Kannada News Next

karnataka

SIR : ಎಸ್ಐಆರ್ ವಿಚಾರದಲ್ಲಿ ಎಡವೀತೇ ಕೆಪಿಸಿಸಿಯ ಸರಣಿ ತರಬೇತಿ ಶಿಬಿರ ?

ಎಸ್‌ಐಆರ್‌ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಯಾವ ಆಧಾರದ ಮೇಲೆ ತರಬೇತಿ ಶಿಬಿರಗಳನ್ನು ಆಯೋಜಿಸಿತ್ತು. ತರಬೇತಿ ಸಕ್ಸಸ್‌ ಆಗಿಲ್ಲ ಅನ್ನೋದು ಕಾಂಗ್ರೆಸ್‌ ವಿಶ್ಲೇಷಕರ ಅಭಿಪ್ರಾಯ.

By Arun Gundmi | ಅರುಣ್‌ ಗುಂಡ್ಮಿ Editor-in-Chief
kpcc sir voter list training camp controversy Karnataka news

ಬೆಂಗಳೂರು: ಎಸ್ಐಆರ್ (SIR) ವಿಚಾರದಲ್ಲಿ ಕಾಂಗ್ರೆಸ್‌ ಪಕ್ಷದ ಹಿಂದೆಂದೂ ಯೋಚಿಸದ ರೀತಿಯಲ್ಲಿ ಕರ್ನಾಟಕದಲ್ಲಿ ಆಘಾತಕ್ಕೆ ಒಳಗಾಗಿದೆ. ಚುನಾವಣಾ ಆಯೋಗ ಎಸ್‌ಐಆರ್‌ ಪ್ರಕ್ರಿಯೆಯನ್ನು ಆರಂಭಿಸಿದ ದಿನದಿಂದ ಕೆಪಿಸಿಸಿ ಎರಡು ತಿಂಗಳ ಕಾಲ ಸರಣಿ ತರಬೇತಿ ಶಿಬಿರಗಳನ್ನು ಆಯೋಜಿಸಿದೆ. ಆದರೆ ಕಾಂಗ್ರೆಸ್‌ ಬಿಜೆಪಿ ಎಸ್‌ಐಆರ್‌ ವಿಚಾರದಲ್ಲಿ ಆಟ ಆಡಿದೆ ಎಂದು ಆರೋಪಿಸುತ್ತಿದೆ. ಹಾಗಿದ್ರೆ ಕೆಪಿಸಿಸಿ ನಡೆಸಿದ್ದ ತರಬೇತಿ ಶಿಬಿರಗಳು ಎಡವಿದೆಯೇ ? ಹೀಗೊಂದು ಪ್ರಶ್ನೆ ಸ್ವತಃ ಕಾಂಗ್ರೆಸ್‌ ಕಾರ್ಯಕರ್ತರನ್ನು ಕಾಡತೊಡಗಿದೆ.

ಎಸ್‌ಐಆರ್‌ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ಯಾವ ಆಧಾರದ ಮೇಲೆ ತರಬೇತಿ ಶಿಬಿರಗಳನ್ನು ಆಯೋಜಿಸಿತ್ತು. ತರಬೇತಿ ಸಕ್ಸಸ್‌ ಆಗಿಲ್ಲ ಅನ್ನೋದು ಕಾಂಗ್ರೆಸ್‌ ವಿಶ್ಲೇಷಕರ ಅಭಿಪ್ರಾಯ. ಕಾಂಗ್ರೆಸ್‌ ತರಬೇತಿ ಶಿಬಿರಗಳು ಉಪಯೋಗ ಇಲ್ಲದ ರೀತಿ ಆಗಿದೆ ಅನ್ನೋದನ್ನು ಸ್ವತಃ ಕಾಂಗ್ರೆಸ್‌ ನಾಯಕರೇ ಒಪ್ಪಿಕೊಳ್ಳುವ ಸ್ಥಿತಿಗೆ ಬಂದಂತೆ ಕಾಣುತ್ತಿದೆ.

ಹಾಗಾದ್ರೆ, ಕಾಂಗ್ರೆಸ್‌ ಪಕ್ಷ ಎಸ್‌ಐಆರ್‌ಗೆ ಸಂಬಂಧಿಸಿದಂತೆ ತರಬೇತಿ ಶಿಬಿರಗಳನ್ನು ನಡೆಸಿರುವ ತರಬೇತುದಾರರ ಜ್ಞಾನ, ಗುಣಮಟ್ಟದ ಬಗ್ಗೆಯೂ ಕಾಂಗ್ರೆಸ್‌ಪಕ್ಷದ ಕಾರ್ಯಕರ್ತರು ಇದೀಗ ಪ್ರಶ್ನೆ ಮಾಡುವ ಹಂತಕ್ಕೆ ಇಳಿದಿದ್ದಾರೆ ಅನ್ನೋದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

ಕರ್ನಾಟಕದಲ್ಲಿ ನಡೆಯುತ್ತಿರುವ ಎಸ್‌ಐಆರ್‌ ಪ್ರಕ್ರಿಯೆಯಲ್ಲಿ ಯಾವುದೇ ರೀತಿಯಲ್ಲಿಯೂ ಲೋಪವಾಗದಂತೆ ಕೆಲಸ ಮಾಡಬೇಕು ಅನ್ನೋದು ಕಾಂಗ್ರೆಸ್‌ ಪಕ್ಷದ ಲೆಕ್ಕಾಚಾರವಾಗಿತ್ತು. ಆದರೆ ತಾಂತ್ರಿಕ ಸಲಹೆಯನ್ನೇ ಪಡೆಯದೇ ನಡೆಸಿದ ತರಬೇತಿ ಶಿಬಿರಗಳು ಇದೀಗ ಯಾವುದೇ ರೀತಿಯಲ್ಲಿಯೂ ಕಾಂಗ್ರೆಸ್‌ ಪಕ್ಷಕ್ಕೆ ಸಹಾಯವಾದಂತೆ ಕಾಣಿಸುತ್ತಿಲ್ಲಾ ಅಂತಾ ಸ್ವತಃ ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕರು ಅಭಿಪ್ರಾಯ ಪಟ್ಟಿದ್ದಾರೆ.

ಚುನಾವಣಾ ಆಯೋಗ ಫಾರ್ಮ್‌-7ರಲ್ಲಿ ಹಲವಾರು ರೀತಿಯ ಡಿಲೀಷನ್‌ಗಳನ್ನು ಮಾಡಲಾಗಿದೆ ಎಂದು ಸ್ವತಃ ಕಾಂಗ್ರೆಸ್‌ ಆರೋಪ ಮಾಡುತ್ತಿದೆ. ಎಸ್‌ಐಆರ್‌ ಪ್ರಕ್ರಿಯೆ ಮುಕ್ತಾಯದ ಹಂತಕ್ಕೆ ಬಂದ ನಂತರದಲ್ಲಿ ಕಾಂಗ್ರೆಸ್‌ ಆರೋಪ ಮಾಡ್ತಾ ಇರೋದನ್ನು ನೋಡಿದ್ರೆ, ಕೆಪಿಸಿಸಿ ಆಯೋಜಿಸಿದ್ದ ತರಬೇತಿ ಶಿಬಿರದಲ್ಲಿ ಈ ಬಗ್ಗೆ ಮಾಹಿತಿ ನೀಡಿಲ್ಲವೇ ಅನ್ನೋ ಪ್ರಶ್ನೆ ಸಹಜವಾಗಿಯೇ ಹುಟ್ಟಿಕೊಂಡಿದೆ.

ಏನಿದು ಎಸ್‌ಐಆರ್‌ ? ಹೇಗೆ ನಡೆಯುತ್ತೆ ಪ್ರಕ್ರಿಯೆ ?

ಎಸ್‌ಐಆರ್‌ (SIR - Special Intensive Revision) ಅಂದ್ರೆ ಭಾರತದ ಚುನಾವಣಾ ಆಯೋಗ (ECI) ಭಾರತದ ದೇಶದ ಮತದಾರರ ಪಟ್ಟಿಯನ್ನು ಸಮಗ್ರವಾಗಿ ಪರಿಶೀಲಿಸಿ, ನವೀಕರಿಸಿ, ದೋಷರಹಿತಗೊಳಿಸುವುದಕ್ಕೆ ನಡೆಸುವ ವಿಶೇಷ ತೀವ್ರ ಪರಿಷ್ಕರಣೆ (Special Intensive Revision) ಅಭಿಯಾನ.

ಭಾರತದಲ್ಲಿನ ಮತದಾರರ ಪಟ್ಟಿಯಿಂದ ಮರಣ ಹೊಂದಿದವರ ಹೆಸರು, ವಾಸಸ್ಥಳ ಬದಲಾಯಿಸಿದವರ ಹೆಸರು ಜೊತೆಗೆ ನಕಲಿ ಹೆಸರುಗಳನ್ನು ಪಟ್ಟಿಯಿಂದ ತೆಗೆದು ಹಾಕಿ, ಅರ್ಹ ಮತದಾರರನ್ನು ಮಾತ್ರವೇ ಭಾರತದ ಮತದಾರರ ಪಟ್ಟಿಯಲ್ಲಿ ಇರಿಸುವುದು ಈ ಪ್ರಕ್ರಿಯೆಯ ಮುಖ್ಯ ಉದ್ದೇಶ.

ಭಾರತದಲ್ಲಿ ಎಸ್‌ಐಆರ್‌ (SIR) ಪ್ರಕ್ರಿಯೆ ಹೇಗೆ ನಡೆಯುತ್ತದೆ ?

  • ಮನೆ ಮನೆ ಪರಿಶೀಲನೆ : (House-to-House Survey): ಚುನಾವಾಣಾ ಆಯೋಗ ನೇಮಕ ಮಾಡಿರುವ ಬೂತ್ ಮಟ್ಟದ ಅಧಿಕಾರಿಗಳು (BLO - Booth Level Officers) ಭಾರತದ ಪ್ರತೀ ಮತದಾರರ ಮನೆಗೂ ಭೇಟಿ ನೀಡಿ, ಮತದಾರರ ಪಟ್ಟಿಯನ್ನು ಪರಿಶೀಲನೆ ನಡೆಸುತ್ತಾರೆ.

  • ನಮೂನೆ (Form) ಸಲ್ಲಿಕೆ : ಪ್ರತೀ ಕುಟುಂಬದ ಅರ್ಹ ಸದಸ್ಯರ ಸಂಪೂರ್ಣ ವಿವರ, ಆಧಾರ್‌ ಕಾರ್ಡ್‌ನ ಮಾಹಿತಿ, ಹಳೆಯ ಮತದಾರರ ಪಟ್ಟಿಯ ಜೊತೆಗೆ ಸೆಲ್ಪ ಮ್ಯಾಪಿಂಗ್‌ ಅನ್ನು ಪೂರ್ಣಗೊಳಿಸಲಾಗುತ್ತದೆ.

  • ಕರಡು ಮತದಾರರ ಪಟ್ಟಿ : ಪ್ರತೀ ಮನೆ ಮನೆಗಳಿಂದ ಮಾಹಿತಿಯನ್ನು ಸಂಗ್ರಹಿಸಿದ ಬಳಿಕ, ಕರಡು ಪಟ್ಟಿಯನ್ನು ಪ್ರಕಟಿಸಲಾಗುತ್ತದೆ. ಈ ಪಟ್ಟಿ ತಾತ್ಕಾಲಿಕವಾಗಿ ಇರಲಿದೆ.

  • ಆಕ್ಷೇಪಣೆ ಸಲ್ಲಿಕೆಗೆ ಅವಕಾಶ : ಚುನಾವಣಾ ಆಯೋಗ ಪ್ರಕಟಿಸುವ ತಾತ್ಕಾಲಿಕ ಕರಡು ಪಟ್ಟಿಯಲ್ಲಿ ತಮ್ಮ ಹಕ್ಕು ಅಥವಾ ಯಾವುದೇ ಆಕ್ಷೇಪಗಳು ಇದ್ದಲ್ಲಿ ಸಾರ್ವಜನಿಕರು ನಿಗದಿಯ ಅವಧಿಯಲ್ಲಿ, ಅರ್ಜಿಯ ಮೂಲಕ ಸಲ್ಲಿಕೆ ಮಾಡಬಹುದಾಗಿದೆ.

  • ಅಂತಿಮ ಮತದಾರರ ಪಟ್ಟಿ : ಕರಡು ಮತದಾರರ ಪಟ್ಟಿಯಲ್ಲಿರುವ ಆಕ್ಷೇಪಣೆಗಳನ್ನು ಅಧಿಕಾರಿಗಳು ಇತ್ಯರ್ಥ ಪಡಿಸಿದ ನಂತರದಲ್ಲಿ ಅಧಿಕೃತ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಲಿದೆ.

ಭಾರತದ ಎಷ್ಟು ರಾಜ್ಯಗಳಲ್ಲಿ ಎಸ್‌ಐಆರ್‌ ಪೂರ್ಣ ?

ಭಾರತದ ದೇಶದಲ್ಲಿ ಒಟ್ಟು ಮೂರು ಹಂತಗಳಲ್ಲಿ ಚುನಾವಣಾ ಆಯೋಗ ಎಸ್ಐಆರ್‌ ಪ್ರಕ್ರಿಯೆಯನ್ನು ಆರಂಭಿಸುತ್ತಿದೆ.

  • ಎಸ್‌ಐಆರ್‌ ಮೊದಲ ಹಂತ (SIR Phase I): ಭಾರತದಲ್ಲಿ ಮೊದಲ ಹಂತದಲ್ಲ ಮತದಾರರ ಪಟ್ಟಿಯನ್ನು ಬಿಹಾರದಲ್ಲಿ ಪ್ರಾಯೋಗಿಕವಾಗಿ ಆರಂಭಿಸಲಾಯ್ತು. ಬಿಹಾರದಲ್ಲಿ ಸಕ್ಸಸ್‌ ಆದ ಬೆನ್ನಲ್ಲೇ ಇದೀಗ ಒಂದೊಂದೆ ರಾಜ್ಯದಲ್ಲಿ ಎಸ್‌ಐಆರ್‌ ಕಾರ್ಯ ಆರಂಭಗೊಂಡಿದೆ.

  • ಎಸ್‌ಐಆರ್‌ ಎರಡನೇ ಹಂತ (SIR Phase II): ಕರ್ನಾಟಕ, ಉತ್ತರ ಪ್ರದೇಶ, ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ರಾಜಸ್ಥಾನ, ಮಧ್ಯಪ್ರದೇಶ ಸೇರಿದಂತೆ ಒಟ್ಟು 9 ರಾಜ್ಯ ಹಾಗೂ 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಕಾರ್ಯ ನಡೆಯಲಿದೆ.

  • ಎಸ್‌ಐಆರ್‌ ಮೂರನೇ ಹಂತ (SIR Phase III): ದೆಹಲಿ, ಪಂಜಾಬ್, ಒಡಿಶಾ, ಉತ್ತರಾಖಂಡ ಸೇರಿದಂತೆ ಒಟ್ಟು 16 ರಾಜ್ಯ ಮತ್ತು 3 ಕೇಂದ್ರಾಡಳಿತ ಪ್ರದೇಶಗಳಲ್ಲಿ ಎಸ್‌ಐಆರ್‌ ಕಾರ್ಯ ಆರಂಭಗೊಂಡಿದೆ. (ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಹಿಮಾಚಲ ಪ್ರದೇಶಗಳನ್ನು ಹೊರತುಪಡಿಸಿ, ಭಾರತದ ಬಹುತೇಕ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಈ ಯೋಜನೆಯ ವ್ಯಾಪ್ತಿಗೆ ಬಂದಿವೆ).