ಇ20 ಪೆಟ್ರೋಲ್ ಬಳಕೆಯಿಂದ ಮೈಲೇಜ್ ಕಡಿತ ಗ್ಯಾರಂಟಿ; ವಾಹನ ಎಂಜಿನ್ ಮೇಲಾಗಲ್ಲ ಯಾವುದೇ ಪರಿಣಾಮ!

ದೇಶಾದ್ಯಂತ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಇ20 ಪೆಟ್ರೋಲ್ ಇಂಧನದಿಂದ ವಾಹನಗಳ ಮೈಲೇಜ್ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ನಿಜ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ.

ದೇಶಾದ್ಯಂತ ಪರಿಸರ ಮಾಲಿನ್ಯ ನಿಯಂತ್ರಿಸುವ ಉದ್ದೇಶದಿಂದ ಜಾರಿಗೆ ತರಲಾಗಿರುವ ಇ20 ಪೆಟ್ರೋಲ್ ಇಂಧನದಿಂದ ವಾಹನಗಳ ಮೈಲೇಜ್ ಕೊಂಚ ಪ್ರಮಾಣದಲ್ಲಿ ಇಳಿಕೆಯಾಗುತ್ತಿರುವುದು ನಿಜ ಎಂದು ಕೇಂದ್ರ ಸರ್ಕಾರ ಒಪ್ಪಿಕೊಂಡಿದೆ. ಪೆಟ್ರೋಲ್‌ಗೆ ಶೇಕಡಾ 20 ರಷ್ಟು ಎಥನಾಲ್ ಮಿಶ್ರಣ ಮಾಡುವುದರಿಂದ ವಾಹನಗಳ ಇಂಧನ ದಕ್ಷತೆಯ ಮೇಲೆ ಪರಿಣಾಮ ಬೀರಲಿದ್ದು, ಮೈಲೇಜ್ ಸುಮಾರು ಶೇಕಡಾ 5 ರಷ್ಟು ಕಡಿಮೆಯಾಗಬಹುದು ಎಂದು ತೈಲ ಸಚಿವಾಲಯ ತಿಳಿಸಿದೆ.

ಆದರೆ, ಈ ಎಥನಾಲ್ ಮಿಶ್ರಿತ ಇಂಧನ ಬಳಕೆಯಿಂದ ವಾಹನಗಳ ಎಂಜಿನ್‌ಗೆ ಯಾವುದೇ ರೀತಿಯ ಹಾನಿ ಅಥವಾ ತೊಂದರೆ ಉಂಟಾಗುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಎಥನಾಲ್ ಮಿಶ್ರಣದಿಂದ ಎಂಜಿನ್ ಕಾರ್ಯಕ್ಷಮತೆ ಸರಳವಾಗಲಿದ್ದು, ಇಂಗಾಲದ ಹೊರಸೂಸುವಿಕೆ ಗಣನೀಯವಾಗಿ ಕಡಿಮೆಯಾಗುತ್ತದೆ. ಈ ಮೂಲಕ ಪರಿಸರ ಸಂರಕ್ಷಣೆಗೆ ದೊಡ್ಡ ಕೊಡುಗೆ ಸಿಗಲಿದೆ ಎಂದು ಸಚಿವಾಲಯ ವಿವರಿಸಿದೆ. ಇನ್ಮುಂದೆ ಮಾರುಕಟ್ಟೆಯಲ್ಲಿ ಎಥನಾಲ್ ರಹಿತ ಪೆಟ್ರೋಲ್ ದೊರೆಯುವುದಿಲ್ಲ ಎಂಬ ಮಹತ್ವದ ಅಂಶವನ್ನು ಸಹ ಸರ್ಕಾರ ಪ್ರಕಟಿಸಿದೆ.

ಭಾರತವು ತನ್ನ ಒಟ್ಟು ಪೆಟ್ರೋಲಿಯಂ ಅಗತ್ಯದ ಶೇಕಡಾ 88 ರಷ್ಟು ಭಾಗವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಈ ವಿದೇಶಿ ಅವಲಂಬನೆಯನ್ನು ತಗ್ಗಿಸಲು ಮತ್ತು ದೇಶದ ರೈತರಿಗೆ ಆರ್ಥಿಕ ಅನುಕೂಲ ಕಲ್ಪಿಸಲು ಇ20 ಇಂಧನ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗಿದೆ. ಆದಾಗ್ಯೂ, 2023 ಕ್ಕಿಂತ ಮುಂಚಿತವಾಗಿ ತಯಾರಾದ ಹಳೆಯ ವಾಹನಗಳ ಮಾಲೀಕರು ಇ20 ಇಂಧನ ಬಳಕೆಯನ್ನು ವಿರೋಧಿಸುತ್ತಿದ್ದಾರೆ. ಹಳೆಯ ವಾಹನಗಳಿಗೆ ಇದು ಸೂಕ್ತವಲ್ಲ ಮತ್ತು ಮೈಲೇಜ್ ಇಳಿಕೆಯಿಂದಾಗಿ ಆರ್ಥಿಕ ನಷ್ಟವಾಗುತ್ತಿದೆ ಎಂಬುದು ಸವಾರರ ವಾದವಾಗಿದೆ.

Use of E20 petrol guarantees a drop in mileage there is no impact on the vehicles engine

 

Exit mobile version