ಆರ್‌ಆರ್‌ಬಿಯಿಂದ ಅತಿದೊಡ್ಡ ನೇಮಕಾತಿ : 6,557 ತಂತ್ರಜ್ಞ ಹುದ್ದೆಗಳಿಗೆ ಇಂದಿನಿಂದ ಅರ್ಜಿ ಸಲ್ಲಿಕೆ ಪ್ರಾರಂಭ

ರೈಲ್ವೆಯಲ್ಲಿ 6,557 ತಂತ್ರಜ್ಞ ಹುದ್ದೆಗೆ ಅರ್ಜಿ ಸಲ್ಲಿಕೆ ಇಂದಿನಿಂದ ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಅರ್ಜಿ ಸಲ್ಲಿಸಬಹುದಾಗಿದೆ.

ರೈಲ್ವೆಯಲ್ಲಿ ಉದ್ಯೋಗದ ಕನಸು ಕಂಡು ಅದಕ್ಕಾಗಿ ತಯಾರಿ ನಡೆಸುತ್ತಿರುವ ಯುವಕರಿಗೆ ಗುಡ್‌ನ್ಯೂಸ್‌. ರೈಲ್ವೆ ನೇಮಕಾತಿ ಮಂಡಳಿಯು ರೈಲ್ವೆ ತಂತ್ರಜ್ಞ ಹುದ್ದೆಗಳ ನೇಮಕಾತಿಗೆ ಅಧಿಕೃತ ಅಧಿಸೂಚನೆ ಹೊರಡಿಸಿದೆ. ಪದವಿ ಪಾಸಾದ ಅಭ್ಯರ್ಥಿಗಳಿಗೆ 6,557 ಹುದ್ದೆಗಳನ್ನು ತೆರೆಯಲಾಗಿದೆ. ತಂತ್ರಜ್ಞ ಗ್ರೇಡ್‌ – I, ಗ್ರೇಡ್‌ – III ಹುದ್ದೆಗಳಿಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಇಂದಿನಿಂದ (ಜೂನ್‌ 30, 2026) ಪ್ರಾರಂಭವಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ಜುಲೈ 29 ರವರೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿಯಲ್ಲಿ ಇರಬೇಕಾದ ಅರ್ಹತೆಗಳೇನು ಎಂದು ನೋಡೋಣ.

ವಯೋಮಿತಿ

ತಂತ್ರಜ್ಞ ಗ್ರೇಡ್-1 ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಅಭ್ಯರ್ಥಿಗಳು 18 ರಿಂದ 33 ವರ್ಷ ವಯಸ್ಸಿನ ಮಿತಿಯಲ್ಲಿರಬೇಕು. ತಂತ್ರಜ್ಞ ಗ್ರೇಡ್-III ಹುದ್ದೆಗಳಿಗೆ ಅರ್ಜಿ ಸಲ್ಲಿಸಲು, 18 ರಿಂದ 30 ವರ್ಷ ವಯಸ್ಸಿನ ಮಿತಿಯನ್ನು ನಿಗದಿಪಡಿಸಲಾಗಿದೆ. ಮೀಸಲು ವರ್ಗದ ಅಭ್ಯರ್ಥಿಗಳಿಗೆ ನಿಯಮಾನುಸಾರ ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆಯಿರುತ್ತದೆ.

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸಲು, ಅಭ್ಯರ್ಥಿಗಳು ಸಂಬಂಧಪಟ್ಟ ಟ್ರೇಡ್‌ನಲ್ಲಿ ಐಟಿಐ, ಡಿಪ್ಲೊಮಾ ಅಥವಾ ಎಂಜಿನಿಯರಿಂಗ್‌ ಪದವಿ ಹೊಂದಿರಬೇಕು.

ವೇತನ

ತಂತ್ರಜ್ಞ ಗ್ರೇಡ್-1 ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 29,200 ರೂ. ಮತ್ತು ತಂತ್ರಜ್ಞ ಗ್ರೇಡ್-3 ಹುದ್ದೆಗಳಿಗೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ತಿಂಗಳಿಗೆ 19,900 ರೂ. ನೀಡಲಾಗುವುದು.

ಅರ್ಜಿ ಶುಲ್ಕ

ಈ ನೇಮಕಾತಿಯಲ್ಲಿ ಪಾಲ್ಗೊಳ್ಳಲು ಅಭ್ಯರ್ಥಿಗಳು ಅರ್ಜಿ ಶುಲ್ಕ ಪಾವತಿಸಬೇಕು.

ಅರ್ಜಿ ಸಲ್ಲಿಕೆ ಹೇಗೆ?

ಮೊದಲಿಗೆ ಅಭ್ಯರ್ಥಿಗಳು ಆರ್‌ಆರ್‌ಬಿಯ ಅಧಿಕೃತ ವೆಬ್‌ಸೈಟ್‌ಗೆ ಹೋಗಿ. ಅಲ್ಲಿ ನೇಮಕಾತಿ ವಿಭಾಗಕ್ಕೆ ತೆರಳಿ ನಿಮ್ಮ ಅರ್ಜಿ ಸಲ್ಲಿಸಬಹುದು.

ನೇಮಕಾತಿ ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ಕಿಸಿ.

Exit mobile version