Kannada News Next

mangaluru

MRPL Boiler Blast : ಬೆಂಕಿಯ ಮಳೆ ಸುರಿಸುತ್ತೇನೆಂದ ದೈವ ? ಕಾಂತೇರಿ ಜುಮಾದಿ ನುಡಿ ವೈರಲ್

ಬಜಪೆ ಸಮೀಪದಲ್ಲಿ ಎಸ್‌ಇಝಡ್ (SEZ) ವ್ಯಾಪ್ತಿಗೆ ಒಳಪಡುವ ನೆಲ್ಲಿದಡಿಯಲ್ಲಿ ಸುಮಾರು 800 ವರ್ಷಗಳಿಗೂ ಹಳೆಯದಾಗಿರುವ ಇತಿಹಾಸ ಪ್ರಸಿದ್ದ ಕಾಂತೇರಿ ಜುಮಾದಿ ದೈವಸ್ಥಾನ ಇದೆ.

By Arun Gundmi | ಅರುಣ್‌ ಗುಂಡ್ಮಿ Editor-in-Chief
mrpl boiler blast jumadi divine warning viral

ಮಂಗಳೂರು: ಮಂಗಳೂರು ರಿಫೈನರಿ ಅಂಡ್ ಪೆಟ್ರೋ ಕೆಮಿಕಲ್ಸ್ ಲಿಮಿಟೆಡ್ (MRPL)ನ ಸುರತ್ಕಲ್‌ ಬಳಿಯಲ್ಲಿರುವ ಕೋಕರ್‌ ಹೈಡ್ರೋ ಟ್ರೀಟರ್‌ ಘಟಕದಲ್ಲಿ ಸಂಭವಿಸಿದ್ದ ಬಾರೀ ಸ್ಪೋಟದ ಬೆನ್ನಲ್ಲೇ ಇದೀಗ ದೈವದ ಎಚ್ಚರಿಕೆಯ ನುಡಿ ಬಾರೀ ವೈರಲ್‌ ಆಗಿದೆ. ಕಾಂತೇರಿ ಜುಮಾದಿ ದೈವದ ಹಿಂದಿನ ಎಚ್ಚರಿಕೆಯ ನುಡಿ ಸಾಮಾಜಿಕ ಜಾಲತಾಣದಲ್ಲಿ ಬಾರೀ ಚರ್ಚೆಯನ್ನು ಹುಟ್ಟುಹಾಕಿದೆ.

ಸೆಪ್ಟೆಂಬರ್‌ 30ರಂದು ಮಧ್ಯಾಹ್ನ 12.30ರ ಸುಮಾರಿಗೆ ಎಂಆರ್‌ಪಿಎಲ್‌ ಘಟಕದಲ್ಲಿ ಭಾರೀ ಸ್ಪೋಟ ಕೇಳಿಬಂದಿತ್ತು. ಘಟನೆಯಲ್ಲಿ ಓರ್ವ ಕಾರ್ಮಿಕ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದರು. ಇಂತಹದ್ದೋಂದು ಸ್ಪೋಟಕ್ಕೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಅನ್ನೋ ಆರೋಪ ಕೇಳಿಬರುತ್ತಿದೆ.

ಬೆಂಕಿಯ ಮಳೆ ಸುರಿಸ್ತೇನೆ ಎಂದ ಕಾಂತೇರಿ ಜುಮಾದಿ ದೈವ

ಮಂಗಳೂರು ನಗರದ ಹೊರವಲಯದ ಬಜಪೆ ಸಮೀಪದಲ್ಲಿ ಎಸ್‌ಇಝಡ್ (SEZ) ವ್ಯಾಪ್ತಿಗೆ ಒಳಪಡುವ ನೆಲ್ಲಿದಡಿಯಲ್ಲಿ ಸುಮಾರು 800 ವರ್ಷಗಳಿಗೂ ಹಳೆಯದಾಗಿರುವ ಇತಿಹಾಸ ಪ್ರಸಿದ್ದ ಕಾಂತೇರಿ ಜುಮಾದಿ ದೈವಸ್ಥಾನ ಇದೆ.

ಎಸ್ಇಝಡ್‌ಗೆ ಭೂಮಿಯನ್ನು ಸ್ವಾಧೀನ ಪಡೆಯುವ ವೇಳೆಯಲ್ಲಿ ಸ್ಥಳೀಯರಿಗೆ ನೀಡಿದ ಭರವಸೆಯನ್ನು ಈಡೇರಿಸಿರಲಿಲ್ಲ. ಅಲ್ಲದೇ ದೈವದ ದೈನಂದಿನ ಪೂಜೆ, ವಾರ್ಷಿಕ ನೇಮೋತ್ಸವಕ್ಕೂ ಎಸ್‌ಇಝಡ್‌ ಅಧಿಕಾರಿಗಳು ನಿರ್ಬಂಧ ಹೇರಿದ್ದರು ಅನ್ನೋ ಆರೋಪ ಕೇಳಿಬಂದಿದೆ.

ಕಳೆದ ಐದಾರು ತಿಂಗಳ ಹಿಂದೆ ಇದೇ ಸ್ಥಳದಲ್ಲಿ ನಡೆದ ನೇಮೋತ್ಸವದ ಸಂದರ್ಭದಲ್ಲಿ ಕಾಂತೇರಿ ಜುಮಾದಿ ದೈವದ ಮುಂದೆ ಭಕ್ತರು ಅಳಲು ತೋಡಿಕೊಂಡಿದ್ದರು. ಈ ವೇಳೆಯಲ್ಲಿ, ಕೋಪಗೊಂಡ ಜುಮಾದಿ ದೈವ, ನನ್ನ ಪೂಜೆ ಹಾಗೂ ಜನರಿಗೆ ತೊಂದರೆ ಕೊಟ್ಟರೆ ನಾನು ಬೆಂಕಿಯ ಮಳೆಯನ್ನೇ ಸುರಿಸುತ್ತೇನೆ. ಇದು ನನ್ನ ಮಣ್ಣು ಎಂದಿತ್ತು.

ಇದೀಗ ಎಂಆರ್‌ಪಿಎಲ್‌ನಲ್ಲಿ ನಡೆದಿರುವ ಅಗ್ನಿ ದುರಂತಕ್ಕೂ ದೈವವಾಣಿಗೆ ಸಂಬಂಧ ಇದೆ ಅನ್ನೋ ಕುರಿತು ಸ್ಥಳೀಯರು ಮಾತನಾಡುತ್ತಿದ್ದಾರೆ. ತುಳುನಾಡಿನ ದೈವಗಳ ಕಾರ್ಣಿಕದ ಕಥೆಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ತೆರೆದುಕೊಳ್ಳುತ್ತಿವೆ.