ಸಾಲದ ಹಣ ಕೇಳಿದ್ದಕ್ಕೆ ಅಮಾನವೀಯ ಕೃತ್ಯ: ಯುವಕನನ್ನು ಮರಕ್ಕೆ ಕಟ್ಟಿ ಥಳಿತ
ಪಡೆದ ಸಾಲದ ಹಣ ವಾಪಸ್ ಕೇಳಲು ಹೋದ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
By Meghana Pranuth | ಮೇಘನಾ ಪ್ರಣೂತ್
1 min read
ಕುಂದಾಪುರ : ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನಲ್ಲಿ ಯುವಕನೊಬ್ಬನ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಯುವತಿ ಪಡೆದ ಸಾಲದ ಹಣ ವಾಪಸ್ ಕೇಳಲು ಹೋದ ಯುವಕನನ್ನು ಮರಕ್ಕೆ ಕಟ್ಟಿಹಾಕಿ ಥಳಿಸಿದ ಘಟನೆ ಬೆಳ್ಳಾಲ ಗ್ರಾಮದಲ್ಲಿ ನಡೆದಿದೆ.
ಒಂದೇ ಸಂಸ್ಥೆಯಲ್ಲಿ ಜೊತೆಯಾಗಿ ಕೆಲಸ ಮಾಡುತ್ತಿದ್ದ ಸನತ್ ಮತ್ತು ಯುವತಿಯ ನಡುವೆ ಪರಿಚಯವಿತ್ತು. ಯುವತಿಯು ಸನತ್ನಿಂದ 50 ಸಾವಿರ ರೂಪಾಯಿ ಸಾಲ ಪಡೆದುಕೊಂಡಿದ್ದಳು. ಆದರೆ ಹಣ ಪಡೆದ ಕೆಲವೇ ದಿನಗಳಲ್ಲಿ ಯುವತಿ ಕೆಲಸ ತೊರೆದಿದ್ದಾಳೆ ಎನ್ನಲಾಗುತ್ತಿದೆ.
ಕೆಲಸ ಬಿಟ್ಟ ನಂತರ ಸನತ್ ಕರೆಗಳನ್ನು ಸ್ವೀಕರಿಸದೆ ಯುವತಿ ಸತಾಯಿಸಲು ಶುರುಮಾಡಿದ್ದಳು. ಕೊನೆಗೆ ಸನತ್ ತನ್ನ 50 ಸಾವಿರ ರೂಪಾಯಿ ಹಣ ವಾಪಸ್ ನೀಡುವಂತೆ ಒತ್ತಾಯಿಸಿದಾಗ, ಹಣ ಕೊಡುವುದಾಗಿ ನಂಬಿಸಿ ಮನೆಗೆ ಬರುವಂತೆ ಕರೆಸಿಕೊಂಡಿದ್ದಾಳೆ. ಯುವತಿಯ ಮಾತು ನಂಬಿ ಮನೆಗೆ ತೆರಳಿದ್ದ ಸನತ್ನನ್ನು ಯುವತಿಯ ಕುಟುಂಬಸ್ಥರು ಮರಕ್ಕೆ ಕಟ್ಟಿಹಾಕಿ ಅಮಾನವೀಯವಾಗಿ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಇದೀಗ ಯುವತಿ ಸನತ್ ವಿರುದ್ದ ಲೈಂಗಿಕ ದೌರ್ಜನ್ಯ ಹಾಗೂ ಅಟ್ರಾಸಿಟಿ ಕಾಯ್ದೆಯಡಿ ದೂರು ನೀಡಿದ್ದಾಳೆ. ಇತ್ತ ಹಲ್ಲೆಗೊಳಗಾದ ಸನತ್ ಕೂಡ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರತಿಯಾಗಿ ದೂರು ದಾಖಲಿಸಿದ್ದಾನೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬೈಂದೂರು ಪೊಲೀಸರು ದೂರುಗಳನ್ನು ಸ್ವೀಕರಿಸಿ, ತನಿಖೆ ಆರಂಭಿಸಿದ್ದಾರೆ.
Topics
ಸಂಬಂಧಿತ ಸುದ್ದಿಗಳು
udupi
ಕಾರ್ಕಳ-ಮೂಡುಬಿದಿರೆ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮಾಜಿ ಸಚಿವ ರಮಾನಾಥ್ ರೈ ಕಾರಿಗೆ ಬಸ್ ಡಿಕ್ಕಿ
udupi
ಮಣಿಪಾಲ : ಅವಧಿ ಮೀರಿ ಗೇಮ್ಸ್ ಸೆಂಟರ್ ಕಾರ್ಯಾಚರಣೆ, ಎಫ್ಐಆರ್ ದಾಖಲು
udupi
ಉಡುಪಿ: ವಿದ್ಯಾರ್ಥಿಗಳಿಗೆ MDMA ಡ್ರಗ್ಸ್ ಮಾರಾಟ ಮಾಡುತ್ತಿದ್ದ ಜಾಲ ಭೇದಿಸಿದ ಮಣಿಪಾಲ ಪೊಲೀಸರು; ಇಬ್ಬರ ಬಂಧನ
udupi

