ತಿರುಪತಿ ತಿಮ್ಮಪ್ಪನಿಗೆ ಹಿರಿದು ಬಂದ ಹಣದ ಹೊಳೆ:  ಹೊಸ ದೇಣಿಗೆ ನೀತಿಯಿಂದ ಒಂದೇ ದಿನ 97 ಕೋಟಿ ಆದಾಯ

tirupati temple 97 crore donation record : ತಿರುಪತಿ ತಿರುಮಲ ದೇವಾಲಯಕ್ಕೆ ಒಂದೇ ದಿನದಲ್ಲಿ ಬರೋಬ್ಬರಿ 2460ಕ್ಕೂ ಅಧಿಕ ಭಕ್ತರು ವಿಶೇಷ ದೇಣಿಗೆ ನೀಡಿದ್ದಾರೆ. ಇಬ್ಬರು ಭಕ್ತರು 1 ಕೋಟಿ ರೂಪಾಯಿಗೂ ಅಧಿಕ ಕಾಣಿಕೆಯನ್ನು ತಿರುಪತಿ ದೇವರಿಗೆ ಸಮರ್ಪಣೆ ಮಾಡಿದ್ದಾರೆ.

ತಿರುಪತಿ : ದೇಶದ ಶ್ರೀಮಂತ ದೇಗುಲ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲದ ವೆಂಕಟೇಶ್ವರ ಸ್ವಾಮಿ ದೇವಾಲಯಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಕೇವಲ 24 ಗಂಟೆಗಳ ಅವಧಿಯಲ್ಲಿ ದೇವಾಲಯಕ್ಕೆ ಬರೋಬ್ಬರಿ 97 ಕೋಟಿ ರೂಪಾಯಿ ದೇಣಿಗೆ ಹರಿದು ಬಂದಿದೆ ಎಂದು ದೇವಾಲಯದ ಆಡಳಿತ ಮಂಡಳಿ ಘೋಷಿಸಿದೆ.

ತಿರುಪತಿ ದೇವಾಲಯಕ್ಕೆ ದೇಣಿಗೆ ನೀಡುವ ಭಕ್ತರ ಸಂಖ್ಯೆ ಹೆಚ್ಚಾಗಿರುವ ಕಾರಣದಿಂದಲೇ ಆಡಳಿತ ಮಂಡಳಿ ಜುಲೈ 15ರ ಮಧ್ಯರಾತ್ರಿಯಿಂದಲೇ ಹೊಸ ರೂಲ್ಸ್‌ ಜಾರಿ ಮಾಡಿದೆ. ಹೊಸ ನಿಯಮದ ಭಕ್ತರಿಗೆ ನೀಡಲಾಗುವ ಸೌಲಭ್ಯದ ಜೊತೆಗೆ ವಿಐಪಿ ಹಕ್ಕು ಕೂಡ ಸಂಪೂರ್ಣವಾಗಿ ಬದಲಾಗಲಿದೆ. ದಾನಿಗಳು ಈ ಹಿಂದೆ ಪಡೆಯುತ್ತಿದ್ದ ಆ ಜೀವ ಸೌಲಭ್ಯಗಳನ್ನು ರದ್ದು ಪಡಿಸಲಾಗಿದ್ದು, ಹೊಸ ಪ್ರಿವಿಲೇಜ್‌ ರೂಲ್ಸ್‌ ಜಾರಿಯಾಗಿದೆ.

ತಿರುಪತಿ ತಿರುಮಲ ದೇವಾಲಯಕ್ಕೆ ಒಂದೇ ದಿನದಲ್ಲಿ ಬರೋಬ್ಬರಿ 2460ಕ್ಕೂ ಅಧಿಕ ಭಕ್ತರು ವಿಶೇಷ ದೇಣಿಗೆ ನೀಡಿದ್ದಾರೆ. ಇಬ್ಬರು ಭಕ್ತರು 1 ಕೋಟಿ ರೂಪಾಯಿಗೂ ಅಧಿಕ ಕಾಣಿಕೆಯನ್ನು ತಿರುಪತಿ ದೇವರಿಗೆ ಸಮರ್ಪಣೆ ಮಾಡಿದ್ರೆ, 1,246 ಭಕ್ತರು 10 ಲಕ್ಷ ದಿಂದ ಹಿಡಿದು 25 ಲಕ್ಷ ರೂಪಾಯಿವರೆಗೆ ಹಾಗೂ 1,212 ಮಂದಿ ಭಕ್ತರು 1 ಲಕ್ಷ ರೂಪಾಯಿ ಯಿಂದ 10 ಲಕ್ಷ ರೂಪಾಯಿವರೆಗೆ ದೇವರಿಗೆ ಕಾಣಿಕೆ ಸಮರ್ಪಿಸಿದ್ದಾರೆ.

ಭಾರತದಲ್ಲಿಯೇ ಶ್ರೀಮಂತ ದೇವಾಲಯ ಎಂಬ ಖ್ಯಾತಿಗೆ ಪಾತ್ರವಾಗಿರುವ ತಿರುಪತಿ ತಿರುಮಲ ದೇವಸ್ಥಾನದ ಒಟ್ಟು ನಿವ್ವಳ ಮೌಲ್ಯ ಸುಮಾರು 3.38 ಲಕ್ಷ ಕೋಟಿಗೂ ಅಧಿಕ ಎಂದು ಅಂದಾಜಿಸಲಾಗಿದೆ. ವಿಶ್ವದ ಸಣ್ಣ ದೇಶವೊಂದರ ಜಿಡಿಪಿಗಿಂತಲೂ ಅಧಿಕ ಎನ್ನಲಾಗುತ್ತಿದೆ. ಪ್ರಸ್ತುತ ವರ್ಷದಲ್ಲಿ ತಿರುಪತಿ ದೇವಾಲಯದ ಹುಂಡಿಯ ಕಾಣಿಕೆಯೇ 1738 ಕೋಟಿ ರೂಪಾಯಿಗೂ ಅಧಿಕ ಇದ್ದು, ಪ್ರತೀ ನಿತ್ಯವೂ 4 ಕೋಟಿ 75 ಲಕ್ಷ ರೂಪಾಯಿ ಕಾಣಿಕೆ ದೇವಾಲಯಕ್ಕೆ ಸಂಗ್ರಹವಾಗುತ್ತಿದೆ.

ತಿರುಪತಿ ದೇವಾಲಯಕ್ಕೆ ದೇಣಿಗೆ ನೀಡುವ ಭಕ್ತರ ಸಂಖ್ಯೆ ಹೆಚ್ಚಳವಾಗಿರುವ ಕಾರಣದಿಂದಲೇ ಇದೀಗ ಪ್ರಿವಿಲೇಜ್‌ ನೀತಿಯನ್ನು ಜಾರಿಗೆ ತರಲಾಗಿದೆ. ತಿರುಮಲ ತಿರುಪತಿ ದೇವಸ್ಥಾನಂ ಮಂಡಳಿ ನೀಡಿರುವ ಮಾಹಿತಿಯ ಪ್ರಕಾರ ಕಳೆದ ನಾಲ್ಕು ತಿಂಗಳಿನಲ್ಲಿಯೇ 10 ಲಕ್ಷಕ್ಕೂ ಅಧೀಕ ದೇಣಿಗೆ ನೀಡುವ ಭಕ್ತರ ಸಂಖ್ಯೆ ಸುಮಾರು 3000 ದಷ್ಟು ಅಧಿಕವಾಗಿದೆ. ದೇವಾಲಯದ ಆಡಳಿತದಲ್ಲಿ ಪಾರದರ್ಶಕತೆಯನ್ನು ತರುವ ಉದ್ದೇಶದಿಂದಲೇ ಹೊಸ ರೂಲ್ಸ್‌ ಜಾರಿ ಮಾಡಲಾಗಿದೆ ಎಂದು ಟಿಟಿಡಿ ಅಧ್ಯಕ್ಷ ಬಿಆರ್‌ ನಾಯ್ಡು ಅವರು ತಿಳಿಸಿದ್ದಾರೆ.

tirupati temple 97 crore donation record TTD Kannada news

Exit mobile version