mangaluruಪ್ರಮುಖ ಸುದ್ದಿಗಳು

ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಭೀಕರ ಸ್ಪೋಟ

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದಲ್ಲಿರುವ ಎಂಆರ್‌ಪಿಎಲ್‌ನ ಮೂರನೇ ಹಂತದ ಸ್ಥಾವರದಲ್ಲಿ ಈ ಬಾಯ್ಲರ್‌ ಸ್ಪೋಟದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ.

By Arun Gundmi | ಅರುಣ್‌ ಗುಂಡ್ಮಿ · Editor-in-Chief

1 min read

WhatsAppPost
MRPL Blast Today Major Updates
MRPL Blast Today Major Updates

ಮಂಗಳೂರು : ಮಂಗಳೂರು ನಗರದ ಹೊರವಲಯದ ಜೋಕಟ್ಟೆ ಪ್ರದೇಶದಲ್ಲಿರುವ ಮಂಗಳೂರು ರಿಫೈನರಿ ಆಂಡ್‌ ಪೆಟ್ರೋ ಕೆಮಿಕಲ್ಸ್‌ ಲಿಮಿಟೆಡ್‌ ಘಟಕದಲ್ಲಿ ಭೀಕರ ಸ್ಪೋಟವೊಂದು ಸಂಭವಿಸಿದೆ. ಘಟನೆಯಿಂದಾಗಿ ಪರಿಸರದಲ್ಲಿ ದಟ್ಟ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ನಗರದ ಹೊರವಲಯದಲ್ಲಿರುವ ಎಂಆರ್‌ಪಿಎಲ್‌ನ ಮೂರನೇ ಹಂತದ ಸ್ಥಾವರದಲ್ಲಿ ಈ ಬಾಯ್ಲರ್‌ ಸ್ಪೋಟದಿಂದ ಈ ಘಟನೆ ನಡೆದಿದೆ ಎಂದು ಶಂಕಿಸಲಾಗುತ್ತಿದೆ. ಸ್ಪೋಟದಿಂದಾಗಿ ದಟ್ಟ ಬೆಂಕಿ ಹಾಗೂ ಹೊಗೆ ಆವರಿಸಿಕೊಂಡಿದೆ. ಜೋಕಟ್ಟೆ ಸುತ್ತಮುತ್ತಲಿರುವ ಬಾಳ, ಸುರತ್ಕಲ್‌, ಖಾನ ಮುಂತಾದ ಪ್ರದೇಶಗಳಿಗೂ ದಟ್ಟ ಹೊಗೆ ಆವರಿಸಿದೆ.

ಮಂಗಳೂರು ನಗರ, ಬಜಪೆ ಸುತ್ತಮುತ್ತಿನ ಪ್ರದೇಶಗಳಿಗೂ ಸ್ಪೋಟದ ಸದ್ದು ಕೇಳಿದ್ದು, ಸ್ಥಳದಲ್ಲಿ ಸದ್ಯ ಆತಂಕದ ಸ್ಥಿತಿ ನಿರ್ಮಾಣವಾಗಿದೆ. ಜೋಕಟ್ಟೆ, ಖಾನ, ಕಾಟಿಪಳ್ಳ ಮುಂತಾದ ಪ್ರದೇಶಗಳಲ್ಲಿನ ಮನೆ, ಅಂಗನವಾಡಿ ಕೇಂದ್ರಗಳ ಕಿಟಕಿ ಗಾಜುಗಳು ಒಡೆದು ಹೋಗಿವೆ ಎನ್ನಲಾಗುತ್ತಿದೆ.

ಎಂಆರ್‌ಪಿಎಲ್‌ ಒಳಭಾಗದಲ್ಲಿ ಸದ್ಯ ರಕ್ಷಣಾ ಕಾರ್ಯ ಮುಂದುವರಿದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸುತ್ತಿದ್ದು, ಎಂಆರ್‌ಪಿಎಲ್‌ನ ರಕ್ಷಣಾ ತಂಡ ಈಗಾಗಲೇ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದೆ. ಆದರೆ ಈ ಘಟನೆಯಲ್ಲಿ ಎಷ್ಟು ಮಂದಿ ಗಾಯಗೊಂಡಿದ್ದಾರೆ ಅನ್ನೋ ಮಾಹಿತಿ ಇನ್ನೂ ಲಭ್ಯವಾಗಿಲ್ಲ.

Topics

ಸಂಬಂಧಿತ ಸುದ್ದಿಗಳು