Kannada News Next

health

ಅಡುಗೆಗೆ ಬಳಸುವ ಚಿಟಿಕೆ ಇಂಗಿನಲ್ಲಿ ಅಡಗಿದೆ ಅಗಾಧ ಪ್ರಯೋಜನ..!

ಭಾರತೀಯರು ಬಹುತೇಕ ತಮ್ಮ ಎಲ್ಲ ಅಡುಗೆಗಳಲ್ಲಿ ಇದನ್ನು ಬಳಸುತ್ತಾರೆ. ಹಿಂದಿನವರೆಲ್ಲ ಇದು ಜೀರ್ಣಕ್ರಿಯೆಗೆ ಬೆಸ್ಟ್‌ ಎಂದು ಹೇಳುತ್ತಿದ್ದರು? ಯಾವುದು ಅದು? ಇಲ್ಲಿದೆ ಓದು.

By Archana V Bhat
benefits of asafoetida

ಭಾರತೀಯ ಪಾಕಪದ್ಧತಿ ಕೇವಲ ರುಚಿಯ ಅಡುಗೆಗಳಷ್ಟೇ ಅಲ್ಲ. ಅದರ ಹಿಂದೆ ಆರೋಗ್ಯದ ಕಾಳಜಿಯೂ ಇದೆ. ಆಹಾರದಿಂದಲೇ ಆರೋಗ್ಯ, ಆಹಾರದಿಂದಲೇ ಅನಾರೋಗ್ಯ ಎಂದು ನಂಬಿದವರು ನಾವು. ಭಾರತೀಯರ ಪ್ರತಿಮನೆಯಲ್ಲಿ ಬೇಯಿಸುವ ಆಹಾರ ದೇಹಕ್ಕೆ ನೀಡುವ ಔಷಧಿ ಎಂದೇ ಪರಿಗಣಿಸಲಾಗಿದೆ. ಅಂದರೆ ತಯಾರಿಸುವ ಆಹಾರದಲ್ಲಿ ಎಲ್ಲ ಬಗೆಯ ಪೋಷಕಾಂಶಗಳಿರಬೇಕು, ಅದು ಸುಲಭವಾಗಿ ಜೀರ್ಣವಾಗುವಂತಿರಬೇಕು, ಶಕ್ತಿಯನ್ನು ನೀಡುತ್ತಿರಬೇಕು ಎಂಬುದೇ ಮೂಲಮಂತ್ರವಾಗಿದೆ. ಅಡುಗೆ ಮಾಡುವಾಗ ಕೆಲವೊಂದು ವಸ್ತುಗಳನ್ನು ತಪ್ಪದೇ ಹಾಕಲಾಗುತ್ತದೆ. ಅದಕ್ಕೆ ಕಾರಣವೇನೆಂದರೆ ಜೀರ್ಣಕ್ರಿಯೆ ನಡೆಯುವಾಗ ಉಂಟಾಗುವ ತೊಂದರೆಗಳನ್ನು ದೂರಮಾಡುವುದಾಗಿದೆ. ಅದರಲ್ಲಿ ಇಂಗು ಕೂಡಾ ಒಂದು. ಭಾರತೀಯ ಪಾಕಪದ್ಧತಿಯ ಬಹುತೇಕ ಅಡುಗೆಗಳಲ್ಲಿ ಇಂಗನ್ನು ತಪ್ಪದೇ ಬಳಸಲಾಗುತ್ತದೆ. ಏಕೆ? ಅದರಿಂದ ಸಿಗುವ ಪ್ರಯೋಜನಗಳೇನು? ಇಲ್ಲಿದೆ ಓದಿ.

ಅಡುಗೆಯಲ್ಲಿ ಇಂಗಿನ ಬಳಕೆಯ ಹಿಂದಿರುವ ಕಾರಣವೇನು?

ಸಾಮಾನ್ಯವಾಗಿಅಡುಗೆಯಲ್ಲಿ ತೊಗರಿ ಬೇಳೆ, ಕಡ್ಲೆ, ಬೀನ್ಸ್‌ ನಂತಹ ಬೇಳೆಕಾಳುಗಳನ್ನು ಬಳಸಲಾಗುತ್ತದೆ. ಇದು ಕೆಲವರಲ್ಲಿ ಗ್ಯಾಸ್ಟ್ರಿಕ್‌, ಹೊಟ್ಟೆಯುಬ್ಬರ, ಅಜೀರ್ಣ ಮುಂತಾದವುಗಳನ್ನು ಉಂಟುಮಾಡುತ್ತದೆ. ಕಾರಣ ಅವುಗಳಲ್ಲಿ ಫೈಬರ್‌ ಮತ್ತು ಪ್ರೋಟೀನ ಹೇರಳವಾಗಿರುತ್ತದೆ. ಅಂತಹ ಆಹಾರಗಳನ್ನು ಸುಲಭವಾಗಿ ಜೀರ್ಣಿಸಿಕೊಳ್ಳಲು ಭಾರತೀಯ ಪಾಕಪದ್ಧತಿಯಲ್ಲಿ ಇಂಗನ್ನು ಬಳಸಲಾಗುತ್ತದೆ. ಇಂಗಿನ ವಿಶಿಷ್ಟ ಪರಿಮಳ ಅಡುಗೆಗೆ ಸುವಾಸನೆ ಹೆಚ್ಚಿಸುತ್ತದೆ. ಇದರಲ್ಲಿರುವ ಸಂಯುಕ್ತಗಳು ಪ್ಯಾಂಕ್ರಿಯಾಟಿಕ್‌ ಅಮೈಲೇಸ್‌ ಮತ್ತು ಲಿಪೇಸ್‌ನಂತಹ ಜೀರ್ಣಕಾರಿ ಕಿಣ್ವಗಳ ಮೇಲೆ ಪರಿಣಾಮ ಬೀರಿ ಜೀರ್ಣಕ್ರಿಯಗೆ ಸಹಾಯ ಮಾಡುತ್ತದೆ.

ದಿನಕ್ಕೆ ಎಷ್ಟು ಪ್ರಮಾಣದಲ್ಲಿ ಇಂಗನ್ನು ಬಳಸಬೇಕು?

ಇಂಗನ್ನು ಅಡುಗೆಯಲ್ಲಿ ಅತಿಯಾಗಿಯೂ ಕೂಡಾ ಬಳಸಬಾರದು. ಏಕೆಂದರೆ ಕಟು ವಾಸನೆಯಿರುವ ಇಂಗು ಆಹಾರದ ಪರಿಮಳ ಮತ್ತು ರುಚಿ ಎರಡನ್ನೂ ಹಾಳುಮಾಡುತ್ತದೆ. ಹಾಗಾಗಿ ಅಡುಗೆಯಲ್ಲಿ ಚಿಟಿಕೆ ಇಂಗನ್ನು ಮಾತ್ರ ಬಳಸಬೇಕು.