‘ನೀವು ಅಲ್ಲಿರೋದಕ್ಕೆ ಲಾಯಕ್ಕಿಲ್ಲ’: ವಿನಯ್ ಗೌಡ ಮುಖಕ್ಕೇ ಹೊಡೆದಂತೆ ಅಂದ ಸ್ಪರ್ಧಿಗೆ ಶಾಕ್!

ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ಸೀಸನ್ 13'ರ ಆರಂಭಕ್ಕೂ ಮುನ್ನವೇ 'ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಭಾರಿ ಹೈಡ್ರಾಮಾ ಹಾಗೂ ತೀವ್ರ ಪೈಪೋಟಿ ಶುರುವಾಗಿದೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
VINAY GOWDA
VINAY GOWDA

ಬೆಂಗಳೂರು: ಕನ್ನಡ ಕಿರುತೆರೆಯ ಜನಪ್ರಿಯ ರಿಯಾಲಿಟಿ ಶೋ 'ಬಿಗ್‌ಬಾಸ್ ಸೀಸನ್ 13'ರ ಆರಂಭಕ್ಕೂ ಮುನ್ನವೇ 'ಅಗ್ನಿಪರೀಕ್ಷೆ' ವೇದಿಕೆಯಲ್ಲಿ ಭಾರಿ ಹೈಡ್ರಾಮಾ ಹಾಗೂ ತೀವ್ರ ಪೈಪೋಟಿ ಶುರುವಾಗಿದೆ. ಈ ಬಾರಿಯ ಬಿಗ್‌ಬಾಸ್ ಮನೆಗೆ ಪ್ರವೇಶ ಗಿಟ್ಟಿಸಿಕೊಳ್ಳಲು ಆಗಮಿಸಿರುವ ಸಾಮಾನ್ಯ ಆಕಾಂಕ್ಷಿಗಳು ತೀರ್ಪುಗಾರರ ಮುಂದೆ ಪ್ರಬಲ ಪೈಪೋಟಿ ನಡೆಸುತ್ತಿದ್ದಾರೆ.

ಸಾಮಾನ್ಯವಾಗಿ ಬಿಗ್‌ಬಾಸ್ ಮನೆಯೊಳಗೆ ನಡೆಯುವ ಗಲಾಟೆ ಮತ್ತು ಡ್ರಾಮಾಗಳು, ಈಗ 'ಅಗ್ನಿಪರೀಕ್ಷೆ'ಯ ಹಂತದಲ್ಲೇ ಜೋರಾಗಿರುವುದು ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. 

ವೇದಿಕೆಯ ಮೇಲೆ ಬಂದ ಸ್ಪರ್ಧಿಯೊಬ್ಬರು ತೀರ್ಪುಗಾರರ ಸೀಟ್‌ನಲ್ಲಿದ್ದ ಮಾಜಿ ಬಿಗ್‌ಬಾಸ್ ವಿನಯ್ ಗೌಡ ಅವರ ಫೋಟೋ ಹಿಡಿದು "ವಿನಯ್ ಗೌಡ ಅಲ್ಲಿ ಇರೋದಕ್ಕೆ ಲಾಯಕ್ಕೇ ಇಲ್ಲ" ಎಂದು ಕಟುವಾಗಿ ಹೇಳಿದ್ದಷ್ಟೇ ಅಲ್ಲದೆ, ಅವರ ಫೋಟೋಗೆ ನೇರವಾಗಿಯೇ ಬೆಂಕಿ ಹಚ್ಚಿದ್ದಾರೆ. ಸ್ಪರ್ಧಿಯ ಈ ಹಠಾತ್ ನಡವಳಿಕೆಯಿಂದ ತೀರ್ಪುಗಾರರು ಹಾಗೂ ವೇದಿಕೆಯಲ್ಲಿದ್ದ ಪ್ರತಿಯೊಬ್ಬರೂ ದಿಗ್ಭ್ರಮೆಗೊಂಡಿದ್ದಾರೆ. ಆದರೆ, ಇದು 'ಅಗ್ನಿಪರೀಕ್ಷೆ'ಯ ಯಾವುದಾದರೂ ಟಾಸ್ಕ್‌ನ ಭಾಗವಾಗಿರಬಹುದು ಎಂದೂ ಊಹಿಸಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಫೇಮಸ್ ಆಗಿರುವ ಮಹಿಳಾ ಸ್ಪರ್ಧಿಯೊಬ್ಬರು ಪ್ರದರ್ಶನದ ವೇಳೆ ತೀರ್ಪುಗಾರರ ಗಮನ ಸೆಳೆಯಲು ಯತ್ನಿಸಿದ್ದಾರೆ. "ನಾನು ಪಕ್ಕಾ ಎಂಟರ್‌ಟೈನ್‌ಮೆಂಟ್ ಕೊಡ್ತೀನಿ ಮೇಡಂ" ಎಂದು ಹೇಳುತ್ತಾ ನೆಲದ ಮೇಲೆ ಬಿದ್ದು ಬೇಡಿಕೊಂಡಾಗ, ನಟಿ ಸಂಗೀತಾ ಶೃಂಗೇರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

"ನಿಮ್ಮ ಈ ಕ್ರಿಂಜ್ ನಡವಳಿಕೆಯನ್ನು ನಾವು ಎಂಟರ್‌ಟೈನ್‌ಮೆಂಟ್ ಅಂತ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಇಂತಹ ನಡವಳಿಕೆಯನ್ನು ಬಿಗ್‌ಬಾಸ್ ಮನೆಯಲ್ಲಿ ನೋಡಲು ನಾವು ಇಷ್ಟಪಡುವುದಿಲ್ಲ" ಎಂದು ಸಂಗೀತಾ ಶೃಂಗೇರಿ ಕಟ್ಟುನಿಟ್ಟಾಗಿ ಹೇಳಿ ಲಿವರ್ ಎಳೆಯುವ ಮೂಲಕ ಆ ಸ್ಪರ್ಧಿಯನ್ನು ತಕ್ಷಣವೇ ರಿಜೆಕ್ಟ್ ಮಾಡಿದ್ದಾರೆ.
ಬಿಗ್‌ಬಾಸ್ ಮನೆಗೆ ಕಾಲಿಡಲು ಕೇವಲ ಹೈಡ್ರಾಮಾ ಸಾಲದು, ಗಟ್ಟಿಯಾದ ಮನಸ್ಸು ಹಾಗೂ ನಿಜವಾದ ಸಾಮರ್ಥ್ಯ ಬೇಕು ಎಂದು ತೀರ್ಪುಗಾರರು ಸ್ಪಷ್ಟಪಡಿಸಿದ್ದಾರೆ. ಭಾರಿ ಕುತೂಹಲ ಮೂಡಿಸಿರುವ 'ಬಿಗ್‌ಬಾಸ್ ಅಗ್ನಿಪರೀಕ್ಷೆ'ಯ ಈ ರೋಚಕ ಸಂಚಿಕೆಯು ಇದೇ ಭಾನುವಾರ ರಾತ್ರಿ 9 ಗಂಟೆಗೆ ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿದೆ.    

Topics

ಸಂಬಂಧಿತ ಸುದ್ದಿಗಳು