ಕಬ್ಬಿಣದ ಕಾವಲಿಯಲ್ಲಿ ದೋಸೆ, ಚಪಾತಿ, ರೋಟಿ ಅಥವಾ ತಾಳಿಪಿಟ್ಟು ಮಾಡುವುದು ಆರೋಗ್ಯಕ್ಕೆ ಅತ್ಯಂತ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ಅಡುಗೆ ಮಾಡಿದ ತಕ್ಷಣ ಬಿಸಿಯಾಗಿರುವ ಕಾವಲಿಯ ಮೇಲೆ ನೀರು ಹಾಕಿ ತೊಳೆಯುವ ಅಭ್ಯಾಸ ನಿಮಗಿದ್ದರೆ, ಈ ಕೂಡಲೇ ಎಚ್ಚೆತ್ತುಕೊಳ್ಳಿ! ನೀವು ಮಾಡುತ್ತಿರುವ ಈ ಸಣ್ಣ ತಪ್ಪು ನಿಮ್ಮನ್ನು ಮಾರಣಾಂತಿಕ ರೋಗಗಳಿಗೆ ತಳ್ಳಬಹುದು.
ಹಿಂದಿನ ಕಾಲದಲ್ಲಿ ಪ್ರತಿಯೊಬ್ಬರ ಮನೆಯಲ್ಲೂ ಕಬ್ಬಿಣದ ಪಾತ್ರೆಗಳನ್ನೇ ಬಳಸಲಾಗುತ್ತಿತ್ತು. ಆದರೆ, ಇತ್ತೀಚಿನ ವರ್ಷಗಳಲ್ಲಿ ಎಣ್ಣೆ ಬಳಕೆಯಿಲ್ಲದೆ ಸುಲಭವಾಗಿ ಅಡುಗೆ ಮಾಡಬಹುದು ಎಂದು ನಾನ್-ಸ್ಟಿಕ್ ಪಾತ್ರೆಗಳು ಮಾರುಕಟ್ಟೆಗೆ ಬಂದವು. ನಾನ್-ಸ್ಟಿಕ್ ಪಾತ್ರೆಗಳು ಗೀರು ಬಿದ್ದಾಗ ಅವುಗಳ ಕೆಮಿಕಲ್ ಪೂತಿಕರಣ ಹೊಟ್ಟೆಗೆ ಹೋಗಿ ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಗಳಿಗೆ ಕಾರಣವಾಗುತ್ತದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.
ಈ ಸತ್ಯ ತಿಳಿದ ಹಲವರು ಈಗ ಮತ್ತೆ ಸಾಂಪ್ರದಾಯಿಕ ಕಬ್ಬಿಣದ ಕಾವಲಿಗಳ ಮೊರೆ ಹೋಗಿದ್ದಾರೆ. ಆದರೆ, ಕಬ್ಬಿಣದ ಕಾವಲಿ ಬಳಸುವಾಗ ಮಾಡುವ ಒಂದು ಪ್ರಮುಖ ತಪ್ಪು ಆರೋಗ್ಯಕ್ಕೆ ದೊಡ್ಡ ಕಂಟಕವಾಗಬಹುದು.
ಅಡುಗೆ ಮಾಡಿದ ತಕ್ಷಣ ಜಿಡ್ಡು ಬೇಗ ಹೋಗಲಿ ಎಂಬ ಕಾರಣಕ್ಕೆ ಹೆಚ್ಚಿನವರು ಬಿಸಿ ಕಾವಲನ್ನು ನೇರವಾಗಿ ನಲ್ಲಿಯ ಕೆಳಗೆ ಇಟ್ಟು ತಣ್ಣೀರು ಸುರಿಯುತ್ತಾರೆ. ಆದರೆ, ವಿಜ್ಞಾನ ಮತ್ತು ಆರೋಗ್ಯ ತಜ್ಞರು ಇದನ್ನು ತೀವ್ರವಾಗಿ ವಿರೋಧಿಸುತ್ತಾರೆ.
ಕಾವಲಿ ವಿಪರೀತ ಬಿಸಿಯಾಗಿದ್ದಾಗ ಅದರ ಲೋಹದ ಅಣುಗಳು (Molecules)ಬಗ್ಗಿರುತ್ತವೆ. ಅದರ ಮೇಲೆ ಏಕಾಏಕಿ ತಣ್ಣೀರು ಬಿದ್ದಾಗ ವಿಜ್ಞಾನದ ಭಾಷೆಯಲ್ಲಿ "ಥರ್ಮಲ್ ಶಾಕ್" ಉಂಟಾಗುತ್ತದೆ. ವಿಷಕಾರಿ ಕಾರ್ಬನ್ ಕಣಗಳು ಈ ಉಷ್ಣತೆಯ ತೀವ್ರ ಬದಲಾವಣೆಯಿಂದಾಗಿ ಕಬ್ಬಿಣದ ಮೇಲಿರುವ ಸೂಕ್ಷ್ಮ ಕಾರ್ಬನ್ ಕಣಗಳು ಸಡಿಲಗೊಳ್ಳುತ್ತವೆ (Loose ಆಗುತ್ತವೆ).
ಸಡಿಲಗೊಂಡ ಈ ಕಪ್ಪು ಕಾರ್ಬನ್ ಕಣಗಳು, ನೀವು ಮುಂದಿನ ಬಾರಿ ಅದೇ ಕಾವಲಿಯಲ್ಲಿ ದೋಸೆ ಅಥವಾ ರೋಟಿ ಮಾಡುವಾಗ ಆಹಾರಕ್ಕೆ ಅಂಟಿಕೊಳ್ಳುತ್ತವೆ. ಈ ಮೆಟಲ್‌ನ ವಿಷಕಾರಿ ಕಣಗಳು (Toxic particles) ನಿರಂತರವಾಗಿ ಹೊಟ್ಟೆಗೆ ಸೇರಿದರೆ ಗಂಭೀರವಾದ ಉದರ ಸಂಬಂಧಿ ಸಮಸ್ಯೆಗಳು ಹಾಗೂ ದೇಹಕ್ಕೆ ಅಪಾರ ಹಾನಿ ಉಂಟಾಗುತ್ತದೆ.
ಕಾವಲಿಯನ್ನು ತೊಳೆಯುವ ಸರಿಯಾದ ವಿಧಾನ:
ಅಡುಗೆ ಮುಗಿದ ತಕ್ಷಣ ಕಾವಲಿಗೆ ನೀರು ಹಾಕಬೇಡಿ. ಕಾವಲಿ ಸಂಪೂರ್ಣವಾಗಿ ತಣ್ಣಗಾಗುವವರೆಗೆ (ಸಾಮಾನ್ಯ ಉಷ್ಣತೆಗೆ ಬರುವವರೆಗೆ) ಕಾಯಿರಿ. ಕಾವಲಿ ಸಂಪೂರ್ಣ ಆರಿದ ನಂತರವಷ್ಟೇ ತಣ್ಣೀರು ಅಥವಾ ಉಗುರುಬೆಚ್ಚಗಿನ ನೀರು ಬಳಸಿ ತೊಳೆಯಿರಿ. ನಮ್ಮ ಅಡುಗೆ ಮನೆಯೇ ನಮ್ಮ ಆರೋಗ್ಯದ ಮೂಲ ಕೇಂದ್ರ. ಸಣ್ಣ ಜಾಗರೂಕತೆ ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯವನ್ನು ಕಾಪಾಡಬಲ್ಲದು!