ಗ್ಲೋಯಿಂಗ್ ಸ್ಕಿನ್‌ಗೆ ಸಿಂಪಲ್ ಟಿಪ್ಸ್: ನಿದ್ರೆಯ ಅದ್ಭುತ ಲಾಭಗಳು!

ಮುಖದಲ್ಲಿ ನೈಸರ್ಗಿಕವಾಗಿ ಗ್ಲೋ ಬರಬೇಕು, ಕಪ್ಪು ಕಲೆಗಳು ಕಮ್ಮಿಯಾಗಬೇಕು ಆರೋಗ್ಯಕರವಾಗಿ ಕಾಣಬೇಕು ಎಂದು ಹಲವರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ.

By Meghana Pranuth | ಮೇಘನಾ ಪ್ರಣೂತ್‌

1 min read

WhatsAppPost
Glowing Skin
Glowing Skin

ಮುಖದಲ್ಲಿ ನೈಸರ್ಗಿಕವಾಗಿ ಗ್ಲೋ ಬರಬೇಕು, ಕಪ್ಪು ಕಲೆಗಳು ಕಮ್ಮಿಯಾಗಬೇಕು ಹಾಗೂ ಚರ್ಮ ಆರೋಗ್ಯಕರವಾಗಿ ಕಾಣಬೇಕು ಎಂದು ಹಲವರು ಮಾರುಕಟ್ಟೆಯಲ್ಲಿ ಸಿಗುವ ದುಬಾರಿ ಸ್ಕಿನ್ ಕೇರ್ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಹೊರಗಿನಿಂದ ಮಾಡುವ ಆರೈಕೆಗಿಂತ ದೇಹಕ್ಕೆ ಒಳಗಿನಿಂದ ಸಿಗುವ ವಿಶ್ರಾಂತಿಯೇ ಚರ್ಮದ ಸೌಂದರ್ಯಕ್ಕೆ ಅತಿ ಮುಖ್ಯ ಎಂಬುದು ಹಲವರಿಗೆ ತಿಳಿದಿಲ್ಲ.

ರಾತ್ರಿ ನಿದ್ರಿಸುತ್ತಿರುವಾಗ ದೇಹವು ಒಳಗಿನಿಂದ ದುರಸ್ತಿ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುತ್ತದೆ. ಸಾಕಷ್ಟು ನಿದ್ರೆ ದೊರೆತಾಗ ಚರ್ಮದ ಜೀವಕೋಶಗಳಿಗೆ ಆಮ್ಲಜನಕ ಹಾಗೂ ಅಗತ್ಯ ಪೋಷಕಾಂಶಗಳು ತಲುಪಿ ರಕ್ತಪರಿಚಲನೆ ಉತ್ತಮಗೊಳ್ಳುತ್ತದೆ. ಜೊತೆಗೆ ಚರ್ಮದ ಬಿಗಿತಕ್ಕೆ ಕಾರಣವಾಗುವ ಕೋಲಾಜೆನ್ ಉತ್ಪಾದನೆಗೆ ಉತ್ತೇಜನ ಸಿಗುತ್ತದೆ.

ರಾತ್ರಿ ಪೂರ್ತಿ ಸರಿಯಾದ ನಿದ್ರೆ ಲಭಿಸಿದರೆ ಮುಖದ ಆಯಾಸ ದೂರವಾಗಿ ಚರ್ಮವು ಕಾಂತಿಯುತ ಹಾಗೂ ಫ್ರೆಶ್ ಆಗಿ ಕಾಣಿಸುತ್ತದೆ. ನಿದ್ರೆಯ ಕೊರತೆಯಿಂದ ಮೂಡುವ ಕಣ್ಣಿನ ಕೆಳಗಿನ ಕಪ್ಪು ಕಲೆ ಮತ್ತು ಊತವನ್ನು ನಿಯಂತ್ರಿಸಲು ನಿದ್ರೆ ಸಹಾಯ ಮಾಡುತ್ತದೆ.

ದಿನವಿಡೀ ಧೂಳು, ಬಿಸಿಲು ಮತ್ತು ಮಾಲಿನ್ಯಕ್ಕೆ ಒಡ್ಡಿಕೊಳ್ಳುವ ಚರ್ಮವು ನಿದ್ರೆಯ ಸಮಯದಲ್ಲಿ ತನ್ನನ್ನು ತಾನು ಸರಿಪಡಿಸಿಕೊಳ್ಳುತ್ತದೆ. ಉತ್ತಮ ನಿದ್ರೆಯು ಮನಸ್ಸಿನ ಒತ್ತಡವನ್ನು ಕಡಿಮೆ ಮಾಡುತ್ತದೆ, ಇದು ಪರೋಕ್ಷವಾಗಿ ಮುಖದ ಮೇಲಾಗುವ ಪಿಂಪಲ್ಸ್ ಹಾಗೂ ಕಲೆಗಳನ್ನು ನಿಯಂತ್ರಿಸುತ್ತದೆ.

ನಿರಂತರವಾಗಿ ನಿದ್ರೆಗೆಟ್ಟರೆ ಮುಖದ ಸೌಂದರ್ಯ ಮಂಕಾಗುತ್ತದೆ. ಕಣ್ಣಿನ ಕೆಳಗೆ ಕಪ್ಪು ಕಲೆಗಳು ಹೆಚ್ಚಾಗುವುದರ ಜೊತೆಗೆ ವಯಸ್ಸಾದ ಛಾಯೆ ಬೇಗನೇ ಮುಖದಲ್ಲಿ ಕಾಣಿಸಿಕೊಳ್ಳಬಹುದು.

ಸಾಮಾನ್ಯವಾಗಿ ವಯಸ್ಕರಾದವರು ಪ್ರತಿದಿನ ಕನಿಷ್ಠ 7 ರಿಂದ 9 ಗಂಟೆಗಳ ಕಾಲ ಸುಖ ನಿದ್ರೆ ಮಾಡುವುದು ಅಗತ್ಯ. ಕೇವಲ ದುಬಾರಿ ಕ್ರೀಮ್ಗಳ ಮೇಲೆ ಹಣ ಪೋಲು ಮಾಡುವ ಬದಲು, ಸಮತೋಲಿತ ಆಹಾರ, ಯಥೇಚ್ಛ ನೀರು ಹಾಗೂ ಸರಿಯಾದ ಸಮಯಕ್ಕೆ ನಿದ್ರೆ ಮಾಡುವ ಅಭ್ಯಾಸ ಮಾಡಿಕೊಂಡರೆ ಚರ್ಮದ ಆರೋಗ್ಯ ತಾನಾಗಿಯೇ ವೃದ್ಧಿಸುತ್ತದೆ.

Topics

ಸಂಬಂಧಿತ ಸುದ್ದಿಗಳು