ಇನ್ಮುಂದೆ ಎಲ್‌ಪಿಜಿ ಸಿಲಿಂಡರ್‌ ಪಡೆಯಲು ಹೊಸ ರೂಲ್ಸ್‌ : ಸಬ್ಸಿಡಿ, ರಿಯಾಯಿತಿ ಸಿಲಿಂಡರ್‌ಗೆ ಕೇಂದ್ರ ಸರಕಾರದ ಕತ್ತರಿ

ಅರ್ಹರಿಗೆ ಮಾತ್ರವೇ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಒದಗಿಸಿ, ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ.

WhatsAppPost
lpg cylinder new rules subsidy central government update
lpg cylinder new rules subsidy central government update

ಇನ್ಮುಂದೆ ರಿಯಾಯಿತಿ ಅಥವಾ ಸಬ್ಸಿಡಿ ದರದಲ್ಲಿ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ ಪಡೆಯುವ ಗ್ರಾಹಕರಿಗೆ ಕೇಂದ್ರ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದೆ. ಇನ್ಮುಂದೆ ಸಬ್ಸಿಡಿ ಪಡೆಯೋದಕ್ಕೆ ಗ್ರಾಹಕರು ಬಯೋ ಮೆಟ್ರಿಕ್‌ ಆಧಾರ್‌ ದೃಢೀಕರಣ ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ. ಹೊಸ ರೂಲ್ಸ್‌ ಇಂದಿನಿಂದಲೇ ಜಾರಿಗೆ ಬರಲಿದೆ.

ಅರ್ಹರಿಗೆ ಮಾತ್ರವೇ ಸಬ್ಸಿಡಿ ದರದಲ್ಲಿ ಎಲ್‌ಪಿಜಿ ಗ್ಯಾಸ್‌ ಸಿಲಿಂಡರ್‌ ಒದಗಿಸಿ, ಅಕ್ರಮವನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರಕಾರ ದಿಟ್ಟ ಕ್ರಮಗಳನ್ನು ಕೈಗೊಂಡಿದೆ. ಕೇಂದ್ರ ಸರಕಾರ ಈ ಹಿಂದೆಯೇ ಬಯೋ ಮೆಟ್ರಿಕ್‌ ಪಡೆಯುವಂತೆ ಸೂಚನೆಯನ್ನು ನೀಡಿತ್ತು. 2026ರ ಸೆಪ್ಟೆಂಬರ್‌ 19ರವರೆಗೆ ಭಾರತದಲ್ಲಿ ಒಟ್ಟು 27 ಕೋಟಿಗೂ ಅಧಿಕ ಗ್ರಾಹಕರು ಬಯೋ ಮೆಟ್ರಿಕ್‌ ದೃಢೀಕರಣ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದಾರೆ.

ಈಗಾಗಲೇ ಬಯೋ ಮೆಟ್ರಿಕ್‌ ಪೂರ್ಣಗೊಳಿಸಿರುವ ಗ್ರಾಹಕರಿಗೆ ಸಿಲಿಂಡರ್‌ ಪೂರೈಕೆಯಲ್ಲಿ ಯಾವುದೇ ವ್ಯತ್ಯಾಸ ಆಗೋದಿಲ್ಲ. ಅಲ್ಲದೇ ಅಂತಹ ಗ್ರಾಹಕರು ಮತ್ತೆ ಆಧಾರ್‌ ಬಯೋಮೆಟ್ರಿಕ್‌ ದೃಢೀಕರಣ ನೀಡುವ ಅಗತ್ಯ ಇರೋದಿಲ್ಲ. ಆದರೆ ಇದುವರೆಗೂ ದೃಢೀಕರಣ ನೀಡದೇ ಇರುವ ಗ್ರಾಹಕರು ಸಬ್ಸಿಡಿ ದರದಲ್ಲಿ ರಿಫೀಲ್‌ ಬುಕ್ಕಿಂಗ್‌ ಅನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ. ಬಯೋಮೆಟ್ರಿಕ್‌ ಪರಿಶೀಲನೆ ಪೂರ್ಣಗೊಂಡ ನಂತರವೇ ಅವರಿಗೆ ಮತ್ತೆ ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಬುಕ್ಕಿಂಗ್‌ ಸೌಲಭ್ಯ ಪುನರಾರಂಭವಾಗಲಿದೆ.

ಎಲ್‌ಪಿಜಿ ಸಂಪರ್ಕ ಹೊಂದಿರುವ ಗ್ರಾಹಕರು ಕಡ್ಡಾಯವಾಗಿ ಅಕ್ಟೋಬರ್‌ 1ರ ಒಳಗಾಗಿ ಆಧಾರ್‌ ಬಯೋಮೆಟ್ರಿಕ್‌ ದೃಢೀಕರಣವನ್ನು ಪೂರ್ಣಗೊಳಿಸಿರಬೇಕು ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯ ಸೂಚಿಸಿದೆ. ಇನ್ಮುಂದೆ ಸಿಲಿಂಡರ್‌ ವಿತರಣೆ ಮಾಡುವ ಸಿಬ್ಬಂದಿ ತೈಲ ಕಂಪೆನಿಗಳ ಮೊಬೈಲ್‌ ಆಪ್‌ ಬಳಸಿ ಸ್ಥಳದಲ್ಲಿಯೇ ಬಯೋ ಮೆಟ್ರಿಕ್‌ ವಿವರ ಪರಿಶೀಲನೆ ಮಾಡುವುದನ್ನು ಕಡ್ಡಾಯಗೊಳಿಸಲಾಗಿದೆ.

ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಮತ್ತು ಅನಿಲದ ಬೆಲೆ ಏರಿಳಿತ ಕಾಣುತ್ತಿದೆ. ಆದರೂ ಗೃಹ ಬಳಕೆಯ ಸಿಲಿಂಡರ್‌ ದರದಲ್ಲಿ ಇಳಿಕೆ ಮಾಡಲಾಗುತ್ತಿದೆ. ಸಾರ್ವಜನಿಕ ತೈಲ ಕಂಪೆನಿಗಳಿಗೆ ಉಂಟಾಗುತ್ತಿರುವ ಆರ್ಥಿಕ ಹೊರೆಯನ್ನು ತಪ್ಪಿಸುವ ಸಲುವಾಗಿ ಇದೀಗ ಕೇಂದ್ರ ಸರಕಾರ ಹೊಸ ರೂಲ್ಸ್‌ ಜಾರಿ ಮಾಡಿದ್ದು, ಈ ರೂಲ್ಸ್‌ನಿಂದಾಗಿ ಅರ್ಹರಿಗೆ ಮಾತ್ರವೇ ಸಬ್ಸಿಡಿ ದರದಲ್ಲಿ ಸಿಲಿಂಡರ್‌ ಲಭ್ಯವಾಗಲಿದ್ದು, ಸರಕಾರಕ್ಕೆ ಬೊಕ್ಕಸಕ್ಕೆ ಕೋಟ್ಯಾಂತರ ರೂಪಾಯಿ ಉಳಿತಾಯವಾಗಲಿದೆ.

Topics

ಸಂಬಂಧಿತ ಸುದ್ದಿಗಳು