ಇಂಜಿನಿಯರಿಂಗ್ ಪದವೀಧರರಿಗೆ ಶುಭ ಸುದ್ದಿ: ಇಸ್ರೋದಲ್ಲಿ 176 ಸೈಂಟಿಸ್ಟ್/ಇಂಜಿನಿಯರ್ ಹುದ್ದೆಗಳ ಭರ್ತಿ
ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗ್ರೂಪ್ 'ಎ' ಹಂತದ ಲೆವೆಲ್ 10 ವೇತನ ಶ್ರೇಣಿ ನೀಡಲಾಗುತ್ತದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯು (ISRO) 176 ಸೈಂಟಿಸ್ಟ್ ಮತ್ತು ಇಂಜಿನಿಯರ್ 'SC' ಹುದ್ದೆಗಳ ಭರ್ತಿಗೆ ಆನ್‌ಲೈನ್ ಅರ್ಜಿಗಳನ್ನು ಆಹ್ವಾನಿಸಿದೆ. ಇಂಜಿನಿಯರಿಂಗ್ ಪದವೀಧರರಿಗೆ ಬಾಹ್ಯಾಕಾಶ ಕ್ಷೇತ್ರದಲ್ಲಿ ವೃತ್ತಿಜೀವನ ಆರಂಭಿಸಲು ಇದು ಉತ್ತಮ ಅವಕಾಶವಾಗಿದೆ.
ಈ ನೇಮಕಾತಿಯಲ್ಲಿ ಎಲೆಕ್ಟ್ರಾನಿಕ್ಸ್ (100), ಮೆಕ್ಯಾನಿಕಲ್ (53) ಮತ್ತು ಕಂಪ್ಯೂಟರ್ ಸೈನ್ಸ್ (23) ವಿಭಾಗಗಳ ಒಟ್ಟು 176 ಹುದ್ದೆಗಳಿವೆ. ಬಿ.ಇ ಅಥವಾ ಬಿ.ಟೆಕ್‌ನಲ್ಲಿ ಕನಿಷ್ಠ 65% ಅಂಕ ಅಥವಾ 6.84 CGPA ಪಡೆದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳಿಗೆ ಸೆಪ್ಟೆಂಬರ್ 16, 2026 ರ ಅನ್ವಯ ಗರಿಷ್ಠ 28 ವರ್ಷ ವಯೋಮಿತಿ ನಿಗದಿಪಡಿಸಲಾಗಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಗ್ರೂಪ್ 'ಎ' ಹಂತದ ಲೆವೆಲ್ 10 ವೇತನ ಶ್ರೇಣಿ ನೀಡಲಾಗುತ್ತದೆ.
ಆಯ್ಕೆ ಪ್ರಕ್ರಿಯೆಯು ಕಂಪ್ಯೂಟರ್ ಆಧಾರಿತ ಲಿಖಿತ ಪರೀಕ್ಷೆ (CBT) ಮತ್ತು ವೈಯಕ್ತಿಕ ಸಂದರ್ಶನವನ್ನು ಒಳಗೊಂಡಿರುತ್ತದೆ. ಅಂತಿಮ ಆಯ್ಕೆಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನ ಎರಡಕ್ಕೂ ತಲಾ 50% ರಷ್ಟು ತೂಕಮಾನ (Weightage) ನೀಡಲಾಗುತ್ತದೆ.
ಆಸಕ್ತರು ಅಧಿಕೃತ ವೆಬ್‌ಸೈಟ್ isro.gov.in ಮೂಲಕ ಸೆಪ್ಟೆಂಬರ್ 16, 2026 ರ ರಾತ್ರಿ 11:55 ರ ಒಳಗಾಗಿ ಅರ್ಜಿ ಸಲ್ಲಿಸಬೇಕು. ಲಿಖಿತ ಪರೀಕ್ಷೆಯು ದೇಶದ 37 ಪ್ರಮುಖ ನಗರಗಳಲ್ಲಿ ನಡೆಯಲಿದೆ.
Topics
ಸಂಬಂಧಿತ ಸುದ್ದಿಗಳು
job
2 ತಿಂಗಳ ಇಂಟರ್ನ್ಶಿಪ್ಗೆ 60 ಲಕ್ಷ! ಹೆಚ್ಎಫ್ಟಿ ಉದ್ಯೋಗಕ್ಕೆ ಬಂಪರ್ ಆಫರ್
job
ಆರ್ಮಿ AOC Group C ಹುದ್ದೆಗಳಿಗೆ ನೇಮಕಾತಿ ಘೋಷಣೆ : ಹೀಗೆ ಅರ್ಜಿ ಸಲ್ಲಿಸಿ
job
ಇಂಡಿಯಾ ಪೋಸ್ಟ್ ನೇಮಕಾತಿ : 24,000 ಕ್ಕೂ ಹೆಚ್ಚು ಜಿಡಿಎಸ್ ಹುದ್ದೆಗಳಿಗೆ ಈ ದಿನದಿಂದ ಅರ್ಜಿ ಸಲ್ಲಿಕೆ ಪ್ರಾರಂಭ!
job

