ಅಮೆರಿಕದಲ್ಲಿ ಭಾರತೀಯರಿಗೆ ವೀಸಾ ಸಂಕಷ್ಟ: 3 ವರ್ಷ H-1B ಬಂದ್? ಸಂಸತ್ತಿನಲ್ಲಿ ಮಸೂದೆ ಮಂಡನೆ

ರಿಪಬ್ಲಿಕನ್ ಪಕ್ಷದ ಸಂಸದ ಎಲಿ ಕ್ರೇನ್ ಅವರು 'ಎಚ್‌-1ಬಿ ವೀಸಾ ದುರುಪಯೋಗ ತಡೆ ಕಾಯ್ದೆ-2026' (H-1B Visa Abuse Prevention Act - 2026) ಎಂಬ ವಿವಾದಾತ್ಮಕ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಮಸೂದೆಯು ಮುಂದಿನ ಮೂರು ವರ್ಷಗಳ ಕಾಲ ಹೊಸ ಎಚ್-1ಬಿ ವೀಸಾಗಳ ವಿತರಣೆಯನ್ನು ತಡೆಯುವ ಪ್ರಸ್ತಾವನೆಯನ್ನು ಹೊಂದಿದೆ.

ವಾಷಿಂಗ್ಟನ್ : ಸಾಫ್ಟ್‌ವೇರ್ ಲೋಕದ ದಿಗ್ಗಜ ಸಂಸ್ಥೆಗಳ ತವರೂರು ಅಮೆರಿಕದಲ್ಲಿ ನೆಲೆಸಿರುವ ಭಾರತೀಯ ಮೂಲದ ಉದ್ಯೋಗಿಗಳಿಗೆ ಈಗ ‘ವೀಸಾ ಭೀತಿ’ ಶುರುವಾಗಿದೆ.

ರಿಪಬ್ಲಿಕನ್ ಪಕ್ಷದ ಸಂಸದ ಎಲಿ ಕ್ರೇನ್ ಅವರು ‘ಎಚ್‌-1ಬಿ ವೀಸಾ ದುರುಪಯೋಗ ತಡೆ ಕಾಯ್ದೆ-2026’ (H-1B Visa Abuse Prevention Act – 2026) ಎಂಬ ವಿವಾದಾತ್ಮಕ ಮಸೂದೆಯನ್ನು ಅಮೆರಿಕ ಸಂಸತ್ತಿನಲ್ಲಿ ಮಂಡಿಸಿದ್ದಾರೆ. ಈ ಮಸೂದೆಯು ಮುಂದಿನ ಮೂರು ವರ್ಷಗಳ ಕಾಲ ಹೊಸ ಎಚ್-1ಬಿ ವೀಸಾಗಳ ವಿತರಣೆಯನ್ನು ತಡೆಯುವ ಪ್ರಸ್ತಾವನೆಯನ್ನು ಹೊಂದಿದೆ.

ಸ್ಥಳೀಯರಿಗೆ ಆದ್ಯತೆ ನೀಡುವ ತಂತ್ರ

ಈ ಮಸೂದೆಯನ್ನು ಮಂಡಿಸಿರುವ ಸಂಸದ ಎಲಿ ಕ್ರೇನ್ ಅವರಿಗೆ ರಿಪಬ್ಲಿಕನ್ ಪಕ್ಷದ ಇತರ 7 ಸಂಸದರು ಸಾಥ್ ನೀಡಿದ್ದಾರೆ. “ನಮ್ಮ ದೇಶದ ಉದ್ಯೋಗಗಳು ನಮ್ಮ ದೇಶದ ನಾಗರಿಕರಿಗೇ ಸಿಗಬೇಕು. ಬೃಹತ್ ತಂತ್ರಜ್ಞಾನ ಕಂಪನಿಗಳು ತಮ್ಮ ಲಾಭಕ್ಕಾಗಿ ವಿದೇಶಿ ಉದ್ಯೋಗಿಗಳನ್ನು ಬಳಸಿಕೊಂಡು ಸ್ಥಳೀಯ ಅಮೆರಿಕನ್ನರನ್ನು ಉದ್ಯೋಗಾವಕಾಶದಿಂದ ವಂಚಿಸುತ್ತಿವೆ. ನಾವು ಅಮೆರಿಕನ್ನರ ಹಿತಾಸಕ್ತಿ ಕಾಪಾಡಲು ಬದ್ಧರಾಗಿದ್ದೇವೆ,” ಎಂದು ಅವರು ವಾದಿಸಿದ್ದಾರೆ.

Also Read : Shoot at Donald Trump: ಡೋನಾಲ್ಡ್ ಟ್ರಂಪ್ ಔತಣಕೂಟದಲ್ಲಿ ಗುಂಡಿನ ದಾಳಿ: ಶೂಟರ್‌ ಸೆರೆ

ಭಾರತೀಯರಿಗೆ ಭಾರಿ ಹೊಡೆತ

ಅಮೆರಿಕದ ಎಚ್-1ಬಿ ವೀಸಾವನ್ನು ಅತಿ ಹೆಚ್ಚು ಬಳಸಿಕೊಳ್ಳುವವರ ಪಟ್ಟಿಯಲ್ಲಿ ಭಾರತೀಯರು ಮೊದಲ ಸ್ಥಾನದಲ್ಲಿದ್ದಾರೆ. ಪ್ರತಿ ವರ್ಷ ಸಾವಿರಾರು ಭಾರತೀಯ ಟೆಕ್ಕಿಗಳು ಈ ವೀಸಾ ಮೂಲಕ ಅಮೆರಿಕದ ಪ್ರತಿಷ್ಠಿತ ಕಂಪನಿಗಳಲ್ಲಿ ಉದ್ಯೋಗ ಪಡೆಯುತ್ತಾರೆ. ಒಂದು ವೇಳೆ ಈ ಮಸೂದೆ ಸಂಸತ್ತಿನಲ್ಲಿ ಅಂಗೀಕಾರಗೊಂಡು ಕಾನೂನಾಗಿ ಬದಲಾದರೆ:

Also Read : ತಂಬಾಕು ಮುಕ್ತ ದೇಶ ನಿರ್ಮಾಣಕ್ಕೆ ಬ್ರಿಟನ್​ ಪಣ ..! 2008ರ ನಂತರ ಜನಿಸಿದವರಿಗೆ ಸಿಗರೇಟ್ ನಿಷೇಧ..!

ಗೃಹ ಕಚೇರಿ ಮತ್ತು ಬೃಹತ್ ಕಂಪನಿಗಳ ಆತಂಕ

ಅಮೆರಿಕದ ಬೃಹತ್ ಟೆಕ್ ಕಂಪನಿಗಳಾದ ಗೂಗಲ್, ಮೈಕ್ರೋಸಾಫ್ಟ್ ಮತ್ತು ಮೆಟಾ ಅತಿ ಹೆಚ್ಚು ಎಚ್-1ಬಿ ಉದ್ಯೋಗಿಗಳನ್ನು ಅವಲಂಬಿಸಿವೆ. ಈ ಮಸೂದೆಯು ಕೇವಲ ಉದ್ಯೋಗಿಗಳ ಮೇಲೆ ಮಾತ್ರವಲ್ಲದೆ, ಅಮೆರಿಕದ ತಾಂತ್ರಿಕ ಪ್ರಗತಿಯ ಮೇಲೂ ಪರಿಣಾಮ ಬೀರಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸದ್ಯಕ್ಕೆ ಇದು ಮಸೂದೆಯ ರೂಪದಲ್ಲಿದ್ದು, ಸಂಸತ್ತಿನ ಉಭಯ ಸದನಗಳಲ್ಲಿ ಚರ್ಚೆಯಾಗಿ ಅಂಗೀಕಾರಗೊಳ್ಳಬೇಕಿದೆ.

America h1b visa 3 year pause bill impact on Indian it employees 2026

Exit mobile version