ಭೀಮನ ಅಮಾವಾಸ್ಯೆ ವಿಶೇಷ: ಸಾಂಪ್ರದಾಯಿಕ ಸಿಹಿ ಕಡಬು ಮಾಡುವ ಸರಿಯಾದ ವಿಧಾನ!
ಸಿಹಿ ಕಡುಬು ಸಾಂಪ್ರದಾಯಿಕ ಅಡುಗೆಗಳಲ್ಲಿ ಅತ್ಯಂತ ಜನಪ್ರಿಯಮತ್ತು ವಿಶೇಷ ತಿನಿಸಾಗಿದೆ.ಭೀಮನ ಅಮಾವಾಸ್ಯೆಯಂದು ಜ್ಯೋತಿರ್ಭೀಮೇಶ್ವರ ಪೂಜೆಗೆ ಸಿಹಿ ಕಡಬು ತಯಾರಿಸಲಾಗುತ್ತದೆ.
By Meghana Pranuth | ಮೇಘನಾ ಪ್ರಣೂತ್
1 min read
ಸಿಹಿ ಕಡುಬು ಕರ್ನಾಟಕದ ಸಾಂಪ್ರದಾಯಿಕ ಅಡುಗೆಗಳಲ್ಲಿ ಅತ್ಯಂತ ಜನಪ್ರಿಯವಾದ ಮತ್ತು ವಿಶೇಷವಾದ ತಿನಿಸಾಗಿದೆ.ಭೀಮನ ಅಮಾವಾಸ್ಯೆ ಹಬ್ಬಯಂದು ಜ್ಯೋತಿರ್ಭೀಮೇಶ್ವರ ಪೂಜೆಗೆ ಮತ್ತು ಬಂಡಾರ ಒಡೆಯುವ ಶಾಸ್ತ್ರಕ್ಕೆ ಸಿಹಿ ಕಡಬು (ಹೂರಣದ ಕಡಬು) ತಯಾರಿಸಲಾಗುತ್ತದೆ.
ಸಿಹಿ ಕಡಬು ತಯಾರಿಸುವ ಸರಳ ವಿಧಾನ ಇಲ್ಲಿದೆ
ಬೇಕಾಗುವ ಸಾಮಗ್ರಿಗಳು:
ಚಿರೋಟಿ ರವೆ ಅಥವಾ ಮೈದಾ - 1 ಕಪ್
ಚೂರು ಉಪ್ಪು ಮತ್ತು 2 ಚಮಚ ಬಿಸಿ ಎಣ್ಣೆ/ತುಪ್ಪ
ನೀರು - ಕಲಸಲು ಅಗತ್ಯವಿದ್ದಷ್ಟು
ಒಳಹೂರಣಕ್ಕೆ:
ತುರಿದ ಹಸಿ ಕೊಬ್ಬರಿ ಅಥವಾ ಒಣ ಕೊಬ್ಬರಿ - 1 ಕಪ್
ಬೆಲ್ಲ (ಪುಡಿ ಮಾಡಿದ್ದು) - ೩/೪ ಕಪ್
ಏಲಕ್ಕಿ ಪುಡಿ - ೧/೨ ಚಮಚ
ಗಸಗಸೆ (ಹುರಿದದ್ದು) - ೧ ಚಮಚ
ತಯಾರಿಸುವ ವಿಧಾನ:
ಹಿಟ್ಟು ಕಲಸುವುದು: ಒಂದು ಪಾತ್ರೆಯಲ್ಲಿ ರವೆ (ಅಥವಾ ಮೈದಾ), ಚಿಟಿಕೆ ಉಪ್ಪು ಮತ್ತು ಬಿಸಿ ಎಣ್ಣೆ ಹಾಕಿ ಮಿಕ್ಸ್ ಮಾಡಿ. ನಂತರ ಸ್ವಲ್ಪ ಸ್ವಲ್ಪವೇ ನೀರು ಸೇರಿಸುತ್ತಾ ಪೂರಿ ಹಿಟ್ಟಿಗಿಂತ ಕೊಂಚ ಗಟ್ಟಿಯಾಗಿ ಕಲಸಿ, 20-30 ನಿಮಿಷ ಮುಚ್ಚಿಡಿ.
ಹೂರಣ ಸಿದ್ಧಪಡಿಸುವುದು:
ಬಾಣಲೆಗೆ ತುರಿದ ಕೊಬ್ಬರಿ ಮತ್ತು ಬೆಲ್ಲ ಹಾಕಿ ಕಡಿಮೆ ಉರಿಯಲ್ಲಿ ಬಿಸಿ ಮಾಡಿ.ಬೆಲ್ಲ ಕರಗಿ ಕೊಬ್ಬರಿಯೊಂದಿಗೆ ಚೆನ್ನಾಗಿ ಬೆರೆತು ಹದವಾಗಿ ಬಂದಾಗ, ಹುರಿದ ಗಸಗಸೆ ಮತ್ತು ಏಲಕ್ಕಿ ಪುಡಿ ಸೇರಿಸಿ ಮಿಕ್ಸ್ ಮಾಡಿ ಒಲೆಯಿಂದ ಇಳಿಸಿ ಆರಲು ಬಿಡಿ.
ಕಡಬು ಕಟ್ಟುವುದು:
ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿ, ಲಟ್ಟಣಿಗೆಯಿಂದ ಸಣ್ಣ ಪೂರಿಯಂತೆ ಲಟ್ಟಿಸಿ. ಅದರ ಮಧ್ಯದಲ್ಲಿ ೧-೨ ಚಮಚ ಹೂರಣವನ್ನು ಇಡಿ. ಪೂರಿಯ ಅಂಚುಗಳಿಗೆ ಸ್ವಲ್ಪ ನೀರು ಸವರಿ, ಅರ್ಧಚಂದ್ರಾಕಾರವಾಗಿ ಮಡಚಿ ಅಂಚುಗಳನ್ನು ಬೆರಳುಗಳಿಂದ ಒತ್ತಿ ಮುಚ್ಚಿ (ಅಥವಾ ಡಿಸೈನ್ ಮಾಡಿ design cutter ಬಳಸಿ).
ಕರಿಯುವುದು:
ಬಾಣಲೆಯಲ್ಲಿ ಎಣ್ಣೆ ಕಾಯಿಸಿ, ಸಿದ್ಧಪಡಿಸಿದ ಕಡಬುಗಳನ್ನು ಹಾಕಿ ಮಧ್ಯಮ ಉರಿಯಲ್ಲಿ ಹೊಂಬಣ್ಣ ಬರುವವರೆಗೆ ಕರಿದು ತೆಗೆಯಿರಿ.
Topics

