ಪರೀಕ್ಷೆ ಇಲ್ಲದೇ ಆಫೀಸರ್‌ ಆಗುವ ಸುವರ್ಣಾವಕಾಶ ! SBI ನ 207 ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗೆ ಇಂದೇ ಅರ್ಜಿ ಸಲ್ಲಿಸಿ !

SBI ನಲ್ಲಿ ಅರ್ಹ ಅನುಭವಿ ಅಭ್ಯರ್ಥಿಗಳಿಗಾಗಿ ನೇಮಕಾತಿ ಘೋಷಣೆಯಾಗಿದೆ. ಅಧಿಸೂಚನೆಯ ಪ್ರಕಾರ ಯಾರೆಲ್ಲ ಅರ್ಜಿ ಸಲ್ಲಿಸಬಹುದು? ಏನೇನು ಅರ್ಹತೆಗಳಿರಬೇಕು?

By Archana V Bhat

1 min read

WhatsAppPost
State Bank of India SCO Recruitment
State Bank of India SCO Recruitment

ದೇಶದ ಪ್ರತಿಷ್ಠಿತ ಬ್ಯಾಂಕ್‌ಗಳಲ್ಲಿ ಒಂದಾದ ಸ್ಟೇಟ್‌ ಬ್ಯಾಂಕ್‌ ಆಫ್ ಇಂಡಿಯಾ (SBI) ವೆಲ್ತ್‌ ಮ್ಯಾನೇಜ್ಮೆಂಟ್‌ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಈ ಮೂಲಕ ಅದು 207 ಸ್ಪೆಷಲಿಸ್ಟ್‌ ಕೇಡರ್‌ ಆಫೀಸರ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಇದರಲ್ಲಿ ಝೋನಲ್‌ ಹೆಡ್‌, ರೀಜನಲ್‌ ಹೆಡ್‌, ಎವಿಪಿ ವೆಲ್ತ್‌ ನಂತಹ ಏಳು ರೀತಿಯ ಹುದ್ದೆಗಳು ಇರಲಿದೆ. ಇದಕ್ಕೆ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆ ಈಗಾಗಲೇ ಪ್ರಾರಂಭವಾಗಿದ್ದು, ಸೆಪ್ಟೆಂಬರ್‌ 25 ಕೊನೆಯ ದಿನವಾಗಿದೆ. ಈ ನೇಮಕಾತಿಯಲ್ಲಿ ವಿಶೇಷವೆಂದರೆ ಅಭ್ಯರ್ಥಿಗಳು ಒಂದಕ್ಕಿಂತ ಹೆಚ್ಚು ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

ಶೈಕ್ಷಣಿಕ ಅರ್ಹತೆ

ವಿವಿಧ ಹುದ್ದೆಗಳಿಗೆ ನೇಮಕಾತಿ ನಡೆಯುತ್ತಿರುವುದರಿಂದ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯು ಇರುತ್ತದೆ. ಎಂಬಿಎ, ಪಿಜಿ, ಸಿಎ, ಸಿಎಫ್‌ಎ ಹೀಗೆ ಹುದ್ದೆಗೆ ಅನುಗುಣವಾಗಿ ಶೈಕ್ಷಣಿಕ ಅರ್ಹತೆಯನ್ನು ನಿಗದಿಪಡಿಸಿದೆ. ಅರ್ಜಿ ಸಲ್ಲಿಸಲು ಕೆಲಸ ಅನುಭವ ಮುಖ್ಯವಾಗಿದೆ.

ವಯೋಮಿತಿ

ಅಭ್ಯರ್ಥಿಗಳ ವಯೋಮಿತಿಯನ್ನು ಹುದ್ದೆಗೆ ಅನುಗುಣವಾಗಿ ನಿಗದಿಪಡಿಸಿದೆ. ಕನಿಷ್ಠ ವಯಸ್ಸು 23 ರಿಂದ ಗರಿಷ್ಠ 50 ವರ್ಷ ವಯೋಮಾನದ ಅಭ್ಯರ್ಥಿಗಳು ತಮಗೆ ಹೊಂದಿಕೆಯಾಗುವ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸುವುದು ಎಲ್ಲಿ?

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಬ್ಯಾಂಕ್‌ನ ಅಧಿಕೃತ ವೆಬ್‌ಸೈಟ್‌ sbi.bank.in ಗೆ ಭೇಟಿ ನೀಡಬೇಕು.

ಅರ್ಜಿ ಶುಲ್ಕ

ಎಸ್‌ಬಿಐನ ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು. ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 750 ರೂ. ಆದರೆ ಎಸ್‌ಸಿ, ಎಸ್‌ಟಿ ಮತ್ತು ದಿವ್ಯಾಂಗರಿಗೆ ಯಾವುದೇ ರೀತಿಯ ಅರ್ಜಿ ಶುಲ್ಕವಿಲ್ಲ

ಆಯ್ಕೆ ಹೇಗೆ?

ಈ ನೇಮಕಾತಿಯಲ್ಲಿ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ. ಅಭ್ಯರ್ಥಿಗಳನ್ನು ನೇರವಾಗಿ ಸಂದರ್ಶನಕ್ಕೆ ಕರೆಯಲಾಗುತ್ತದೆ.

Topics

ಸಂಬಂಧಿತ ಸುದ್ದಿಗಳು