ರಾಜ್ಯದ ವಿವಿಧ ಭಾಗಗಳಲ್ಲಿ ಸುರಿಯುತ್ತಿರುವ ಮುಂಗಾರು ಮಳೆಯ ಹಿನ್ನೆಲೆಯಲ್ಲಿ ಪ್ರಮುಖ ಜಲಾಶಯಗಳಿಗೆ ನೀರಿನ ಹರಿವು ಸ್ಥಿರವಾಗಿ ಏರಿಕೆಯಾಗುತ್ತಿದೆ. ಕಾವೇರಿ, ಕೃಷ್ಣಾ, ತುಂಗಭದ್ರಾ ಹಾಗೂ ಶರಾವತಿ ಜಲಾನಯನ ಪ್ರದೇಶಗಳ ಪ್ರಮುಖ ಡ್ಯಾಂಗಳಲ್ಲಿನ ಇಂದಿನ ಜಲಸ್ಥಿತಿ, ಒಳಹರಿವು ಮತ್ತು ಹೊರಹರಿವಿನ ಆಗಸ್ಟ್ 22ರ ಬೆಳಗಿನ ವಿವರಗಳು ಲಭ್ಯವಾಗಿವೆ.
ಕೆಆರ್‌ಎಸ್ ಜಲಾಶಯ:
ಮಂಡ್ಯ ಜಿಲ್ಲೆಯ ಕೆಆರ್‌ಎಸ್ ಜಲಾಶಯದ ಗರಿಷ್ಠ ಮಟ್ಟ 124.80 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 108.80 ಅಡಿಗಳಿಗೆ ತಲುಪಿದೆ. ಪ್ರಸ್ತುತ ಜಲಾಶಯಕ್ಕೆ 1,395 ಕ್ಯೂಸೆಕ್ ಒಳಹರಿವಿದ್ದು, 3,734 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 49.452 ಟಿಎಂಸಿ ಗರಿಷ್ಠ ಸಂಗ್ರಹ ಸಾಮರ್ಥ್ಯ ಹೊಂದಿರುವ ಕೆಆರ್‌ಎಸ್‌ನಲ್ಲಿ ಪ್ರಸ್ತುತ 30.532 ಟಿಎಂಸಿ ನೀರು ಸಂಗ್ರಹವಾಗಿದೆ.
ತುಂಗಭದ್ರಾ ಜಲಾಶಯ:
ವಿಜಯನಗರದ ತುಂಗಭದ್ರಾ ಜಲಾಶಯದ ಗರಿಷ್ಠ ಮಟ್ಟ 1,633.00 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 1,630.20 ಅಡಿಗೆ ತಲುಪಿದೆ. ಜಲಾಶಯಕ್ಕೆ 8,475 ಕ್ಯೂಸೆಕ್ ಒಳಹರಿವಿದ್ದು, 8,143 ಕ್ಯೂಸೆಕ್ ನೀರನ್ನು ಹೊರಗೆ ಹರಿಸಲಾಗುತ್ತಿದೆ. 105.788 ಟಿಎಂಸಿ ಗರಿಷ್ಠ ಸಾಮರ್ಥ್ಯದ ಡ್ಯಾಂನಲ್ಲಿ ಈಗ 94.819 ಟಿಎಂಸಿ ನೀರಿದೆ.
ಆಲಮಟ್ಟಿ ಜಲಾಶಯ:
ಉತ್ತರ ಕರ್ನಾಟಕ ಭಾಗದ ಆಲಮಟ್ಟಿ ಜಲಾಶಯದ ಗರಿಷ್ಠ ಮಟ್ಟ 519.60 ಮೀಟರ್ ಆಗಿದ್ದು, ಇಂದಿನ ಜಲಮಟ್ಟ 519.44 ಮೀಟರ್‌ಗೆ ತಲುಪಿದೆ. ಇಲ್ಲಿಗೆ 40,245 ಕ್ಯೂಸೆಕ್ ಒಳಹರಿವಿದ್ದರೆ, 44,157 ಕ್ಯೂಸೆಕ್ ನೀರನ್ನು ಹೊರಗೆ ಬಿಡಲಾಗುತ್ತಿದೆ. ಅದೇ ರೀತಿ ಬಸವಸಾಗರ ಜಲಾಶಯದ ಗರಿಷ್ಠ ಮಟ್ಟ 492.25 ಮೀಟರ್ ಆಗಿದ್ದು, ಇಂದಿನ ಮಟ್ಟ 492.15 ಮೀಟರ್ ತಲುಪಿದೆ. ಜಲಾಶಯಕ್ಕೆ 42,000 ಕ್ಯೂಸೆಕ್ ಒಳಹರಿವು ಹಾಗೂ 32,000 ಕ್ಯೂಸೆಕ್ ಹೊರಹರಿವು ದಾಖಲಾಗಿದೆ.
ಲಿಂಗನಮಕ್ಕಿ ಜಲಾಶಯ:
ಇನ್ನು ಮಲೆನಾಡು ಭಾಗದ ಲಿಂಗನಮಕ್ಕಿ ಜಲಾಶಯದ ಗರಿಷ್ಠ ಮಟ್ಟ 1,819.00 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 1,796.00 ಅಡಿಗೆ ತಲುಪಿದೆ. ಜಲಾಶಯಕ್ಕೆ 7,790 ಕ್ಯೂಸೆಕ್ ಒಳಹರಿವು ದಾಖಲಾಗಿದೆ. ಕಳೆದ ವರ್ಷ ಇದೇ ದಿನ ಜಲಮಟ್ಟ 1,816.80 ಅಡಿ ಇತ್ತು. ಭದ್ರಾ ಜಲಾಶಯದ ಗರಿಷ್ಠ ಮಟ್ಟ 186 ಅಡಿಗಳಾಗಿದ್ದು, ಇಂದಿನ ನೀರಿನ ಮಟ್ಟ 174 ಅಡಿ 11 ಇಂಚಿಗೆ ತಲುಪಿದೆ. ಜಲಾಶಯಕ್ಕೆ 4,510 ಕ್ಯೂಸೆಕ್ ಒಳಹರಿವಿದ್ದು, 205 ಕ್ಯೂಸೆಕ್ ಹೊರಹರಿವಿದೆ. 71.535 ಟಿಎಂಸಿ ಸಾಮರ್ಥ್ಯದ ಭದ್ರಾದಲ್ಲಿ ಪ್ರಸ್ತುತ 58.284 ಟಿಎಂಸಿ ನೀರು ಸಂಗ್ರಹವಾಗಿದೆ.