Kannada News Next

job

ಕೊಚ್ಚಿನ್‌ ಶಿಪ್‌ಯಾರ್ಡ್‌ ನಲ್ಲಿ 210 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟ ! ITI ಆದವರಿಗೆ ಸುವರ್ಣಾವಕಾಶ !

ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಐಟಿಐ ಟ್ರೇಡ್, ಟೆಕ್ನಿಷಿಯನ್, ವೊಕೇಶನಲ್ ಅಪ್ರೆಂಟಿಸ್ ಸೇರಿದಂತೆ ವಿವಿಧ ಅಪ್ರೆಂಟಿಸ್‌ಶಿಪ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ.

By Archana V Bhat
Ccochin Shipyard

ಭಾರತ ಸರ್ಕಾರದ ಅಧೀನದಲ್ಲಿರುವ ಹಡಗು ನಿರ್ಮಾಣ ಮತ್ತು ದುರಸ್ಥಿ ಕಾರ್ಯವನ್ನು ಮಾಡುವ ಕೊಚ್ಚಿನ್‌ ಶಿಪ್‌ಯಾರ್ಡ್‌ ಲಿಮಿಟೆಡ್‌ ಅಪ್ರೆಂಟಿಸ್‌ಶಿಪ್‌ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಇದರ ಪ್ರಕಾರ ಸಿಎಸ್‌ಎಲ್‌ ಐಟಿಐ ಟ್ರೇಡ್, ಟೆಕ್ನಿಷಿಯನ್, ವೊಕೇಶನಲ್ ಅಪ್ರೆಂಟಿಸ್ ಸೇರಿದಂತೆ ವಿವಿಧ ವಿಭಾಗಗಳಲ್ಲಿ ಹುದ್ದೆಗಳನ್ನು ಭರ್ತಿ ಮಾಡಲಿದೆ. ಇದರಲ್ಲಿ 210 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಕ್ಟೋಬರ್‌ 8 ರೊಳಗೆ ತಮ್ಮ ಅರ್ಜಿಯನ್ನು ಸಲ್ಲಿಸಬಹುದು. ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳಿಗೆ ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.

ಹುದ್ದೆಗಳ ವಿವರ

ಎಲೆಕ್ಟ್ರಿಷಿಯನ್- 31

ವೆಲ್ಡರ್- 31

ಮೆಷಿನಿಸ್ಟ್- 5

ಫಿಟ್ಟರ್- 23

ಎಲೆಕ್ಟ್ರಾನಿಕ್ ಮೆಕ್ಯಾನಿಕ್- 9

ಇನ್ಸ್ಟ್ರುಮೆಂಟ್ ಮೆಕ್ಯಾನಿಕ್- 8

ಡ್ರಾಫ್ಟ್ಸ್‌ಮ್ಯಾನ್ (ಸಿವಿಲ್)- 2

ಪೇಂಟರ್ (ಜನರಲ್, ಮೆರೈನ್)- 5

ಡ್ರಾಫ್ಟ್ಸ್‌ಮ್ಯಾನ್ (ಮೆಕ್)- 4

ಮೆಕ್ಯಾನಿಕ್ ಮೋಟಾರ್ ವೆಹಿಕಲ್- 7

ಶೀಟ್ ಮೆಟಲ್ ವರ್ಕರ್- 23

ಪೈಪ್ ಫಿಟ್ಟರ್/ಪ್ಲಂಬರ್- 23

ಮೆಕ್ಯಾನಿಕಲ್ ಡೀಸೆಲ್- 7

ಮೆರೈನ್ ಫಿಟ್ಟರ್- 14

ರೆಫ್ರಿಜರೇಷನ್ ಮತ್ತು ಎಸಿ ಕಂಡೀಷನಿಂಗ್- 1

ವುಡ್‌ವರ್ಕ್ ಟೆಕ್ನಿಷಿಯನ್/ಕಾರ್ಪೆಂಟರ್- 12

ವಿದ್ಯಾರ್ಹತೆ

ಅಭ್ಯರ್ಥಿಗಳು 10ನೇ ತರಗತಿಯ ನಂತರ ಐಟಿಐ, ರಾಷ್ಟ್ರೀಯ ವ್ಯಾಪಾರ ಪ್ರಮಾಣಪತ್ರ, ವೃತ್ತಿಪರ ಉನ್ನತ ಮಾಧ್ಯಮಿಕ ಶಿಕ್ಷಣ (VHSE) ದಲ್ಲಿ ಉತ್ತೀರ್ಣರಾಗಿರಬೇಕು.

ವಯೋಮಿತಿ

ಈ ನೇಮಕಾತಿಯಲ್ಲಿ ಅಭ್ಯರ್ಥಿಗಳ ಕನಿಷ್ಠ ವಯಸ್ಸು 18 ವರ್ಷಗಳು.

ಆಯ್ಕೆ ಪ್ರಕ್ರಿಯೆ

ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮಾಡಿದ ನಂತರ ಪ್ರಮಾಣಪತ್ರ ಪರಿಶೀಲನೆ ಮೂಲಕ ನೇಮಕಾತಿ ನಡೆಯಲಿದೆ. ಈ ನೇಮಕಾತಿಯಲ್ಲಿ ಅಭ್ಯರ್ಥಿಗಳು ಕಡ್ಡಾಯವಾಗಿ ಕೇರಳ ನಿವಾಸಿಗಳಾಗಿರಬೇಕು.

ವೇತನ

ಇಲ್ಲಿ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ 11,000 ರೂ. ಗಳನ್ನು ನೀಡಲಾಗುವುದು.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ತಮ್ಮ ಅರ್ಜಿ ಸಲ್ಲಿಸಲು ಅಕ್ಟೋಬರ್‌ 8 ಕೊನೆಯ ದಿನವಾದ್ದರಿಂದ ಆ ದಿನಾಂಕದ ಒಳಗೆ ಕೊಚ್ಚಿನ್ ಶಿಪ್‌ಯಾರ್ಡ್‌ನ ಅಧಿಕೃತ ವೆಬ್‌ಸೈಟ್‌ cochinshipyard.in ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.