World

Saturnino de la Fuente : ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಡೆ ಲಾ ಫ್ಯುಯೆಂಟೆ ನಿಧನ

Published by
ರಶ್ಮಿ ಎಸ್. | Rashmi S.

Saturnino de la Fuente : ಮ್ಯಾಡ್ರಿಡ್: ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂಬ ಗಿನ್ನೆಸ್ ವರ್ಲ್ಡ್ ರೆಕಾರ್ಡ್ಸ್ ಸೃಷ್ಟಿಸಿರುವ ಸ್ಪೇನ್ ದೇಶದ ಸ್ಯಾಟರ್ನಿನೊ ಡೆ ಲಾ ಫ್ಯೂಯೆಂಟೆ ಅವರು 112 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ ಎಂದು ಗಿನ್ನೆಸ್​ ವರ್ಲ್ಡ್​ ರೆಕಾರ್ಡ್​ ಮಾಹಿತಿ ನೀಡಿದೆ. ಡೆ ಲಾ ಫ್ಯೂಯೆಂಟೆ ಅವರು ವಾಯುವ್ಯ ಸ್ಪೇನ್‌ನ ಲಿಯೋನ್‌ನಲ್ಲಿರುವ ಮನೆಯಲ್ಲಿ ನಿಧನರಾದರು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿ ಸಂಸ್ಥೆ EFE ಮಾಹಿತಿ ನೀಡಿದೆ.


ಗಿನ್ನೆಸ್​ ವಿಶ್ವ ದಾಖಲೆಯು ಸೆಪ್ಟೆಂಬರ್​ ತಿಂಗಳಿನಲ್ಲಿ ಡಿ ಲಾ ಫ್ಯೂಯೆಂಟೆ ಅವರನ್ನು ವಿಶ್ವದ ಅತ್ಯಂತ ಹಿರಿಯ ವ್ಯಕ್ತಿ ಎಂದು ಘೋಷಣೆ ಮಾಡಿತ್ತು. ನಿನ್ನೆ ಅವರು ನಿಧನರಾಗಿದ್ದಾರೆ ಎಂದು ಅಧಿಕೃತ ಮಾಹಿತಿ ಹೊರಬಿದ್ದಿದೆ. ಡೆ ಲಾ ಫ್ಯೂಯೆಂಟೆ 1909ರ ಫೆಬ್ರವರಿ 11ರಂದು ಕ್ಯಾಸ್ಟ್ರೋದಲ್ಲಿ ಜನಿಸಿದ್ದರು ಎನ್ನಲಾಗಿದೆ.


ಡೆ ಲಾ ಫ್ಯೂಯೆಂಟೆ ವೃತ್ತಿಯಲ್ಲಿ ಚಮ್ಮಾರರಾಗಿದ್ದರು ಹಾಗೂ ತಮ್ಮ 13ನೆ ವಯಸ್ಸಿನಲ್ಲಿ ಶೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಲು ಆರಂಭಿಸಿದ್ದರು. 1918ರಲ್ಲಿ ಈಗಿನ ಕೊರೊನಾದಂತೆ ಸ್ಫೋಟಗೊಂಡಿದ್ದ ಸ್ಪ್ಯಾನಿಷ್​ ಜ್ವರದ ಸಂದರ್ಭದಲ್ಲಿಯೂ ಸಾಂಕ್ರಾಮಿಕ ಕಾಯಿಲೆಯಿಂದ ಬದುಕುಳಿದಿದ್ದರು. ಹಾಗೂ ಅವರ ಪತ್ನಿ ಆಂಟೋನಿನಾ ಅವರಿಗೆ ಎಂಟು ಮಕ್ಕಳಿದ್ದರು ಎನ್ನಲಾಗಿದೆ. ಇವರಿಗೆ 14 ಮೊಮ್ಮಕ್ಕಳು ಹಾಗೂ 22 ಮರಿ ಮೊಮ್ಮಕ್ಕಳಿದ್ದಾರೆ.

ಇದನ್ನು ಓದಿ : supporters fighting : ಬಿ.ಕೆ.ಹರಿಪ್ರಸಾದ್‌ vs ರಮಾನಾಥ ರೈ : ಬೆಂಬಲಿಗರ ಗಲಾಟೆಗೆ ಹೈಕಮಾಂಡ್‌ ಗರಂ

ಇದನ್ನೂ ಓದಿ : Karnataka school collage close : ಶಾಲೆ ಕಾಲೇಜು 15-20 ದಿನ ಬಂದ್‌ ಮಾಡಿ : ನೈಟ್‌ ಕರ್ಪ್ಯೂಯಿಂದ ಜನಜೀವನಕ್ಕೆ ತೊಂದರೆ : ಎಚ್.ಡಿ.ಕುಮಾರಸ್ವಾಮಿ

Saturnino de la Fuente, the world’s oldest man, passes away at 112

Share