ನಿಮ್ಮ ಕಾರಿಗೆ ‘PY’ ನಂಬರ್ ಪ್ಲೇಟ್ ಇದೆಯೇ ? ಹುಷಾರ್ ! ಕರ್ನಾಟಕ ಆರ್‌ಟಿಒ ಬಿಗ್ ಶಾಕ್: ಲಕ್ಷ ಲಕ್ಷ ದಂಡದ ಜೊತೆ ಕಾರ್ ಸೀಜ್‌ ಫಿಕ್ಸ್

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ರಸ್ತೆ ತೆರಿಗೆ (Road Tax) ಹೊಂದಿರುವ ರಾಜ್ಯಗಳಲ್ಲಿ ಒಂದು. ಇಲ್ಲಿ ನಾಲ್ಕು ಚಕ್ರದ ವಾಹನಗಳ ಮೇಲೆ ಬೆಲೆಯ ಶೇ. 13 ರಿಂದ ಶೇ. 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಬೆಂಗಳೂರು/ಕಲಬುರಗಿ: ಕರ್ನಾಟಕದಲ್ಲಿ ಐಷಾರಾಮಿ ಕಾರು ಖರೀದಿಸಿ, ರೋಡ್ ಟ್ಯಾಕ್ಸ್ ಉಳಿಸಲು ಪುದುಚೇರಿಯಲ್ಲಿ ರಿಜಿಸ್ಟ್ರೇಷನ್ ಮಾಡಿಸುವ ಪ್ಲಾನ್ ಮಾಡಿದ್ದೀರಾ ? ಹಾಗಾದ್ರೆ ಸಾರಿಗೆ ಇಲಾಖೆ ಹೊಸ ಕಾರ್ಯಾಚರಣೆಗೆ ಸಜ್ಜಾಗಿದೆ. ತೆರಿಗೆ ವಂಚಿಸುವ ಉದ್ದೇಶದಿಂದಲೇ ಹೊರ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸಿ ಕರ್ನಾಟಕದ ರಸ್ತೆಗಳಲ್ಲಿ ರಾಜಾರೋಷವಾಗಿ ಓಡಾಡುವ ವಾಹನಗಳಿಗೆ ಸಾರಿಗೆ ಇಲಾಖೆ ದುಬಾರಿ ದಂಡ ವಿಧಿಸಲಿದೆ.

PY ನೋಂದಣಿ : ಲಕ್ಷ ಲಕ್ಷ ಉಳಿಸಲು ಹೋಗಿ ಕೋಟಿ ಕೋಟಿ ದಂಡ

ಕಲಬುರಗಿ ಜಿಲ್ಲೆಯೊಂದರಲ್ಲೇ ಕಳೆದ ಒಂದು ವರ್ಷದ ಅವಧಿಯಲ್ಲಿ ಪುದುಚೇರಿ (Puducherry) ನೋಂದಣಿ ಹೊಂದಿದ್ದ ಸುಮಾರು 92 ವಾಹನಗಳನ್ನು ಆರ್‌ಟಿಒ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಕೇವಲ ವಾಹನ ಸೀಜ್ ಮಾಡುವುದು ಮಾತ್ರವಲ್ಲದೆ, ಆ ಮಾಲೀಕರಿಂದ ಬರೋಬ್ಬರಿ 1.98 ಕೋಟಿ ರೂಪಾಯಿ ತೆರಿಗೆ ಮತ್ತು ದಂಡವನ್ನು ವಸೂಲಿ ಮಾಡಿದ್ದಾರೆ. ಈ ಯಶಸ್ವಿ ಕಾರ್ಯಾಚರಣೆಯನ್ನು ಈಗ ಇಡೀ ರಾಜ್ಯದಾದ್ಯಂತ ವಿಸ್ತರಿಸಲು ಸಾರಿಗೆ ಇಲಾಖೆ ನಿರ್ಧರಿಸಿದೆ.

ಜನ ಯಾಕೆ ಪುದುಚೇರಿ ನಂಬರ್ ಹಿಂದೆ ಬೀಳ್ತಾರೆ ?

ಕರ್ನಾಟಕವು ದೇಶದಲ್ಲೇ ಅತಿ ಹೆಚ್ಚು ರಸ್ತೆ ತೆರಿಗೆ (Road Tax) ಹೊಂದಿರುವ ರಾಜ್ಯಗಳಲ್ಲಿ ಒಂದು. ಇಲ್ಲಿ ನಾಲ್ಕು ಚಕ್ರದ ವಾಹನಗಳ ಮೇಲೆ ಬೆಲೆಯ ಶೇ. 13 ರಿಂದ ಶೇ. 20 ರಷ್ಟು ತೆರಿಗೆ ವಿಧಿಸಲಾಗುತ್ತದೆ.

ಲೆಕ್ಕಾಚಾರ ಹೀಗಿದೆ: ಉದಾಹರಣೆಗೆ ನೀವು 50 ಲಕ್ಷ ರೂಪಾಯಿ ಮೌಲ್ಯದ ಕಾರು ಖರೀದಿಸಿದರೆ, ಕರ್ನಾಟಕದಲ್ಲಿ ಸುಮಾರು 10 ಲಕ್ಷ ರೂಪಾಯಿ ಟ್ಯಾಕ್ಸ್ ಕಟ್ಟಬೇಕಾಗುತ್ತದೆ.

ಆದರೆ, ಪುದುಚೇರಿಯಲ್ಲಿ ಈ ತೆರಿಗೆ ಪ್ರಮಾಣ ಅತ್ಯಂತ ಕಡಿಮೆ. ಅಲ್ಲಿ ನಕಲಿ ವಿಳಾಸ ಸೃಷ್ಟಿಸಿ ನೋಂದಣಿ ಮಾಡಿಸಿದರೆ ಲಕ್ಷಾಂತರ ರೂಪಾಯಿ ಉಳಿಸಬಹುದು ಎಂಬುದು ಹಲವರ ಲೆಕ್ಕಾಚಾರ. ಇದೇ ಕಾರಣಕ್ಕೆ ಐಷಾರಾಮಿ ಕಾರುಗಳ ಮಾಲೀಕರು ಪುದುಚೇರಿ ನೋಂದಣಿಯ ಮೊರೆ ಹೋಗುತ್ತಿದ್ದಾರೆ.

Also Read : ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ದಿಢೀರ್ ಅಸ್ವಸ್ಥ: ವೇದಿಕೆ ಮೇಲೆಯೇ ಕುಸಿದು ಬಿದ್ದ ನಿವೃತ್ತ ನ್ಯಾಯಮೂರ್ತಿ

ಮೋಟಾರು ವಾಹನ ಕಾಯ್ದೆ (Motor Vehicle Act) ಏನು ಹೇಳುತ್ತದೆ ?

ರಾಜ್ಯ ಮೋಟಾರು ವಾಹನ ಕಾಯ್ದೆಯ ಪ್ರಕಾರ ನಿಯಮಗಳು ಬಹಳ ಕಠಿಣವಾಗಿವೆ:

ಐಷಾರಾಮಿ ಕಾರುಗಳ ಮೇಲೆ ಅಧಿಕಾರಿಗಳ ಹದ್ದಿನ ಕಣ್ಣು

ಸದ್ಯ ಬೆಂಗಳೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ ‘PY’ (ಪುದುಚೇರಿ) ನೋಂದಣಿ ಸಂಖ್ಯೆ ಹೊಂದಿರುವ ಎಸ್‌ಯುವಿ ಮತ್ತು ಐಷಾರಾಮಿ ಕಾರುಗಳನ್ನು ತಡೆದು ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ. ಮಾಲೀಕರು ಕರ್ನಾಟಕದ ವಿಳಾಸ ಹೊಂದಿದ್ದು, ವಾಹನ ಮಾತ್ರ ಪುದುಚೇರಿಯಲ್ಲಿ ನೋಂದಣಿಯಾಗಿದ್ದರೆ ಅಂತಹ ವಾಹನಗಳನ್ನು ಸ್ಥಳದಲ್ಲೇ ಸೀಜ್ ಮಾಡಲಾಗುತ್ತಿದೆ.

Also Read : ಕರ್ನಾಟಕದಲ್ಲಿ ‘ಬಿಸಿ ರಾತ್ರಿ’ಗಳ ಭೀತಿ: 30 ವರ್ಷಗಳಲ್ಲೇ ದಾಖಲೆ ಬರೆದ ತಾಪಮಾನ; ಈ ಜಿಲ್ಲೆಗಳಿಗೆ ಉಷ್ಣಾಘಾತದ ಎಚ್ಚರಿಕೆ!

ಅಲ್ಪ ಹಣ ಉಳಿಸಲು ಹೋಗಿ ಕಾನೂನು ಬಾಹಿರವಾಗಿ ಬೇರೆ ರಾಜ್ಯದ ನೋಂದಣಿ ಮಾಡಿಸಬೇಡಿ. ಸಾರಿಗೆ ಇಲಾಖೆಯ ತಪಾಸಣೆಯ ವೇಳೆ ಸಿಕ್ಕಿಬಿದ್ದರೆ, ನೀವು ಉಳಿಸಲು ಹೋದ ಹಣಕ್ಕಿಂತ ಎರಡು ಪಟ್ಟು ದಂಡ ಕಟ್ಟಬೇಕಾಗುತ್ತದೆ ಹಾಗೂ ನಿಮ್ಮ ಪ್ರತಿಷ್ಠೆಯ ಕಾರು ಪೊಲೀಸ್ ಠಾಣೆಯ ಪಾಲಾಗಲಿದೆ.

karnataka puducherry vehicle PY registration fine rto rules

Exit mobile version