ಹೇಗೆ ಬದಲಾಗಿತ್ತು ಗೊತ್ತಾ ಭಾರತೀಯರ ಸೀರೆ ಪರಂಪರೆ : ನಮ್ಮ ಪೂರ್ವಜರು ನಮ್ಮಕ್ಕಿಂತ ಮಾಡರ್ನ್ ಆಗಿದ್ರಾ?
ಸೀರೆ, ನೀರೆಗೆ ಅಚ್ಚುಮೆಚ್ಚು . ಈ ಸೀರೆಯನ್ನು ಮೆಚ್ಚದ ಭಾರತೀಯ ಹೆಣ್ಣೇ ಇರಲಿಕ್ಕಿಲ್ಲ. ಭಾರತದ ಸಂಸ್ಕೃತಿಯಲ್ಲಿ ವೈವಿದ್ಯತೆ ಇದ್ದರೂ ಸೀರೆ ವಿಚಾರದಲ್ಲಿ ಮಾತ್ರ ನಮ್ಮ ನೀರೆಯರ ಒಲವು ಮಾತ್ರ ಕಮ್ಮಿಯಾಗಿಲ್ಲ . ಇದಕ್ಕೆ ಸಾಕ್ಷಿ ನಮ್ಮ ಸಿನಿಮಾದಲ್ಲಿರೋ ಸೀರೆ ಕುರಿತ ಹಾಡುಗಳು. ಹೌದು ನಮ್ಮಲ್ಲಿ ಒಂದೊಂದು ರಾಜ್ಯದಲ್ಲೂ ಒಂದೊಂದು ಥರ ಸ್ಯಾರಿ ಉಡುತ್ತಾರೆ. ಬಂಗಾಳದಲ್ಲಿ ಒಂದು ಥರ ಉಟ್ರೆ , ಮಹಾರಾಷ್ಟ್ರದಲ್ಲಿ ಕಚ್ಚೆ ಸೀರೆ ಉಡ್ತಾರೆ. ಕೇರಳದಲ್ಲಿ ಮುಂಡು ಸೀರೆ ಹೀಗೆ ಹೇಳುತ್ತಾ ಹೋದ್ರೆ ಸೀರೆ ಅನ್ನೋದು ಬಿಟ್ಟು ಉಡುವ ರೀತಿ ಬದಲಾಗುತ್ತಾ ಹೋಗುತ್ತೆ.
ಇನ್ನು ನಮ್ಮ ದೇಶದಲ್ಲಿ ಸೀರೆ ಉತ್ಪಾದನೆ ಕೂಡಾ ಡಿಫರೆಂಟ್ ಆಗಿ ಮಾಡ್ತಾರೆ . ಒಂದೊಂದು ಒಂದೊಂದು ಕಡೆ ಒಂದೊಂದು ರೀತಿಯ ಸೀರೆ ತಯಾರಾಗುತ್ತೆ . ಕಂಚಿಯಲ್ಲಿ ತಯಾರಾದ್ರೆ ಕಾಂಚಿಪುರಮ್ , ಧರ್ಮಾವರದಲ್ಲಿ ತಯಾರಾದ್ರೆ ಧರ್ಮಾವರಂ ಹೀಗೆ ಹೇಳುತ್ತಾ ಹೋದ್ರೆ ಮುಗಿಯದ ಅಧ್ಯಾಯ, ಇಂತಹ ಸೀರೆ ಬಳಕೆ ಹೇಗೆ ಬೆಳೆದು ಬಂತು ? ಭಾರತೀಯ ಬಟ್ಟೆಯ ಫ್ಯಾಷನ್ ಹೇಗೆ ಬದಲಾಯಿತು ಗೊತ್ತಾ ?
ಮಹಿಳೆ ಪುರುಷರಿಗೆ ಸಮಾನ ವಸ್ತ್ರ:
ನಮ್ಮ ವೇದ ಕಾಲದಲ್ಲಿ ನಮಗೆ ಸೀರೆ ಇದ್ರುನೂ ಈಗಿನ ಥರ ಫುಲ್ ದೇಹ ಕವರ್ ಮಾಡೋ ಥರ ಉಡೋ ಪದ್ದತಿ ಇರಲಿಲ್ಲ. ನಮ್ಮ ವೇದಕಾಲದಲ್ಲಿ ಹೆಣ್ಣು ಮಕ್ಕಳು ದೇಹದ ಕೆಳ ಭಾಗವನ್ನು ಮಾತ್ರ ಕವರ್ ಮಾಡಿಕೊಳ್ಳುತ್ತಿದ್ರು . ಆಗ ಆ ಬಗ್ಗೆ ಯಾರಿಗೂ ತಕರಾರು ಕೂಡಾ ಇರಲಿಲ್ಲ . ಅಷ್ಟು ಮಾಡರ್ನ್ ಆಗಿತ್ತು ನಮ್ಮ ಸಂಸ್ಕೃತಿ . ಇದಕ್ಕೆ ಸಾಕ್ಷಿಯಾಗಿವೆ ಹಲವು ದೇವಾಲಯಗಳಲ್ಲಿ ಕೆತ್ತಿರುವ ಹೆಣ್ಣಿನ ವಿಗ್ರಹಗಳು.
ಅದೇ ದ್ವಾಪರ ಹಾಗೂ ತ್ರೇತಾಯುಗಕ್ಕೆ ಬರುತ್ತಿದಂತೆ ಮಹಿಳೆಯರು ಎರಡು ವಸ್ತ್ರ ಹೊಂದಿರುವ ಬಟ್ಟೆಯನ್ನು ಧರಿಸೋಕೆ ಆರಂಭಿಸಿದ್ರು .ಅಂದ್ರೆ ಈಗ ಕೇರಳದ ಕೆಲವು ಕಡೆಗಳಲ್ಲಿ ಈ ರೀತಿಯ ಬಟ್ಟೆಗಳನ್ನು ನಾವು ಕಾಣಬಹುದು. ಆದ್ರೆ ಆಗ ಕುಪ್ಪಸ ಹಾಗೂ ರವಕೆಗಳನ್ನು ಬಳಸುವ ಪದ್ದತಿ ಇರಲಿಲ್ಲ. ಬದಲಾಗಿ ಅಂಗ ವಸ್ತ್ರದಿಂದ ದೇಹವನ್ನು ಮುಚ್ಚುತ್ತಿದ್ರು . ಇದರ ವಿವರಣೆ ಮಹಾ ಭಾರತದಲ್ಲಿ ಸಿಗುತ್ತೆ.
ಬ್ರಿಟೀಷರಿಂದ ಬಂತು ರವಿಕೆ :
ಮೊಗಲರ ಆಳ್ವಿಕೆಯಲ್ಲಿ ಹೆಣ್ಣು ಮಕ್ಕಳ ಸ್ಥಿತಿ ಬದಲಾಗಿ ಹೋಗಿತ್ತು. ಮೊಘಲರ ದಾಳಿಗೆ ಬೆದರಿದ ಮಹಿಳೆಯರು ಏಕವಸ್ತ್ರವಾದ ಸೀರೆಯನ್ನು ಬಳಸಲು ಆರಂಭಿಸಿದರು. ಅಲ್ಲಿಯವರೆಗೆ ಕೇವಲ ಕೇವಲ ಎರಡು ವಸ್ತ್ರವಾಗಿ ಬಳಕೆಯಾಗುತ್ತಿದ್ದ ಸೀರೆ ಮುಂದೆ ತಲೆಯಿಂದ ಕಾಲಿನ ವರೆಗೆ ಮುಚ್ಚಿಕೊಳ್ಳೋ ರೀತಿ ಬದಲಾಯಿತು . ಹೀಗೆ ಮುಂದೆ ಬಂದ ಬ್ರಿಟೀಷರು ಬ್ಲವ್ಸ್ ನ್ನು ಭಾರತೀಯರಿಗೆ ಪರಿಚಯಿಸಿದ್ರು . ಜೊತೆಗೆ ಬ್ಲವ್ಸ್ ನ್ನು ನಾಗರಿಕತೆಯ ಸಂಕೇತವಾಗಿ ಪ್ರಚಾರ ಮಾಡಿದ್ರು.
ಕಾಟನ್ ರೇಷ್ಮೇಯಿಂದ ಶಿಫಾನ್ ವರೆಗೆ
ನಮ್ಮಲ್ಲಿ ಮೊದಲಿನಿಂದಲೂ ಕಾಟನ್ , ರೇಷ್ಮೇಯ ಸೀರೆಯನ್ನು ಬಳಸಲಾಗುತ್ತಿದ್ದು. ಬ್ರಿಟೀಷರ ಆಡಳಿದ ಅವಧಿಯಲ್ಲಿ ಶಿಫಾನ್ ಬಟ್ಟೆಗಳು ಲಗ್ಗೆ ಇಟ್ಟವು. ಸೀರೆಯಲ್ಲೂ ಶಿಫಾನ್ ಸೀರೆಯನ್ನು ಬಳಸುವ ಪದ್ದತಿ ಬಂತು. ಲೈಟ್ ವೈಟ್ ಆಗಿದ್ದ ಸೀರೆಗಳು ಭಾರತೀಯರ ಮನೆ ಸೇರಿದವು .
ಇದೀಗ ಭಾರತೀಯ ಸೀರೆ ವಿಶ್ವಮಟ್ಟದಲ್ಲಿ ಪ್ರಚಾರ ಪಡೆದಿವೆ. ವಿದೇಶಿಯರು ಕೂಡ ನಮ್ಮ ಸೀರೆಯನ್ನು ಮೆಚ್ಚಿ ಉಡುತ್ತಾರೆ . ಕಚ್ಚೆ ಸೀರೆ , ಫ್ಯಾಷನ್ ಸಾರಿಯಾಗಿ ಬದಲಾಗಿದೆ. ಆದರೆ ಪುರಾತನ ಸೀರೆಗಳ ಅಂದ ಮಾತ್ರ ಮರೆಯಾಗಿಲ್ಲ.