ಮತದಾರರ ಪಟ್ಟಿ ಪರಿಷ್ಕರಣೆ ಚುರುಕು : 43 ಲಕ್ಷ ಮತದಾರರಿಗೆ ನೋಟಿಸ್, 2 ದಿನದೊಳಗೆ ದಾಖಲೆ ಸಲ್ಲಿಕೆ ಕಡ್ಡಾಯ
ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರ ದಾಖಲೆಗಳಲ್ಲಿ ವ್ಯತ್ಯಾಸವಿದ್ದು, ಇನ್ನು 23 ಲಕ್ಷಕ್ಕೂ ಅಧಿಕ ಜನರ ಮ್ಯಾಪಿಂಗ್ ಬಾಕಿ ಉಳಿದಿದೆ.
ಬೆಂಗಳೂರು : ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ಮತದಾರರ ಪಟ್ಟಿಯ ಸಮಗ್ರ ತಪಾಸಣೆ ಪ್ರಕ್ರಿಯೆಯ ಅಂಗವಾಗಿ, ಸರಿಸುಮಾರು 43.80 ಲಕ್ಷ ಮತದಾರರಿಗೆ ನೋಟಿಸ್ ನೀಡಲು ಮುಖ್ಯ ಚುನಾವಣಾ ಆಯೋಗವು ಎಲ್ಲಾ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.
ಮತದಾರರ ಅರ್ಜಿಯಲ್ಲಿ ಕಂಡುಬಂದಿರುವ ತಪ್ಪು ಮಾಹಿತಿ, ಹೆಸರುಗಳ ವ್ಯತ್ಯಾಸ ಹಾಗೂ ಮ್ಯಾಪಿಂಗ್ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬೆನ್ನಲ್ಲೇ, ಆಗಸ್ಟ್ 24ರಿಂದ ಬೂತ್ ಮಟ್ಟದ ಅಧಿಕಾರಿಗಳು ನೇರವಾಗಿ ಮನೆ ಮನೆಗೆ ತೆರಳಿ ಈ ನೋಟಿಸ್‌ಗಳನ್ನು ತಲುಪಿಸಲಿದ್ದಾರೆ.
ಸಾಫ್ಟ್‌ವೇರ್ ಮೂಲಕ ಮತದಾರರ ದತ್ತಾಂಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಹೆಸರು ಅದಲು-ಬದಲು, ವಿಳಾಸದ ಗೊಂದಲ ಮತ್ತು ಜನನ ವಿವರಗಳಲ್ಲಿನ ತಪ್ಪುಗಳು ಸೇರಿದಂತೆ ಒಟ್ಟು ಒಂಬತ್ತು ರೀತಿಯ ಪ್ರಮುಖ ನ್ಯೂನತೆಗಳು ಪತ್ತೆಯಾಗಿವೆ.
ಆಯೋಗದ ಲೆಕ್ಕಾಚಾರದ ಪ್ರಕಾರ, ರಾಜ್ಯದ ಒಟ್ಟು 5.54 ಕೋಟಿ ನೋಂದಾಯಿತ ಮತದಾರರಲ್ಲಿ ಸುಮಾರು 20 ಲಕ್ಷಕ್ಕೂ ಹೆಚ್ಚು ಜನರ ದಾಖಲೆಗಳಲ್ಲಿ ವ್ಯತ್ಯಾಸವಿದ್ದು, ಇನ್ನು 23 ಲಕ್ಷಕ್ಕೂ ಅಧಿಕ ಜನರ ಮ್ಯಾಪಿಂಗ್ ಬಾಕಿ ಉಳಿದಿದೆ. ಹೀಗಾಗಿ, ಅರ್ಹ ನಾಗರಿಕರ ಹೆಸರುಗಳು ಅಂತಿಮ ಪಟ್ಟಿಯಿಂದ ಕೈಬಿಟ್ಟು ಹೋಗಬಾರದು ಎಂಬ ಉದ್ದೇಶದಿಂದ ಈ ದಾಖಲೆ ಸಲ್ಲಿಕೆಯ ಅವಕಾಶ ನೀಡಲಾಗುತ್ತಿದೆ.
ನೋಟಿಸ್ ತಲುಪಿಸುವಾಗ ಮತ್ತು ಮತಗಟ್ಟೆಯಲ್ಲಿ ಪರಿಶೀಲಿಸುವಾಗ ಅಧಿಕಾರಿಗಳು ಮತದಾರರ ಸಹಿ ಹಾಗೂ ಫೋಟೋವನ್ನು ಕಡ್ಡಾಯವಾಗಿ ಸಂಗ್ರಹಿಸಲಿದ್ದಾರೆ. ಇದಲ್ಲದೆ, ಸಾರ್ವಜನಿಕರ ಅನುಕೂಲಕ್ಕಾಗಿ ನೋಟಿಸ್‌ನಲ್ಲಿರುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಆನ್‌ಲೈನ್ ಮೂಲಕವೇ ದಾಖಲೆಗಳನ್ನು ಅಪ್‌ಲೋಡ್ ಮಾಡಲು ವ್ಯವಸ್ಥೆ ಕಲ್ಪಿಸಲಾಗಿದೆ.
ನೋಟಿಸ್ ಪಡೆದವರು ಸೆಪ್ಟೆಂಬರ್ ೨೩ರ ಒಳಗಾಗಿ ಆಧಾರ್ ಕಾರ್ಡ್ ಸೇರಿದಂತೆ ಆಯೋಗ ಸೂಚಿಸಿರುವ 11 ಮಾನ್ಯ ದಾಖಲೆಗಳಲ್ಲಿ ಒಂದನ್ನು ಸಲ್ಲಿಸುವುದು ಕಡ್ಡಾಯವಾಗಿದೆ. ಒಂದು ವೇಳೆ ನಿಗದಿತ ಅವಧಿಯಲ್ಲಿ ದಾಖಲೆ ಸಲ್ಲಿಸದಿದ್ದರೆ ಅಥವಾ ಅವುಗಳು ಅಸ್ಪಷ್ಟವಾಗಿದ್ದರೆ ಅಂತಹ ಮತದಾರರ ಹೆಸರುಗಳನ್ನು ಅಂತಿಮ ಪಟ್ಟಿಯಿಂದ ತೆಗೆದುಹಾಕುವ ಅಧಿಕಾರ ಚುನಾವಣಾ ಅಧಿಕಾರಿಗಳಿಗೆ ಇರಲಿದೆ.
Topics
ಸಂಬಂಧಿತ ಸುದ್ದಿಗಳು
karnataka
ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿ ಮತ್ತು ಮಲೆನಾಡಿಗೆ ಮತ್ತೆ ವರುಣನ ಆಘಾತ
karnataka
Gruhalakshmi Big Update : ಗೃಹಲಕ್ಷ್ಮೀ ಫಲಾನುಭವಿಗಳಿಗೆ ಬಿಗ್ ಅಪ್ಡೇಟ್ : ಯೋಜನೆ ಮರುಪರಿಶೀಲನೆಗೆ ಹೊಸ ಆ್ಯಪ್
karnataka
ರಾಜ್ಯದಲ್ಲಿ ಮತ್ತೆ ಮಳೆ ಅಬ್ಬರ: ಕರಾವಳಿ, ಮಲೆನಾಡು ನಡುಗಿಸಿದ ವರುಣನ ಆರ್ಭಟ!
karnataka

