10ನೇ ತರಗತಿ ಪಾಸಾದವರಿಗೆ ಸಿಹಿ ಸುದ್ದಿ; ಅಂಚೆ ಇಲಾಖೆಯಲ್ಲಿ ಕಾರ್ ಡ್ರೈವರ್ ಹುದ್ದೆಗಳಿಗೆ ಅರ್ಜಿ ಆಹ್ವಾನ!
ನೇಮಕಾತಿಯ ಭಾಗವಾಗಿ ಸ್ಟಾಫ್ ಕಾರ್ ಡ್ರೈವರ್ (Staff Car Driver) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ
By Meghana Pranuth | ಮೇಘನಾ ಪ್ರಣೂತ್
1 min read
ಕೇಂದ್ರ ಸರ್ಕಾರಿ ಕೆಲಸದ ನಿರೀಕ್ಷೆಯಲ್ಲಿದ್ದ ಕರ್ನಾಟಕದ ಅಭ್ಯರ್ಥಿಗಳಿಗೆ ಭಾರತೀಯ ಅಂಚೆ ಇಲಾಖೆ (India Post) ಸುವರ್ಣ ಅವಕಾಶ ನೀಡಿದೆ. 2026ನೇ ಸಾಲಿನ ನೇಮಕಾತಿಯ ಭಾಗವಾಗಿ ಸ್ಟಾಫ್ ಕಾರ್ ಡ್ರೈವರ್ (Staff Car Driver) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಹೊರಡಿಸಲಾಗಿದ್ದು, ಅರ್ಹ ಅಭ್ಯರ್ಥಿಗಳಿಂದ ಆಫ್‌ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ.
ಬೆಂಗಳೂರು ಹಾಗೂ ಮೈಸೂರು ಭಾಗದಲ್ಲಿ ಕಾರ್ಯನಿರ್ವಹಿಸಲು ಬಯಸುವ ಅಭ್ಯರ್ಥಿಗಳು ಈ ಅವಕಾಶವನ್ನು ಬಳಸಿಕೊಳ್ಳಬಹುದು.
ಹುದ್ದೆಯ ವಿವರಗಳು:
ಸಂಸ್ಥೆಯ ಹೆಸರು: ಭಾರತೀಯ ಅಂಚೆ ಇಲಾಖೆ (India Post)
ಹುದ್ದೆಯ ಹೆಸರು: ಸ್ಟಾಫ್ ಕಾರ್ ಡ್ರೈವರ್ (Staff Car Driver)
ಒಟ್ಟು ಖಾಲಿ ಹುದ್ದೆಗಳು: 11
ಉದ್ಯೋಗ ಸ್ಥಳ: ಬೆಂಗಳೂರು ಹಾಗೂ ಮೈಸೂರು (ಕರ್ನಾಟಕ)
ವೇತನ: ತಿಂಗಳಿಗೆ ₹18,000 ರಿಂದ ₹63,200 ರವರೆಗೆ
ಅರ್ಹತಾ ಮಾನದಂಡಗಳು:
ಶೈಕ್ಷಣಿಕ ಅರ್ಹತೆ: ಮಾನ್ಯತೆ ಪಡೆದ ಶಿಕ್ಷಣ ಮಂಡಳಿಯಿಂದ 10ನೇ ತರಗತಿ (SSLC) ಉತ್ತೀರ್ಣರಾಗಿರಬೇಕು.
ಚಾಲನಾ ಪರವಾನಗಿ: ಚಾಲ್ತಿಯಲ್ಲಿರುವ ಡ್ರೈವಿಂಗ್ ಲೈಸೆನ್ಸ್ (Valid Driving License) ಹೊಂದಿರುವುದು ಕಡ್ಡಾಯ.
ವಯೋಮಿತಿ: 13 ಆಗಸ್ಟ್ 2026ಕ್ಕೆ ಅನ್ವಯವಾಗುವಂತೆ ಗರಿಷ್ಠ 56 ವರ್ಷ. (ಸರ್ಕಾರಿ ನಿಯಮಗಳ ಪ್ರಕಾರ ವಯೋಮಿತಿ ಸಡಿಲಿಕೆ ಇರಲಿದೆ).
ಅರ್ಜಿ ಸಲ್ಲಿಸುವುದು ಹೇಗೆ?
ಈ ಹುದ್ದೆಗಳಿಗೆ ಅರ್ಜಿ ಪ್ರಕ್ರಿಯೆಯು ಆಫ್‌ಲೈನ್ ಮೂಲಕ ನಡೆಯಲಿದೆ.
ಭಾರತೀಯ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ಅರ್ಜಿ ನಮೂನೆಯನ್ನು ಡೌನ್‌ಲೋಡ್ ಮಾಡಿಕೊಳ್ಳಿ.
ಅರ್ಜಿಯಲ್ಲಿ ಅಗತ್ಯವಿರುವ ವಿವರಗಳನ್ನು ಸ್ಪಷ್ಟವಾಗಿ ಭರ್ತಿ ಮಾಡಿ.
3. ನಿಮ್ಮ ಶೈಕ್ಷಣಿಕ ದಾಖಲೆಗಳು ಹಾಗೂ ಡ್ರೈವಿಂಗ್ ಲೈಸೆನ್ಸ್‌ನ ಸ್ವಯಂ ದೃಢೀಕರಿಸಿದ (Self-attested) ಪ್ರತಿಗಳನ್ನು ಲಗತ್ತಿಸಿ.
4. ಭರ್ತಿ ಮಾಡಿದ ಅರ್ಜಿಯನ್ನು ಕೆಳಗಿನ ವಿಳಾಸಕ್ಕೆ ರಿಜಿಸ್ಟರ್ಡ್ ಪೋಸ್ಟ್ ಅಥವಾ ಸ್ಪೀಡ್ ಪೋಸ್ಟ್ ಮೂಲಕ ಕಳುಹಿಸಿ.
5. ಅರ್ಜಿ ಕಳುಹಿಸಬೇಕಾದ ವಿಳಾಸ: The Manager, Mail Motor Service, Bengaluru – 560001
6. ಅರ್ಜಿ ಸಲ್ಲಿಕೆ ಪ್ರಾರಂಭ : 01 ಆಗಸ್ಟ್ 2026
7.ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 29 ಸೆಪ್ಟೆಂಬರ್ 2026
ಹೆಚ್ಚಿನ ವಿವರಗಳಿಗಾಗಿ ಹಾಗೂ ಅಧಿಕೃತ ಅಧಿಸೂಚನೆ ಪರಿಶೀಲಿಸಲು indiapost.gov.in ವೆಬ್‌ಸೈಟ್‌ಗೆ ಭೇಟಿ ನೀಡಿ.
Topics

