್ಲಿ ಹೊಸ ದಾಖಲೆ ಬರೆಯುವುದು ಖಚಿತ.
Topics
ಸಂಬಂಧಿತ ಸುದ್ದಿಗಳು
entertainment
ಅಂದು 'ಸೇಲ್ಸ್ಮನ್' ತರಹ ನೋಡಿದ್ದವರಿಗೆ ಇಂದು 'ಗ್ಲೋಬಲ್ ಸ್ಟಾರ್' ಯಶ್ ಉತ್ತರ
entertainment
ದರ್ಶನ್ಗೆ ಹೆಚ್ಚಿದ ಆತಂಕ: ಪ್ರದೋಷ್ ಬಳಿಕ ಮತ್ತಿಬ್ಬರು ಮಾಫಿ ಸಾಕ್ಷಿಯಾಗಲು ಅರ್ಜಿ!
entertainment
ಅಲ್ಲು ಅರ್ಜುನ್ - ಅಟ್ಲಿ ಕಾಂಬಿನೇಷನ್ನ 'ರಾಕಾ': ದೀಪಿಕಾ ಪ್ರೆಗ್ನೆನ್ಸಿಯಿಂದ ಶೂಟಿಂಗ್ಗೆ ಇಲ್ಲ ವಿಳಂಬ!
entertainment

