Kannada News Next

job

CRPF ನಲ್ಲಿ 521 ಕ್ರೀಡಾ ಕೋಟಾ ಹುದ್ದೆಗಳಿಗೆ ನೇಮಕಾತಿ ಪ್ರಕಟ ! ಅರ್ಜಿ ಸಲ್ಲಿಸಲು ಯಾರು ಅರ್ಹರು?

ಸಿಆರ್‌ಪಿಎಫ್‌ ಉದ್ಯೋಗಕ್ಕಾಗಿ ಕಾಯುತ್ತಿರುವ ಕ್ರೀಡಾಪಟುಗಳಿಗೆ ಗುಡ್‌ನ್ಯೂಸ್‌. 22 ಕ್ರೀಡಾ ವಿಭಾಗಗಳಲ್ಲಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

By Archana V Bhat
Photo: AI

ಕೇಂದ್ರ ಗೃಹ ಸಚಿವಾಲಯದ ಅಡಿಯಲ್ಲಿರುವ ಕೇಂದ್ರ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್‌) ಕ್ರೀಡಾ ಕೋಟಾದ ಅಡಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಬಿಡುಗಡೆ ಮಾಡಿದೆ. ಇದರಲ್ಲಿ 521 ಹೆಡ್‌ಕಾನ್ಸ್‌ಟೇಬಲ್‌ ಮತ್ತು ಕಾನ್ಸ್‌ಟೇಬಲ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಸಿಆರ್‌ಪಿಎಫ್‌ 22 ಕ್ರೀಡಾ ವಿಭಾಗಗಳಲ್ಲಿ ಅರ್ಹ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಸ್ವೀಕರಿಸುತ್ತದೆ. ಈ ನೇಮಕಾತಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಅಕ್ಟೋಬರ್‌ 12 ರಿಂದ ಪ್ರಾರಂಭವಾಗಲಿದೆ. ಅರ್ಜಿ ಸಲ್ಲಿಕೆಗೆ ಅಂತಿಮ ದಿನಾಂಕ ನವೆಂಬರ್‌ 11. ಯಾವೆಲ್ಲ ಕ್ರೀಡಾ ವಿಭಾಗಗಳಲ್ಲಿ ಅರ್ಜಿ ಸಲ್ಲಿಸಬಹುದು ಎಂದು ನೋಡೋಣ.

ಹುದ್ದೆಗಳ ವಿವರ

ಹೆಡ್‌ಕಾನ್ಸ್‌ಟೇಬಲ್‌ (ಸಾಮಾನ್ಯ ಕರ್ತವ್ಯ) - 182 : ಇದರಲ್ಲಿ ಪುರುಷರು 150 ಮತ್ತು ಮಹಿಳೆಯರು 32

ಕಾನ್ಸ್‌ಟೇಬಲ್‌ (ಸಾಮಾನ್ಯ ಕರ್ತವ್ಯ) - 339 : ಇದರಲ್ಲಿ ಪುರುಷರು 258 ಮತ್ತು ಮಹಿಳೆಯರು 81

ವಿಭಾಗವಾರು ಖಾಲಿ ಹುದ್ದೆಗಳು

1) ಅಕ್ವಾಟಿಕ್ಸ್ (ಸ್ವಿಮ್ಮಿಂಗ್‌, ಡ್ರೈವಿಂಗ್‌, ವಾಟರ್ ಪೋಲೋ) - 60

2) ಆರ್ಚರಿ - 3

3) ಅಥ್ಲೆಟಿಕ್ಸ್ - 101

4) ಬ್ಯಾಡ್ಮಿಂಟನ್ - 5

5) ಬ್ಯಾಸ್ಕೆಟ್ಬಾಲ್ - 16

6) ಬಾಡಿ ಬಿಲ್ಡಿಂಗ್ - 11

7) ಬಾಕ್ಸಿಂಗ್ - 20

8) ಫುಟ್ಬಾಲ್ - 22

9) ಜಿಮ್ನಾಸ್ಟಿಕ್ಸ್ - 12

10) ಹ್ಯಾಂಡ್ಬಾಲ್ - 12

11) ಹಾಕಿ - 15

12) ಜೂಡೋ - 16

13) ಕಬಡ್ಡಿ - 27

14) ಕರಾಟೆ - 17

15) ಶೂಟಿಂಗ್ - 53

16) ಟೇಕ್ವಾಂಡೋ - 14

17) ವಾಲಿಬಾಲ್ - 20

18) ವಾಟರ್‌ ಸ್ಪೋರ್ಟ್ಸ್‌ (ಕಯಾಕಿಂಗ್, ಕ್ಯಾನೋಯಿಂಗ್, ರೋಯಿಂಗ್) - 20

19) ವೇಯ್ಟ್‌ ಲಿಫ್ಟಿಂಗ್‌ - 19

20) ವುಶು- 20

21) ಕುಸ್ತಿ- 26

22) ಯೋಗ (ಯೋಗಾಸನ) - 12

ಶೈಕ್ಷಣಿಕ ಅರ್ಹತೆ

ಸಿಆರ್‌ಪಿಎಫ್‌ನ ಹೆಡ್‌ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಸಲ್ಲಿಸು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ 10+2 ಅಥವಾ ಪಿಯುಸಿ ಉತ್ತೀರ್ಣರಾಗಿರಬೇಕು. ಅಂತರಾಷ್ಟ್ರೀಯ ಕ್ರೀಡಾ ಸ್ಪರ್ಧೆಗಳಲ್ಲಿ ದೇಶಕ್ಕಾಗಿ ಆಡಿರಬೇಕು. ಅಥವಾ ರಾಷ್ಟ್ರೀಯ ಕ್ರೀಡಾಕೂಟ/ಚಾಂಪಿಯನ್‌ಶಿಪ್‌/ಅಂತರ ವಿಶ್ವಿದ್ಯಾಲಯ ಪಂದ್ಯಾವಳಿಗಳಲ್ಲಿ 1 ರಿಂದ 3 ನೇ ಸ್ಥಾನ ಪಡೆದಿರಬೇಕು.

ಕಾನ್ಸ್ಟೇಬಲ್ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು. ರಾಷ್ಟ್ರೀಯ ಮಟ್ಟದ ಚಾಂಪಿಯನ್‌ಶಿಪ್‌ಗಳಲ್ಲಿ ಅಥವಾ ಖೇಲೋ ಇಂಡಿಯಾ/ರಾಷ್ಟ್ರೀಯ ಶಾಲಾ ಕ್ರೀಡಾಕೂಟದಲ್ಲಿ ರಾಜ್ಯ/ಯುಟಿ ಪರ ಆಡಿರಬೇಕು.

ವಯೋಮಿತಿ

ಅಭ್ಯರ್ಥಿಗಳು 18 ರಿಂದ 23 ವರ್ಷ ವಯಸ್ಸಿನವರು ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ನಿಯಮಾನುಸಾರ ಮೀಸಲು ವರ್ಗದ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಆಯ್ಕೆ ಹೇಗೆ?

ದಾಖಲೆ ಪರಿಶೀಲನೆ, ದೈಹಿಕ ಗುಣಮಟ್ಟ ಪರೀಕ್ಷೆ (PST), ಕ್ರೀಡಾ ಪ್ರಾಯೋಗಿಕ ಪರೀಕ್ಷೆ, ವಿವರವಾದ ವೈದ್ಯಕೀಯ ಪರೀಕ್ಷೆಯ ಮೂಲಕ ಆಯ್ಕೆ ಮಾಡಲಾಗುವುದು. ಅದರಲ್ಲಿ ಪಡೆದ ಅರ್ಹತೆಯ ಆಧಾರದ ಮೇಲೆ ಅಂಕಗಳನ್ನು ಹಂಚುವ ಮೂಲಕ ಅರ್ಹತಾ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ.

ವೇತನ

ಆಯ್ಕೆಯಾದ ಅಭ್ಯರ್ಥಿಗಳಿಗೆ

* ಹೆಡ್ ಕಾನ್ಸ್‌ಟೇಬಲ್ ಹುದ್ದೆಗೆ ತಿಂಗಳಿಗೆ 25,500-81,000 ರೂ.

* ಕಾನ್ಸ್‌ಟೇಬಲ್ ಹುದ್ದೆಗೆ 21,700-69,100 ರೂ. ವೇತನ ನೀಡಲಾಗುವುದು.

ಅರ್ಜಿ ಶುಲ್ಕ

ಅರ್ಜಿ ಶುಲ್ಕ 100 ರೂ. ಆದರೆ ಮಹಿಳೆಯರು, ಎಸ್‌ಸಿ, ಎಸ್‌ಟಿ, ಮಾಜಿ ಸೈನಿಕರಿಗೆ ಯಾವುದೇ ಶುಲ್ಕವಿಲ್ಲ.

ಅರ್ಜಿ ಸಲ್ಲಿಕೆ ಹೇಗೆ?

ಅರ್ಜಿಯನ್ನು ಆನ್‌ಲೈನ್‌ ಮೂಲಕ ಸಲ್ಲಿಸಬೇಕು. ಅರ್ಜಿ ಸಲ್ಲಿಸುವ ಪ್ರಕ್ರಿಯೆ ಅಕ್ಟೋಬರ್ 12 ರಂದು ಆರಂಭವಾಗಲಿದ್ದು, ನವೆಂಬರ್ 11 ರಂದು ಕೊನೆಗೊಳ್ಳಲಿದೆ. ಹೆಚ್ಚಿನ ಮಾಹಿತಿಗಾಗಿ rect.crpf.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.