ಪದವೀಧರರಿಗೆ ಸುವರ್ಣಾವಕಾಶ : ಸೆಂಟ್ರಲ್‌ ಬ್ಯಾಂಕ್‌ನಿಂದ 4500 ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಆಹ್ವಾನ

ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ 4500 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನ್ಯಾಷನಲ್‌ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್‌ ಸ್ಕೀಮ್‌ ನ ಅಧಿಕೃತ ವೆಬ್‌ಸೈಟ್ ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಿ.

ಸರ್ಕಾರಿ ಕೆಲಸದ ಕನಸು ಕಾಣುತ್ತಿರುವ ಯುವ ಪದವೀಧರರಿಗೆ ಗುಡ್‌ ನ್ಯೂಸ್‌. ಸೆಂಟ್ರಲ್ ಬ್ಯಾಂಕ್‌ ಆಫ್‌ ಇಂಡಿಯಾ 4500 ಅಪ್ರೆಂಟಿಸ್‌ಶಿಪ್‌ ಹುದ್ದೆಗಳಿಗೆ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಅಧಿಸೂಚನೆಯ ಪ್ರಕಾರ ಅರ್ಜಿ ಸಲ್ಲಿಕೆಯು ಈಗಾಗಲೇ ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ನ್ಯಾಷನಲ್‌ ಅಪ್ರೆಂಟಿಸ್‌ಶಿಪ್ ಟ್ರೈನಿಂಗ್‌ ಸ್ಕೀಮ್‌ ನ ಅಧಿಕೃತ ವೆಬ್‌ಸೈಟ್ ಗೆ ಬೇಟಿ ನೀಡಿ ಅರ್ಜಿ ಸಲ್ಲಿಸಬಹುದಾಗಿದೆ. ಈ ಕೆಳಗಿನ ಅರ್ಹತೆಗಳಿರುವ ಅಭ್ಯರ್ಥಿಗಳು ಜೂನ್‌ 22ರ ಒಳಗೆ ಅರ್ಜಿ ಸಲ್ಲಿಸಬಹುದಾಗಿದೆ.

ವಿದ್ಯಾರ್ಹತೆ

ಸೆಂಟ್ರಲ್‌ ಬ್ಯಾಂಕ್‌ನ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಯಾವುದೇ ಸ್ಟ್ರೀಮ್‌ನಲ್ಲಿ ಪದವಿ ಅಥವಾ ತತ್ಸಮಾನ ಪದವಿಯನ್ನು ಹೊಂದಿರಬೇಕು.

ವಯೋಮಿತಿ

ಈ ನೇಮಕಾತಿಯಲ್ಲಿ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳ ಕನಿಷ್ಠ ವಯಸ್ಸು 20 ವರ್ಷಗಳು ಹಾಗೂ ಗರಿಷ್ಠ ವಯಸ್ಸು 28 ವರ್ಷಗಳು. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಅರ್ಜಿ ಶುಲ್ಕ

ಸೆಂಟ್ರಲ್ ಬ್ಯಾಂಕ್‌ ಅಪ್ರೆಂಟಿಸ್‌ಶಿಪ್‌ ಹುದ್ದೆಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದೆ. ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ (ಪುರುಷ) ಅಭ್ಯರ್ಥಿಗಳು ₹944 ಮತ್ತು ಸಾಮಾನ್ಯ, ಒಬಿಸಿ, ಇಡಬ್ಲ್ಯೂಎಸ್ (ಮಹಿಳೆ) ಅಭ್ಯರ್ಥಿಗಳು ₹708 ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿದೆ. ಎಸ್‌ಸಿ/ಎಸ್‌ಟಿ/ಪಿಎಚ್/ತೃತೀಯ ಲಿಂಗ ಅಭ್ಯರ್ಥಿಗಳು ಒಟ್ಟು ₹236 ಶುಲ್ಕವನ್ನು ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ

ಈ ನೇಮಕಾತಿಗೆ ಆಯ್ಕೆಯಾಗಲು, ಅಭ್ಯರ್ಥಿಗಳು ಆನ್‌ಲೈನ್ ಪರೀಕ್ಷೆಯಲ್ಲಿ ಭಾಗವಹಿಸಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ, ಅವರು ಸ್ಥಳೀಯ ಭಾಷಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕು. ತದನಂತರ, ಅಂತಿಮ ಪಟ್ಟಿಯಲ್ಲಿ ಹೆಸರು ಇರುವ ಅಭ್ಯರ್ಥಿಗಳನ್ನು ಖಾಲಿ ಹುದ್ದೆಗಳಿಗೆ ನೇಮಕಮಾಡಿಕೊಳ್ಳಲಾಗುತ್ತದೆ. ಈ ನೇಮಕಾತಿಗೆ ಉದ್ಯೋಗದ ಅವಧಿ 12 ತಿಂಗಳುಗಳಾಗಿರುತ್ತದೆ.

ಇದನ್ನೂ ಓದಿ: ಸರ್ಕಾರಿ ನೌಕರರೇ ಗಮನಿಸಿ: ಇನ್ಮುಂದೆ ಬೆಳಗ್ಗೆ 10ಕ್ಕೆ ಹಾಜರಾತಿ ಕಡ್ಡಾಯ, ‘KAMS’ ಆ್ಯಪ್‌ನಲ್ಲೇ ಅಟೆಂಡೆನ್ಸ್ ಕಡ್ಡಾಯ

ಅರ್ಜಿ ಸಲ್ಲಿಕೆ ಹೇಗೆ?

Exit mobile version