Karnataka police recruitment : ಪೊಲೀಸ್​ ಹುದ್ದೆ ಆಕಾಂಕ್ಷಿಗಳಿಗೆ ಗುಡ್​ನ್ಯೂಸ್​ : 5 ವರ್ಷಗಳ ವಯೋಮಿತಿ ಸಡಿಲಿಸಿದ ರಾಜ್ಯ ಸರ್ಕಾರ

ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.2027ರ ಅಂತ್ಯದವರೆಗೆ ನಡೆಯಲಿರುವ ಎಲ್ಲಾ ಪೊಲೀಸ್ ನೇಮಕಾತಿಗಳಲ್ಲಿ ಅಭ್ಯರ್ಥಿಗಳು ಈ ಹೆಚ್ಚಿನ ವಯೋಮಿತಿಯ ಲಾಭವನ್ನು ಪಡೆಯಲಿದ್ದಾರೆ.

Karnataka police recruitment : ಕಳೆದ ಕೆಲವು ವರ್ಷಗಳಿಂದ ನೇಮಕಾತಿ ವಿಳಂಬದಿಂದಾಗಿ ವಯೋಮಿತಿ ಹೆಚ್ಚಾಗಿ ಪೊಲೀಸ್​ ಹುದ್ದೆ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತಿದ್ದ ಅಭ್ಯರ್ಥಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿ ಸುದ್ದಿಯನ್ನು ನೀಡಿದೆ. ನೇರ ನೇಮಕಾತಿಯಲ್ಲಿ ಭಾಗವಹಿಸುವ ಎಲ್ಲಾ ಪ್ರವರ್ಗದ ಅಭ್ಯರ್ಥಿಗಳಿಗೆ 5 ವರ್ಷಗಳ ಒಂದು ಬಾರಿಯ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.

ಪೊಲೀಸ್​ ಇಲಾಖೆಯ ಹುದ್ದೆಗೆ ಪರೀಕ್ಷೆ ಬರೆಯಲು ಇಚ್ಛಿಸುವ ಎಲ್ಲಾ ಪ್ರವರ್ಗಗಳ ಅಭ್ಯರ್ಥಿಗಳಿಗೆ ಈ ವಯೋಮಿತಿ ಸಡಿಲಿಕೆ ಅನ್ವಯವಾಗಲಿದೆ. ಗರಿಷ್ಠ ವಯೋಮಿತಿಯಲ್ಲಿ 5 ವರ್ಷಗಳ ಸಡಿಲಿಕೆ ನೀಡಲಾಗಿದ್ದು,ದಿನಾಂಕ 31.12.2027 ರವರೆಗೆ ಹೊರಡಿಸಲಾಗುವ ಎಲ್ಲಾ ನೇರ ನೇಮಕಾತಿ ಅಧಿಸೂಚನೆಗಳಿಗೆ ಅನ್ವಯವಾಗಲಿದೆ.2027ರ ಅಂತ್ಯದವರೆಗೆ ನಡೆಯಲಿರುವ ಎಲ್ಲಾ ಪೊಲೀಸ್ ನೇಮಕಾತಿಗಳಲ್ಲಿ ಅಭ್ಯರ್ಥಿಗಳು ಈ ಹೆಚ್ಚಿನ ವಯೋಮಿತಿಯ ಲಾಭವನ್ನು ಪಡೆಯಲಿದ್ದಾರೆ.

ನೇಮಕಾತಿಯಲ್ಲಿ ವಿಳಂಬ ಹಾಗೂ ವಿವಿಧ ವೈಯಕ್ತಿಕ ಕಾರಣಗಳಿಂದಾಗಿ ಪೊಲೀಸ್​ ಇಲಾಖೆಯಲ್ಲಿ ಪರೀಕ್ಷೆ ಬರೆಯುವ ಅವಕಾಶದಿಂದ ವಂಚಿತರಾಗುತ್ತಿದ್ದ ಅಭ್ಯರ್ಥಿಗಳಿಗೆ, ರಾಜ್ಯ ಸರ್ಕಾರದ ಈ ನೂತನ ನಿಯಮವು ಹೊಸ ಭರವಸೆ ಮೂಡಿಸಿರುವದಂತೂ ಸುಳ್ಳಲ್ಲ.

ಪೊಲೀಸ್ ನೇಮಕಾತಿ ಅಡಿಯಲ್ಲಿ ವಿವಿಧ ಹುದ್ದೆಗಳ ನೇಮಕಾತಿಯಲ್ಲಿ 5 ವರ್ಷಗಳ ವಯೋಮಿತಿಯನ್ನು ಸಡಿಲಿಸಿದೆ. ಇದರೊಂದಿಗೆ, ನೇಮಕಾತಿ ಅಧಿಸೂಚನೆಯ ಕೊನೆಯ ದಿನಾಂಕದ ವೇಳೆಗೆ, ಅಭ್ಯರ್ಥಿಗಳ ಗರಿಷ್ಠ ವಯಸ್ಸನ್ನು 5 ವರ್ಷಗಳವರೆಗೆ ಹೆಚ್ಚಿಸಲಾಗಿದೆ. ಈ ಸಡಿಲಿಕೆ ಈ ಕೆಳಗಿನ ಹುದ್ದೆಗಳಿಗೆ ಅನ್ವಯಿಸುತ್ತದೆ:

Also Read : ಎಸ್‌ಎಸ್‌ಬಿಯಲ್ಲಿ ಕಾನ್‌ಸ್ಟೆಬಲ್‌ ಹುದ್ದೆಗೆ ನೇಮಕಾತಿ ಪ್ರಕಟ: 10ನೇ ತರಗತಿ ಪಾಸಾದವರು ಅರ್ಜಿ ಸಲ್ಲಿಸಿ

ಪೊಲೀಸ್‌ ನೇಮಕಾತಿ : ಯಾವ ಹುದ್ದೆಗಳಿಗೆ ಎಷ್ಟು ವಯಸ್ಸಿನ ಸಡಿಲಿಕೆ

Also Read : ಮುಂಬಡ್ತಿ ಪರೀಕ್ಷೆಯಲ್ಲಿ ಕನ್ನಡಕ್ಕೆ ಅವಕಾಶ ನೀಡದ್ದಕ್ಕೆ ಕರವೇ ಆಕ್ರೋಶ : ರೈಲ್ವೇ ಪರೀಕ್ಷೆಯೇ ರದ್ದು!

ಪೊಲೀಸ್ ನೇಮಕಾತಿಯಲ್ಲಿ ವಯೋಮಿತಿ ಸಡಿಲಿಕೆಯ ಮುಖ್ಯ ಉದ್ದೇಶವೆಂದರೆ, ಕಳೆದ ಕೆಲವು ವರ್ಷಗಳಿಂದ ನೇಮಕಾತಿ ಪ್ರಕ್ರಿಯೆ ನಡೆಯದ ಕಾರಣ ಪೊಲೀಸ್ ಹುದ್ದೆಗೆ ಸೇರಲು ವಯಸ್ಸಾದ ಆಕಾಂಕ್ಷಿಗಳಿಗೆ ಮತ್ತೊಂದು ಅವಕಾಶ ನೀಡುವುದು. ಇದರಿಂದಾಗಿ, ಯುವಜನರು ಕಳೆದು ಹೋದ ಅವಕಾಶವನ್ನು ಮತ್ತೆ ಪಡೆದು, ಖಾಕಿ ಕನಸು ನನಸು ಮಾಡಿಕೊಳ್ಳಲು ಸಹಾಯವಾಗುತ್ತದೆ.

ಈ ವಯೋಮಿತಿ ಸಡಿಲಿಕೆಯು ರಾಜ್ಯದಲ್ಲಿ ಪೊಲೀಸ್ ಹುದ್ದೆಗೆ ಸೇರಲು ಇಚ್ಛಿಸುವ ಸಾವಿರಾರು ಯುವಜನರಿಗೆ ಒಂದು ಭರ್ಜರಿ ಸಿಹಿಸುದ್ದಿಯಾಗಿದೆ. ನಿಮ್ಮ ಖಾಕಿ ಕನಸು ನನಸಾಗಲು ಇಂದೇ ತಯಾರಿ ನಡೆಸಿ, ನಿಮ್ಮ ಕನಸಿನ ಹುದ್ದೆಗೆ ಅರ್ಜಿ ಸಲ್ಲಿಸಿ. ಹೆಚ್ಚಿನ ಮಾಹಿತಿಗಾಗಿ, ರಾಜ್ಯ ಪೊಲೀಸ್ ಇಲಾಖೆಯ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ.

Karnataka police recruitment age limit relaxation

Exit mobile version