ಒಡಿಶಾ : ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ಅರ್ನಬ್ ಚಂಡ ಮಾರುತದ ಆರ್ಭಟ ಜೋರಾಗಿದೆ. ಅದ್ರಲ್ಲೂ ಬಾರೀ ಮಳೆಗೆ ಒಡಿಶಾ ತತ್ತರಿಸಿ ಹೋಗಿದ್ದು ಸರಕಾರ ಹೈ ಅಲರ್ಟ್ ಘೋಷಿಸಿದೆ.
ಒಡಿಶಾದಲ್ಲಿ ಅರ್ನಬ್ ಚಂಡ ಮಾರುತದ ಎಫೆಕ್ಟ್ ಜೋರಾಗಿದೆ. ಒಡಿಶಾ ಸರಕಾರ ತನ್ನ ಎಲ್ಲಾ ಅಧಿಕಾರಿಗಳು ಕೇಂದ್ರ ಸ್ಥಾನದಲ್ಲಿಯೇ ಇರುವಂತೆ ಘೋಷಿಸಿದೆ. ಅಲ್ಲದೇ ಒಡಿಶಾದಾದ್ಯಂತ ಹೈಅಲರ್ಟ್ ಘೋಷಿಸಿದೆ. ಅರ್ನಬ್ ಚಂಡ ಮಾರುತ ಒಡಿಶಾದ ಗೋಪಾಲ್‌ಪುರ ಹಾಗೂ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಡುವಿನ ಕರಾವಳಿಯನ್ನು ದಾಟುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.
ಭಾರತೀಯ ಹವಾಮಾನ ಇಲಾಖೆ (IMD) ಭುವನೇಶ್ವರದ ನಿರ್ದೇಶಕಿಯಾಗಿರುವ ಮನೋರಮಾ ಮೊಹಂತಿ ಅವರು ನೀಡಿರುವ ಮಾಹಿತಿಯ ಪ್ರಕಾರ, ಮುಂದಿನ 12 ಗಂಟೆಗಳ ಅವಧಿಯಲ್ಲಿ ವಾಯುಭಾರ ಕುಸಿತ ಇನ್ನಷ್ಟು ತೀವ್ರವಾಗುವ ಸಾಧ್ಯತೆಯಿದ್ದು, ಚಂಡ ಮಾರುತ ಇನ್ನಷ್ಟು ಬಲಗೊಳ್ಳಲಿದೆ. ಕಳೆದ 24 ಗಂಟೆಗಳ ಅವಧಿಯಲ್ಲಿ ಒಡಿಶಾದ ಬಹುತೇಕ ಕಡೆಗಳಲ್ಲಿ ಬಾರೀ ಮಳೆಯಾಗಿದೆ.
ಗಂಜಾಂ, ಗಜಪತಿ ಮತ್ತು ಕೊರಾಪುಟ್ ಜಿಲ್ಲೆಗಳಲ್ಲಿ'ರೆಡ್ ಅಲರ್ಟ್'
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದ ಎಫೆಕ್ಟ್ ಇದೀಗ ಗಂಜಾಂ, ಗಜಪತಿ, ಕೊರಾಪುಟ್, ರಾಯಗಡ ಜಿಲ್ಲೆಗಳಿಗೆ ತಟ್ಟಿದ್ದು, ಸದ್ಯ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ. ಈ ಭಾಗಗಳಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ. ಮತ್ತೊಂದೆಡೆ ಮಲ್ಕನ್ ಗಿರಿ, ಕಲಾಹಂಡಿ, ನಬರಂಗ್‌ಪು, ನಯಾಗಢ, ಕಂಧಮಾನ್, ಪುರಿ ಜಿಲ್ಲೆಗಳಲ್ಲಿ ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ 26ರ ಮುಂಜಾನೆಯ ವರೆಗೆ ಮೀನುಗಾರರು ಸಮುದ್ರಕ್ಕೆ ಇಳಿದಂತೆ ಭಾರತೀಯ ಹವಾಮಾನ ಇಲಾಖೆ ಸಲಹೆ ನೀಡಿದೆ. ಸಮುದ್ರದ ಸ್ಥಿತಿ ಪ್ರಕ್ಷುಬ್ದವಾಗಿದ್ದು, ಒಡಿಶಾ ಕರಾವಳಿಯಲ್ಲಿ ಬಿರುಗಾಳಿ ಸಹಿತ ಮಳೆಯಾಗುವ ಸಾಧ್ಯತೆಯಿದೆ.
ಕರ್ನಾಟಕಕ್ಕೂ ತಟ್ಟುತ್ತಾ ಅರ್ನಬ್ ಚಂಡಮಾರುತದ ಎಫೆಕ್ಟ್
ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಉಂಟಾಗಿರುವ ಅರ್ನಬ್ ಚಂಡಮಾರುತ ಸದ್ಯ ಉತ್ತರ ಭಾರತದಲ್ಲಿ ವ್ಯಾಪಕವಾಗಿ ಆರ್ಭಟಿಸುತ್ತಿದೆ. ವಿಖಾಖಪಟ್ಟಣ, ಆಂಧ್ರಪ್ರದೇಶ, ಒಡಿಶಾದಲ್ಲಿಯೂ ಆರ್ಭಟಿಸುತ್ತಿದೆ. ಆದರೆ ಈ ಚಂಡ ಮಾರುತದ ಎಫೆಕ್ಟ್ ಕರ್ನಾಟಕ ಕರಾವಳಿಗೆ ಅಟ್ಟಾಗಿ ತಟ್ಟುವುದಿಲ್ಲ. ಆದರೆ ಕರ್ನಾಟದ ಹಲವು ಜಿಲ್ಲೆ ಹಾಗೂ ಕರಾವಳಿ ಭಾಗಗಳಲ್ಲಿ ಮುಂದಿನ ಕೆಲವು ದಿನಗಳ ಕಾಲ ಬಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ.