ಕುರ್ ಕುರೆ ಒಳಗಿದ್ದ ಪ್ಲಾಸ್ಟಿಕ್ ಬಾಲ್ ನುಂಗಿ 5 ವರ್ಷದ ಮಗು ಸಾವು!
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ 5 ವರ್ಷದ ಪುತ್ರ ಮುಕುಂದ ಮಯೂರ್ ಮೃತಪಟ್ಟ ಬಾಲಕ.
By Meghana Pranuth | ಮೇಘನಾ ಪ್ರಣೂತ್
1 min read
ಮೈಸೂರು/ಹುಣಸೂರು: ಅಂಗಡಿಗಳಲ್ಲಿ ಸಿಗುವ ಕುರುಕಲು ತಿಂಡಿ ಪ್ಯಾಕೆಟ್‌ಗಳೊಳಗಿನ ಆಕರ್ಷಕ ಆಟಿಕೆಗಳು ಮಗುವಿನ ಜೀವವನ್ನೇ ಬಲಿ ಪಡೆದಿರುವ ಅತ್ಯಂತ ದಾರುಣ ಘಟನೆಯೊಂದು ಮೈಸೂರು ಜಿಲ್ಲೆಯಲ್ಲಿ ಸಂಭವಿಸಿದೆ. ಕುರ್ ಕುರೆ ಪ್ಯಾಕೆಟ್ ಜೊತೆ ಸಿಕ್ಕಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಅನ್ನು ನುಂಗಿದ ಪರಿಣಾಮ, 5 ವರ್ಷದ ಮಗು ಉಸಿರುಗಟ್ಟಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ಗೌರಿಪುರ ಗ್ರಾಮದಲ್ಲಿ ಈ ದುರಂತ ಸಂಭವಿಸಿದೆ. ಗ್ರಾಮದ ಸಂತೋಷ್ ಹಾಗೂ ಐಶ್ವರ್ಯ ದಂಪತಿಯ 5 ವರ್ಷದ ಪುತ್ರ ಮುಕುಂದ ಮಯೂರ್ ಮೃತಪಟ್ಟ ಬಾಲಕ.
ಮಗು ಅಂಗಡಿಯಿಂದ ಕುರ್ ಕುರೆ ತಂದು ತಿಂದ ಬಳಿಕ, ಆ ಪ್ಯಾಕೆಟ್ ಒಳಗಡೆ ಉಚಿತವಾಗಿ ಬಂದಿದ್ದ ಸಣ್ಣ ಪ್ಲಾಸ್ಟಿಕ್ ಬಾಲ್ ಒಂದನ್ನು ಆಟವಾಡುತ್ತಾ ಬಾಯಿಗೆ ಹಾಕಿಕೊಂಡಿದ್ದಾನೆ. ಈ ವೇಳೆ ಆ ಪ್ಲಾಸ್ಟಿಕ್ ಬಾಲ್ ಮಗುವಿನ ಗಂಟಲಿನಲ್ಲಿ ತಕ್ಷಣವೇ ಸಿಲುಕಿಕೊಂಡಿದೆ.
ಬಾಲ್ ಗಂಟಲಲ್ಲಿ ಸಿಲುಕಿಕೊಂಡ ಪರಿಣಾಮ ಮಗುವಿಗೆ ತೀವ್ರ ಉಸಿರಾಟದ ತೊಂದರೆ ಕಾಣಿಸಿಕೊಂಡಿದೆ. ತಕ್ಷಣವೇ ಮಗುವನ್ನು ರಕ್ಷಿಸಲು ಪೋಷಕರು ಪ್ರಯತ್ನಿಸಿದರಾದರೂ, ಉಸಿರುಗಟ್ಟಿ ಮುಕುಂದ ಮಯೂರ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮುದ್ದು ಮುಖದ ಮಗುವಿನ ಅಕಾಲಿಕ ಸಾವು ಕುಟುಂಬಸ್ಥರಲ್ಲಿ ಹಾಗೂ ಗೌರಿಪುರ ಗ್ರಾಮಸ್ಥರಲ್ಲಿ ಶೋಕಸಾಗರ ತಂದಿಟ್ಟಿದೆ.
ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಪೊಲೀಸರು ಭೇಟಿ ನೀಡಿದ್ದಾರೆ. ಈ ಸಂಬಂಧ ಹುಣಸೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
ಈ ಭೀಕರ ಘಟನೆ ಪ್ರತಿಯೊಬ್ಬ ಪೋಷಕರಿಗೂ ದೊಡ್ಡ ಕಣ್ಣು ತೆರೆಸುವಂತಿದೆ. ಚಿಪ್ಸ್ ಹಾಗೂ ಕುರುಕಲು ತಿಂಡಿ ಕಂಪನಿಗಳು ಮಕ್ಕಳನ್ನು ಆಕರ್ಷಿಸಲು ಪ್ಯಾಕೆಟ್‌ಗಳಲ್ಲಿ ನೀಡುವ ಉಚಿತ ಪ್ಲಾಸ್ಟಿಕ್ ಆಟಿಕೆಗಳು, ರಿಂಗ್‌ಗಳು ಹಾಗೂ ಬಾಲ್‌ಗಳು ತೀರಾ ಸಣ್ಣದಾಗಿರುತ್ತವೆ.
Topics
ಸಂಬಂಧಿತ ಸುದ್ದಿಗಳು
karnataka
ಮಂಗಳೂರು-ಬೆಂಗಳೂರು ವಂದೇ ಭಾರತ್ ರೈಲು ವೇಳಾಪಟ್ಟಿ ಬದಲಾವಣೆಗೆ ಒತ್ತಾಯ: ಸಚಿವ ವಿ. ಸೋಮಣ್ಣಗೆ ಮನವಿ
karnataka
ಕರೆಂಟ್ ಮೇಲೂ ತಟ್ಟಿದ ಮಳೆ ಕೊರತೆ ಎಫೆಕ್ಟ್ : ಬರಗಾಲದ ನಡುವೆಯೇ ರೈತರಿಗೆ ವಿದ್ಯುತ್ ಬರದ ಶಾಕ್
karnataka
ಕರಾವಳಿ ಜಿಲ್ಲೆಗಳಿಗೆ ಗುಡುಗು ಸಹಿತ ಭಾರೀ ಮಳೆಯ ಎಚ್ಚರಿಕೆ..!
karnataka

