ಹಬ್ಬದೂಟ ಎಂದ್ರೆ ಭಾರಿ ಭೋಜನ. ಅಲ್ಲಿ ತರತರಹದ ಸಿಹಿ, ಖಾರ, ಕರಿದ ಅಡುಗೆಗಳಿರುತ್ತವೆ. ಅವುಗಳನ್ನೆಲ್ಲ ತಿಂದ ಮೇಲೆ ದೇಹ ಭಾರವೆನಿಸುವುದು ಅಥವಾ ಅಜೀರ್ಣ ಸಮಸ್ಯೆ ಸಹಜ. ಇದಕ್ಕೇನಾದರೂ ಪರಿಹಾರವಿದೆಯಾ ಎಂದು ಎಲ್ಲರೂ ಹುಡುಕುತ್ತಾರೆ. ಹಬ್ಬದ ಸಂಭ್ರಮಾಚರಣೆಯ ನಂತರ ದೇಹವನ್ನು ಡಿಟಾಕ್ಸ್ ಮಾಡಿ ಮೊದಲಿನಂತೆ ಸಜ್ಜುಗೊಳಿಸಲು ಇಲ್ಲಿದೆ ಕ್ವಿಕ್ ಡಿಟಾಕ್ಸ್ ಡ್ರಿಂಕ್‌ಗಳು. ನೈಸರ್ಗಿಕ ಸಾಮಗ್ರಿಗಳಿಂದ ತಯಾರಿಸಬಹುದಾದ ಈ ಪಾನೀಯಗಳು ದೇಹವನ್ನು ಸ್ವಚ್ಛಗೊಳಿಸಿ. ಜೀರ್ಣಕ್ರಿಯೆ ಹೆಚ್ಚಿಸಿ, ನಿರ್ಜಲೀಕರಣವನ್ನು ದೂರಮಾಡುತ್ತದೆ. ಈ ಡಿಟಾಕ್ಸ್ ಪಾನೀಯಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಬಹುದು. ಇವುಗಳನ್ನು ನೀವು ದಿನದ ಯಾವುದೇ ಸಮಯದಲ್ಲಿ ಬೇಕಾದರೂ ಕುಡಿಯಬಹುದು. ಅಂತಹ 5 ಡಿಟಾಕ್ಸ್ ಡ್ರಿಂಕ್‌ಗಳು ಇಲ್ಲಿವೆ.
ದೇಹವನ್ನು ಡಿಟಾಕ್ಸ್ ಮಾಡುವ 5 ಪಾನೀಯಗಳು
1. ಲಿಂಬು–ಸೌತೆಕಾಯಿ ಪಾನೀಯ
ಇದೊಂದು ಸಾಂಪ್ರದಾಯಿಕ ಪಾನೀಯ. ಇದು ದೇಹಕ್ಕೆ ತಾಜಾತನವನ್ನು ನೀಡುತ್ತದೆ. ಲಿಂಬು ಮತ್ತು ಸೌತೆಕಾಯಿ ಹೈಡ್ರೇಟ್ ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಲಿಂಬುವಿನಲ್ಲಿರುವ ವಿಟಮಿನ್ ಸಿ ಕೊಬ್ಬು ಕರಗಿಸಲು ಸಹಾಯ ಮಾಡಿದರೆ ಸೌತೆಕಾಯಿ ದೇಹದ ತ್ಯಾಜ್ಯ ದೂರ ಮಾಡುತ್ತದೆ. ಒಂದು ಗ್ಲಾಸ್ ಸೌತೆಕಾಯಿ ರಸಕ್ಕೆ ಸ್ವಲ್ಪ ಲಿಂಬು ರಸ ಸೇರಿಸಿ ಜ್ಯೂಸ್ ತಯಾರಿಸಿಕೊಳ್ಳಿ. ಇದನ್ನು ಸ್ವಲ್ಪ ಸ್ವಲ್ಪವಾಗಿ ದಿನವಿಡೀ ಕುಡಿಯಿರಿ.
2. ಶುಂಠಿ–ಲಿಂಬು–ಜೇನುತುಪ್ಪ ಪಾನೀಯ
ಭಾರಿ ಹಬ್ಬದೂಟದ ನಂತರ ಕುಡಿಯುವ ಈ ಪಾನೀಯ ಜೀರ್ಣಕ್ರಿಯೆ ಸುಧಾರಿಸುತ್ತದೆ ಮತ್ತು ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಶುಂಠಿ ಹೊಟ್ಟೆಯುಬ್ಬರ ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಲಿಂಬು ಜೀರ್ಣಾಂಗವ್ಯೂಹವನ್ನು ಸ್ವಚ್ಛಗೊಳಿಸುತ್ತದೆ. ಜೇನುತುಪ್ಪುವ ಬ್ಯಾಕ್ಟೀರಿಯಾದ ವಿರುದ್ಧ ಹೋರಾಡುತ್ತದೆ. ಒಂದು ಕಪ್ ಬಿಸಿ ನೀರಿಗೆ ಅರ್ಧ ಚಮಚ ತುರಿದ ಶುಂಠಿ, ಸ್ವಲ್ಪ ಲಿಂಬು ರಸ್ ಮತ್ತು ಒಂದು ಚಮಚ ಜೇನುತುಪ್ಪ ಸೇರಿಸಿ ಐದು ನಿಮಿಷ ಬಿಟ್ಟು ಕುಡಿಯಿರಿ.
3. ಅರಿಶಿಣ ಟೀ
ಅರಿಶಿಣವು ಉರಿಯೂತ ನಿವಾರಕ ಗುಣವನ್ನು ಹೊಂದಿದೆ. ಅರಿಶಿಣ ಟೀ ಯಕೃತ್‌ಅನ್ನು ಸ್ವಚ್ಛಗೊಳಿಸಿ, ಜೀರ್ಣಕ್ರಿಯೆ ಸುಧಾರಿಸುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಉತ್ತೇಜಿಸುತ್ತದೆ. ಒಂದು ಕಪ್ ಬಿಸಿ ನೀರಿಗೆ ಅರ್ಧ ಚಮಚ ಅರಿಶಿಣ ಸೇರಿಸಿ. 2–3 ನಿಮಿಷಗಳ ಕಾಲ ಸಣ್ಣ ಉರಿಯಲ್ಲಿ ಕುದಿಸಿ. ಅದಕ್ಕೆ ಸ್ವಲ್ಪ ಕಾಳುಮೆಣಸಿನ ಪುಡಿ ಮತ್ತು ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಿರಿ.
4. ಲಿಂಬು–ಪುದೀನಾ ಗ್ರೀನ್ ಟೀ
ಗ್ರೀನ್ ಟೀ ಆಂಟಿಆಕ್ಸಿಡೆಂಟ್‌ನಿಂದ ಸಮೃದ್ಧವಾಗಿದೆ. ಇದು ದೇಹವನ್ನು ನಿರ್ವಿಷಗೊಳಿಸಿ ಜೀರ್ಣಕ್ರಿಯೆ ಸುಧಾರಿಸುತ್ತದೆ. ಪುದೀನಾ ಎಲೆಗಳು ತಾಜಾತನವನ್ನು ನೀಡುತ್ತವೆ. ಒಂದು ಕಪ್ ಗ್ರೀನ್ ಟೀ ತಯಾರಿಸಿ. ಅದಕ್ಕೆ ಕೆಲವು ಹನಿ ಲಿಂಬುರಸ ಮತ್ತು ಚಿಕ್ಕದಾಗಿ ಕತ್ತರಿಸಿದ ಪುದೀನಾ ಎಲೆಗಳನ್ನು ಸೇರಿಸಿ. ಬಿಸಿ ಆರಿದ ನಂತರ ಕುಡಿಯರಿ.
5. ನೆಲ್ಲಿಕಾಯಿ–ಅಲೊವೆರಾ ಜ್ಯೂಸ್
ನೆಲ್ಲಿಕಾಯಿ ಇದು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ಯಕೃತ್ತ ಮತ್ತು ಚರ್ಮವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ. ಅಲೊವೆರಾ ಜೀರ್ಣಕ್ರಿಯೆ ಮತ್ತು ಜಲಸಂಚಯನ ಉತ್ತೇಜಿಸುತ್ತದೆ. ಹಾಗಾಗಿ ಈ ಪಾನೀಯ ಹಬ್ಬದೂಟದ ನಂತರ ಬೆಸ್ಟ್ ಡ್ರಿಂಕ್ ಎನ್ನಲಾಗಿದೆ. ಒಂದು ಗ್ಲಾಸ್ ನೀರಿಗಎರಡು ಚಮಚ ನೆಲ್ಲಿಕಾಯಿ ಜ್ಯೂಸ್ ಮತ್ತು ಒಂದು ಚಮಚ ಅಲೊವೆರಾ ಜ್ಯೂಸ್ ಸೇರಿಸಿ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕಡಿಯಿರಿ.